Tuesday, January 21, 2025
ದಕ್ಷಿಣ ಕನ್ನಡಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರವೂ ಸಾವಿರ ದಾಟಿದ ಕೊರೋನಾ ಸೋಂಕಿತರು ; ಐವರು ಕೊರೋನಾಗೆ ಬಲಿ – ಕಹಳೆ ನ್ಯೂಸ್

ಮಂಗಳೂರು, ಮೇ 07 : ದ.ಕ. ಜಿಲ್ಲೆಯಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಗುರುವಾರವೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಗಡಿದಾಟಿದೆ. ಗುರುವಾರದಂದು 1,191 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಬುಧವಾರದಂದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಐನೂರರ ಗಡಿ ದಾಟಿತ್ತು. ಆದರೆ, ಗುರುವಾರದಂದು ಅಲ್ಪ ಇಳಿಕೆಯಾಗಿದೆ. ಗುರುವಾರ ಐದು ಮಂದಿ ಕೊರೋನಾ ಸೋಂಕಿಗೆ ಬಲಿಯಾದ ಬಗ್ಗೆ ವರದಿಯಾಗಿದೆ. ಇನ್ನು ಇಂದು ಜಿಲ್ಲೆಯಲ್ಲಿ 271 ಮಂದಿ‌ ಕೊರೋನಾದಿಂದ‌ ಗುಣಮುಖ ಬಿಡುಗಡೆಗೊಂಡಿರುವ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆ ವರದಿ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲೆಯ ಇಂದಿನ ಕೋವಿಡ್ ರಿಪೋರ್ಟ್:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಪಾಸಿಟಿವ್ ಸಂಖ್ಯೆ

ಜಿಲ್ಲೆಯಲ್ಲಿ ಇಂದು 1,191ಮಂದಿಗೆ ಕೊರೋನಾ ಪಾಸಿಟಿವ್

ಜಿಲ್ಲೆಯಲ್ಲಿ ಇಂದು 271 ಮಂದಿ ಕೊರೋನಾದಿಂದ ಗುಣಮುಖ

ಜಿಲ್ಲೆಯಲ್ಲಿ ಇಂದು ಕೂಡಾ ಕೊರೋನಾಗೆ ಬರೋಬ್ಬರಿ ಐವರು ಬಲಿ

ಕೊರೋನಾಗೆ ಜಿಲ್ಲೆಯಲ್ಲಿ ಈವರೆಗೆ ಬಲಿಯಾದವರ ಸಂಖ್ಯೆ 773ಕ್ಕೆ ಏರಿಕೆ

ದ.ಕ.ಜಿಲ್ಲೆಯಲ್ಲಿ ಈವರೆಗೆ ಒಟ್ಟು 51,536 ಪಾಸಿಟಿವ್ ಕೇಸ್ ಪತ್ತೆ

ಜಿಲ್ಲೆಯಲ್ಲಿ ಒಟ್ಟು 10,246 ಸಕ್ರೀಯ ಪ್ರಕರಣಗಳಿವೆ