ನಾಪತ್ತೆಯಾಗಿದ್ದ ಖ್ಯಾತ ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ ಪತಿ, ಪೆರ್ಡೂರು ಮೇಳದ ಕಲಾವಿದ ಕಡಬಾಳ ಉದಯ ಹೆಗಡೆ ಬೆಂಗಳೂರಿನಲ್ಲಿ ಪತ್ತೆ – ಕಹಳೆ ನ್ಯೂಸ್
ಕೋಟ: ಖ್ಯಾತ ಯಕ್ಷಗಾನ ಕಲಾವಿದ ಕಡಬಾಳ ಉದಯ ಹೆಗಡೆ ಎ.21ರಂದು ನಾಪತ್ತೆಯಾಗಿದ್ದು ಇದೀಗ ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲದಿಂದ ತಿಳಿದು ಬಂದಿದೆ.
ಯಡಾಡಿ-ಮತ್ಯಾಡಿ ಗ್ರಾಮದ ಗುಡ್ಡೆಯಂಗಡಿ ಪ್ರಧಾನ ನಗರದಲ್ಲಿ ವಾಸವಾಗಿದ್ದ ಹೆಗಡೆಯವರು ಎ.21 ರಂದು ಸಂಜೆ ಸುಮಾರು 6ಗಂಟೆಗೆ ಮನೆಯಿಂದ ಯಕ್ಷಗಾನ ಪ್ರದರ್ಶನಕ್ಕೆಂದು ತೆರಳಿದವರು ಮತ್ತೆ ವಾಪಸಾಗಿರಲಿಲ್ಲ ಹಾಗೂ ಮೊಬೈಲ್ ಗೆ ಕರೆ ಮಾಡಿದಾಗ ಸಂಪರ್ಕ ಸಾಧ್ಯವಾಗಿರುವುದಿಲ್ಲ.
ಈ ಬಗ್ಗೆ ಕಡಬಾಳರ ಪತ್ನಿ, ಕಲಾವಿದೆ ಅಶ್ವಿನಿ ಹೆಗಡೆ ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆಗಿಳಿದ ಪೊಲೀಸರು ಉದಯ ಹೆಗಡೆಯವರು ಬೆಂಗಳೂರಿನ ಸಂಬಂಧಿಯ ಮನೆಯಲ್ಲಿ ವಾಸವಿರುವುದು ಪತ್ತೆ ಹಚ್ಚಿದ್ದಾರೆ. ನಾಪತ್ತೆ ಕಾರಣ ಹೆಚ್ಚಿನ ತನಿಖೆಯಿಂದ ಇನ್ನಷ್ಟೇ ತಿಳಿದುಬರಬೇಕಿದೆ.