Tuesday, January 21, 2025
ಆರೋಗ್ಯದಕ್ಷಿಣ ಕನ್ನಡಸುದ್ದಿ

‘ಪಾಸಿಟಿವ್ ಬಂದ ಎಲ್ಲರಿಗೂ ಆಯುಷ್ಮಾನ್ ಯೋಜನೆಯಲ್ಲಿ ಉಚಿತ ಚಿಕಿತ್ಸೆ ಇಲ್ಲ’ ; ಆಯುಷ್ಮಾನ್ ನೋಡಲ್ ಅಧಿಕಾರಿ ಡಾ.ರತ್ನಾಕರ್ – ಕಹಳೆ ನ್ಯೂಸ್

ಮಂಗಳೂರು, ಮೇ. 06 : ಪಾಸಿಟಿವ್ ಬಂದ ಎಲ್ಲರಿಗೂ ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಉಚಿತ ಚಿಕಿತ್ಸೆ ಇಲ್ಲ. ಐಸಿಯು, ವೆಂಟಿಲೇಟರ್‌ಗೆ ದಾಖಲಾದ ರೋಗಿಗಳಿಗೆ ಮಾತ್ರ ಆಯುಷ್ಮಾನ್ ಉಚಿತ ಚಿಕಿತ್ಸೆ ಲಭ್ಯವಿದೆ ಎಂದು ಆಯುಷ್ಮಾನ್ ನೋಡಲ್ ಅಧಿಕಾರಿ ಡಾ.ರತ್ನಾಕರ್ ಮಾಹಿತಿ ನೀಡಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿಂದೆ ಕೊರೊನಾ ರೋಗಿಗಳ ಪರೀಕ್ಷೆ ಮತ್ತು ಚಿಕಿತ್ಸೆ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿತ್ತು, ಆದರೆ ಈಗ ಆಸ್ಪತ್ರೆಗೆ ದಾಖಲಾದವರಿಗೆ, ಅಥವಾ ವೆಂಟಿಲೇಟರ್ ಆಗಿರುವ ರೋಗಿಗಳು ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯದ ಯೋಜನೆಯನ್ನು ಪಡೆಯಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ದಾಯ್ಜಿವಲ್ಡ್ ಜೊತೆ ಮಾತನಾಡಿದ ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆಯ ನೋಡಲ್ ಅಧಿಕಾರಿ ಡಾ.ರತ್ನಾಕರ್, “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಕೊರೊನಾ ರೋಗಿಗಳ ಚಿಕಿತ್ಸೆಗಾಗಿ 80 ಖಾಸಗಿ ಆಸ್ಪತ್ರೆಗಲ್ಲಿ ಚಿಕಿತ್ಸೆ ನೀಡಲಿದ್ದು, ಈಗೀನ ಸ್ಥಿತಿಯು ತೀವ್ರವಾಗಿದ್ದು, ಐಸಿಯು ಅಥವಾ ವೆಂಟಿಲೇಟರ್‌ಗಳಲ್ಲಿ ರೆಮೆಡೆಸಿವಿರ್ ಬಾಟಲಿ ಸೇರಿದಂತೆ ಉಚಿತವಾಗಿ ಈ ಸೌಲಭ್ಯವನ್ನು ಪಡೆಯಬಹುದು. ಆದರೆ ಕೇವಲ ಕೊರೊನಾ ಪಾಸಿಟಿವ್ ಇದ್ದವರಿಗೆ ಈ ಯೋಜನೆ ಲಭ್ಯವಿರುವುದಿಲ್ಲ” ಎಂದರು.

“ಕಳೆದ ವರ್ಷ ಕೂಡ ಕೊರೊನಾದ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ಜನರು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಪ್ರತಿ ರೋಗಿಗೆ, ನಾವು ಪ್ರತಿದಿನ 5500 ರಿಂದ 6000 ರೂಗಳನ್ನು ಖರ್ಚು ಮಾಡಬೇಕಾಗಿತ್ತು. ಅವರು 10 ದಿನಗಳವರೆಗೆ ಚಿಕಿತ್ಸೆ ಪಡೆಯುತ್ತಾರೆ, ಇದು ಒಂದು ಆರೋಗ್ಯ ಇಲಾಖೆಗೆ ಭಾರಿ ಹೊರೆ. ತೀವ್ರ ಸ್ಥಿತಿಯಲ್ಲಿರುವ ಜನರಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಆಧಾರ್ ಕಾರ್ಡ್ ಅಥವಾ ಇನ್ನಾವುದೇ ಗುರುತಿನ ಚೀಟಿ ಚಿಕಿತ್ಸೆಗೆ ಸಾಕು. ರೋಗಿಗಳು ತೀವ್ರ ರೋಗಲಕ್ಷಣಗಳಿಂದ ಬಳಲುತ್ತಿದ್ದರೆ ಮತ್ತು ಅವರನ್ನು ಐಸಿಯುಗೆ ದಾಖಲಿಸಿದರೆ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯಮಿತ್ರದ ಸಹಾಯದಿಂದ ಆಯುಷ್ಮಾನ್‌ನ ಪ್ರಯೋಜನಗಳನ್ನು ಪಡೆಯಬಹುದು ಎಂದಿದ್ದಾರೆ.

ಇನ್ನು ಆಸ್ಪತ್ರೆ ಅಧಿಕಾರಿಗಳು ಪತ್ರವೊಂದನ್ನು ನೀಡುತ್ತಾರೆ ಮತ್ತು ನಮ್ಮ ಇಲಾಖೆಯಿಂದ ನಾವು ಉಲ್ಲೇಖಿತ ಪತ್ರವನ್ನು ನೀಡುತ್ತೇವೆ, ನಂತರ ರೋಗಿಯು ಸೌಲಭ್ಯವನ್ನು ಆಯುಷ್ಮಾನ್ ಭಾರತ್ ಅಡಿಯಲ್ಲಿ ಉಚಿತವಾಗಿ ಪಡೆಯಬಹುದು ಅವರು ಹೇಳಿದ್ದಾರೆ.