ಮಂಗಳೂರು: ಲಸಿಕೆಗಾಗಿ ಮುಗಿಬಿದ್ದ ಜನ – ವಾಕ್ಸಿನ್ ಕೊರತೆ ಬಗ್ಗೆ ಅಸಮಾಧಾನ , ಗೊಂದಲದ ವಾತಾವರಣ-ಕಹಳೆ ನ್ಯೂಸ್
ಕೊರೊನಾ ಪ್ರಕರಣ ಹೆಚ್ಚುತ್ತಿರುವಂತೆಯೇ ಕೋವಿಡ್ ಲಸಿಕೆ ಪಡೆಯಲು ನಗರದ ವೆನ್ಲಾಕ್ ಆಸ್ಪತ್ರೆಗೆ ಜನ ಮುಗಿಬಿದ್ದಿದ್ದ ಘಟನೆ ಏ.29 ರ ಗುರುವಾರ ನಡೆದಿದೆ.
ಕೊರೊನಾ ಪ್ರಕರಣ ಹೆಚ್ಚುತ್ತಿರುವಂತೆಯೇ ಕೋವಿಡ್ ಲಸಿಕೆ ಪಡೆಯಲು ನಗರದ ವೆನ್ಲಾಕ್ ಆಸ್ಪತ್ರೆಗೆ ಜನ ಮುಗಿಬಿದ್ದಿದ್ದ ಘಟನೆ ಏ.29 ರ ಗುರುವಾರ ನಡೆದಿದೆ.
ಕೋವಿಶೀಲ್ಡ್ ಲಸಿಕೆಯೂ 2ನೇ ಡೋಸ್ ಹಾಕಲು ಬಂದವರಿಗೆ ಮಾತ್ರ ಟೋಕನ್ ವಿತರಿಸಲಾಗುತ್ತಿದೆ. ಜಿಲ್ಲಾಧಿಕಾರಿ ಬಂದ ನಂತರ ಮೊದಲ ಲಸಿಕೆ ನೀಡುತ್ತೇವೆ ಎಂದು ಆಸ್ಪತ್ರೆಯ ಸಿಬ್ಬಂದಿಗಳು ತಿಳಿಸಿದ್ದು ಹೀಗಾಗಿ ಲಸಿಕೆ ಪಡೆಯಲೆಂದು ಸೇರಿದ್ದ ಜನರು ದ.ಕ ಜಿಲ್ಲಾಡಳಿತ ದ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳದಲ್ಲಿ ಗದ್ದಲ ಗೊಂದಲದ ವಾತಾವರಣ ಸೃಷ್ಟಿಯಾಗಿದೆ.
ಹೆಚ್ಚಿನ ಸಾವು ನೋವು, ಕೊರೊನಾ ಸೋಂಕಿನ ವ್ಯಾಪಕ ಹರಡುವಿಕೆಯಿಂದ ಹೆಚ್ಚಿನ ಮಂದಿ ಲಸಿಕೆ ತೆಗೆದುಕೊಳ್ಳಲು ಆಕಾಂಕ್ಷೆ ವ್ಯಕ್ತಪಡಿಸಿ ಒಮ್ಮೆಲೆ ಮುಗಿಬೀಳುತ್ತಿರುವ ಕಾರಣ ಹೆಚ್ಚಿನ ಲಸಿಕೆಯ ಅವಶ್ಯಕತೆ ಕಂಡುಬರುತ್ತಿದೆ.