Tuesday, April 1, 2025
ದಕ್ಷಿಣ ಕನ್ನಡಸಂತಾಪಸುದ್ದಿ

ರೋಗಿಗಳ ಪ್ರಾಣ ಕಾಪಾಡುವ ಮಂಗಳೂರಿನಲ್ಲಿ ಯುವ ವೈದ್ಯೆ ಕೊರೊನಾಗೆ ಬಲಿ – ಕಹಳೆ ನ್ಯೂಸ್

ಮಂಗಳೂರು : ಕೊರೊನಾ ಅನ್ನೋ ರಕ್ಕಸನ ಆರ್ಭಟ ಮಿತಿ ಮೀರುತ್ತಿದ್ದು, ದಿನೇ ದಿನೇ ಕೋವಿಡ್ ಎಂಬ ಹೆಮ್ಮಾರಿ ರಾಜ್ಯದಲ್ಲಿ ನೂರಾರು ಸಂಖ್ಯೆ ಜನರನ್ನು ತನಗೆ ಬಲಿಯಾಗಿಸಿಕೊಳ್ಳುತ್ತಿದೆ.

ಇದೀಗ ಮಂಗಳೂರಿನಲ್ಲಿ ರೋಗಿಗಳ ಪ್ರಾಣ ಕಾಪಾಡುವ ವೈದ್ಯಯೊಬ್ಬರನ್ನು ಪ್ರಾಣವನ್ನೇ ಬಲಿ ಪಡೆದಿದೆ ಈ ಕೋವಿಡ್ ಅನ್ನೋ ನರ ರಕ್ಕಸ. ಹೌದು.. ಮಂಗಳೂರಿನ ಇಂಡಿಯಾನ ಆಸ್ಪತ್ರೆಯ ಆಡಳಿತಾಧಿಕಾರಿ ಬಶೀರ್ ಅವರ ಮಗಳು ಅದೇ ಆಸ್ಪತ್ರೆಯಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ 27ವರ್ಷದ ಯುವ ವೈದ್ಯೆ ಕೋವಿಡ್ ಪಾಸಿಟಿವ್‌ನಲ್ಲಿ ನಿನ್ನೆ ಬೆಳಗ್ಗೆ 10.30ರ ಸಮಯದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. 8 ತಿಂಗಳ ಹಿಂದೆ ಮದುವೆಯಾಗಿ ಗಂಡ– ಹೆಂಡತಿ ಅದೇ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ನೂರಾರು ರೋಗಿಗಳ ಜೀವ ಕಾಪಾಡುತ್ತಿದ್ದ ವೈದ್ಯೆಯನ್ನೇ ನಿನ್ನೆ ಮಹಾಮಾರಿ ಬಲಿ ಪಡೆದುಕೊಂಡಿದೆ. ಇನ್ನು ಅವರ ಮೃತದೇಹವನ್ನು ಅವರ ಸ್ವಂತ ಊರಾದ ಕೇರಳದ ತಲಶೇರಿಗೆ ಕೊಂಡು ಅಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ