Sunday, January 19, 2025
ಸುದ್ದಿ

ಗಾಂಧಿ ಮೋದಿಗೆ ಸ್ವಚ್ಛಭಾರತ.!?

ಹೊಸದಿಲ್ಲಿ : ‘1 ಸಾವಿರ ಗಾಂಧಿ, 1 ಲಕ್ಷ ಮೋದಿ ಬಂದರೂ ಸ್ವಚ್ಛ ಭಾರತ ಸಾಧ್ಯವಾಗದು, ಅದು ಸಾಕಾರಗೊಳ್ಳಬೇಕಾದರೆ 125 ಕೋಟಿ ಭಾರತೀಯರ ಸಹಕಾರ ಅಗತ್ಯ’ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೆಹಲಿಯ ವಿಜ್ಞಾನ ಭವನದಲ್ಲಿ ಸೋಮವಾರ ನಡೆದ ಸ್ವಚ್ಛ ಭಾರತ ಮಿಶನ್‌ನಲ್ಲಿ ಮಾತನಾಡಿದ ಪ್ರಧಾನಿ ‘125 ಕೋಟಿ ಭಾರತೀಯರೂ ಸ್ವಚ್ಛ ಭಾರತ ಅಭಿಯಾನವನ್ನು ಅವರ ಹೃದಯಾಂತರಾಳದಿಂದ ಒಪ್ಪಿಕೊಂಡಿದ್ದಾರೆ’ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

‘1 ಸಾವಿರ ಗಾಂಧಿ, 1 ಲಕ್ಷ ಮೋದಿ,ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು , ಅಧಿಕಾರಿಗಳು ಜೊತೆಯಾದರೂ ಸ್ವಚ್ಛ ಭಾರತ ಸಾಧ್ಯವಾಗುವುದಿಲ್ಲ, ಇದಕ್ಕಾಗಿ 125 ಕೋಟಿ ಮಂದಿ ಭಾರತೀಯರು ಕೆಲಸ ಮಾಡಬೇಕಾಗಿದೆ’ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

‘ಭಾರತ ಇಂದು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ನಾವದರಿಂದ ಪಲಾಯನ ಮಾಡುವುದಿಲ್ಲ. ನಾವು ಸವಾಲುಗಳನ್ನು ಎದುರಿಸಿ ಮೆಟ್ಟಿ ನಿಂತು ಯಶಸ್ಸು ಪಡೆಯುತ್ತೇವೆ’ ಎಂದರು.

‘ಅನೇಕ ಸಂಘ ಸಂಸ್ಥೆಗಳು ಸ್ವಚ್ಛತೆಗಾಗಿ ಕೆಲಸ ಮಾಡುತ್ತಿದ್ದು , ನಮ್ಮ ದೇಶವನ್ನು ಸ್ವಚ್ಛತೆಯ ಮೊದಲ ಶ್ರೇಣಿಯಲ್ಲಿ ನೋಡಬೇಕು’ ಎಂದರು.

Leave a Response