Recent Posts

Monday, April 14, 2025
ಬೆಂಗಳೂರುರಾಜ್ಯಸುದ್ದಿ

Breaking News : ರಾಜ್ಯದಲ್ಲಿ ಇಂದು ( ಶುಕ್ರವಾರ ) ಬರೋಬ್ಬರಿ 48,296 ಮಂದಿಯಲ್ಲಿ ಕೊರೋನಾ ಪಾಸಿಟಿವ್ ; 217 ಮಂದಿ ಬಲಿ – ಕಹಳೆ ನ್ಯೂಸ್

ಬೆಂಗಳೂರು, ಏ. 30 : ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ತೀವ್ರ ಹೆಚ್ಚಳವಾಗಿದ್ದು, ಶುಕ್ರವಾರದಂದು ಇದೇ ಮೊದಲ ಬಾರಿಗೆ ಎಂಬಂತೆ 48,296 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಆ ಮೂಲಕ ರಾಜ್ಯದಲ್ಲಿ ಪತ್ತೆಯಾದ ಒಟ್ಟು ಸೋಂಕಿತರ ಸಂಖ್ಯೆ 15,23,142ಕ್ಕೆ ತಲುಪಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ರಾಜ್ಯದಲ್ಲಿ ಶುಕ್ರವಾರದಂದು 217 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 15,523ಕ್ಕೆ ತಲುಪಿದೆ. ಈ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯದಲ್ಲಿ ಇಂದು 14,884 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 11,24,909ಕ್ಕೆ ತಲುಪಿದೆ. ಇನ್ನು 3,82,690 ಸಕ್ರೀಯ ಪ್ರಕರಣಗಳಿವೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ