Wednesday, January 22, 2025
ಸುದ್ದಿ

ಬೆಡ್‌ಗಾಗಿ ಪರದಾಟ – ಬೆಂಗಳೂರಿನಿಂದ ಮಂಗಳೂರಿಗೆ ತಲುಪಿದ ರೋಗಿ ಸಾವು-ಕಹಳೆ ನ್ಯೂಸ್

ಬೆಂಗಳೂರಿನ ಆಸ್ಪತ್ರೆಗಳಲ್ಲಿ ಬೆಡ್‌ ಹಾಗೂ ಆಂಬುಲೆನ್ಸ್ ದೊರೆಯದ ಹಿನ್ನೆಲೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ತನ್ನ ಪತಿಗೆ ಬೆಡ್‌ನ್ನು ಹುಡುಕುತ್ತಾ ಮಂಗಳೂರಿನಿಂದ ಆಂಬ್ಯುಲೆನ್ಸ್ ಪಡೆದು ಬೆಂಗಳೂರಿನಿಂದ ಮಹಿಳೆಯೊಬ್ಬರು ಮಂಗಳೂರಿಗೆ ಬಂದ ಘಟನೆ ನಡೆದಿದ್ದು, ಆದರೆ ಕೊನೆಗೂ ಮಹಿಳೆ ತನ್ನ ಪತಿಯನ್ನು ಕಳೆದುಕೊಂಡಿದ್ದಾರೆ

ಕೆ.ವಿ.ಪುರಂನ ಅಯ್ಯಪ್ಪನಗರ ನಿವಾಸಿ ಕವಿತಾ ಅವರ ಪತಿ ರವಿಶಂಕರ್ ಅವರು ಬುಧವಾರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಕವಿತಾ ತನ್ನ ಪತಿಯನ್ನು ಪಾಟೀಲ್ ಆಸ್ಪತ್ರೆಗೆ ಕರೆದೊಯ್ದಿದ್ದು ಅಲ್ಲಿ ಆಕ್ಸಿಜನ್‌ ಪಲ್ಸ್‌ 86 ಇರುವ ಕಾರಣ ಬೇರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊತ್ಯುವಂತೆ ಸೂಚಿಸಿದ್ದಾರೆ. ಆದರೆ ಆ ಆಸ್ಪತ್ರೆಯಲ್ಲಿ ಬೆಡ್‌ ಹಾಗೂ ಆ‌ಕ್ಸಿಜನ್‌ ಇಲ್ಲ ಎಂದು ಹೇಳಿದ್ದಾರೆ. ಅಲ್ಲಿಯ ಸಿಬ್ಬಂದಿಗಳು ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದು ಅದರಂತೆ ಮಹಿಳೆ ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಮಾತನಾಡಿದ ಮಹಿಳೆ, ”ಆಂಬುಲೆನ್ಸ್‌ ದೊರೆಯದ ಹಿನ್ನೆಲೆ ನಾನು ನನ್ನ ಪತಿಯನ್ನು ಸ್ಕೂಟರ್‌ನಲ್ಲೇ ಕರೆದೊಯ್ದಿದ್ದೇನೆ. ಹಲವಾರು ಆಸ್ಪತ್ರೆಗಳಿಗೆ ಭೇಟಿ ನೀಡಿದ ನಂತರ ಕೊನೆಗೆ ಬೆಡ್‌ ದೊರೆಯದ ಕಾರಣ ಮನೆಗೆ ವಾಪಾಸ್‌ ಬರಬೇಕಾಯಿತು” ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

”ಬಳಿಕ ಬುಧವಾರ ಮಧ್ಯಾಹ್ನದಿಂದ ಸಂಜೆ 5 ರವರೆಗೆ ನನ್ನ ಪತಿಯ ಆರೋಗ್ಯದಲ್ಲಿ ಸುಧಾರಣೆ ಕಾಣಿಸಿಕೊಂಡಿತು. ಆದರೆ ಸಂಜೆ 6 ರ ಹೊತ್ತಿಗೆ ಮತ್ತೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಆಂಬ್ಯುಲೆನ್ಸ್‌ಗೆ ಕರೆ ಮಾಡಿದೆ. ಆದರೆ ಅವರು ಕಾಯುವಂತೆ ಹೇಳಿದರು. ಸುಮಾರು ಬಾರಿ ಕರೆ ಮಾಡಿದರೂ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪ್ರತಿ ಬಾರಿಯೂ ಕಾಯುವಂತೆ ಹೇಳಿದ್ದಾರೆ. ನಂತರ ನಾನು ನನ್ನ ಸಹೋದರಿಯ ಸಹಾಯದಿಂದ ಮಂಗಳೂರಿನಿಂದ ಆಂಬುಲೆನ್ಸ್ ವ್ಯವಸ್ಥೆ ಮಾಡಿ ರಾತ್ರಿ ನನ್ನ ಪತಿಯನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದೆ. ಆದರೆ ದಾರಿ ಮಧ್ಯೆಯೇ ನನ್ನ ಪತಿ ಸಾವನ್ನಪ್ಪಿದ್ದಾರೆ” ಎಂದು ನೊಂದು ನುಡಿದಿದ್ದಾರೆ. ಹಾಗೆಯೇ ತನ್ನ ಪತಿಯ ಕೊರೊನಾ ವರದಿ ಆ ಬಳಿಕ ಲಭ್ಯವಾಗಿದ್ದು ಕೊರೊನಾ ನೆಗೆಟಿವ್‌ ಆಗಿದೆ ಎಂದು ಕೂಡಾ ಮಹಿಳೆ ತಿಳಿಸಿದ್ದಾರೆ.

ಇನ್ನು ರವಿಶಂಕರ್ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನಿಂದ ಮಂಗಳೂರಿಗೆ ಕರೆತರಲಾಗುತ್ತಿದೆ ಎಂದು ತಿಳಿದ ಯುವ ಕಾಂಗ್ರೆಸ್ ವಾರ್‌ ರೂಂ ತಂಡವು ಅವರಿಗೆ ಸಹಾಯ ಹಸ್ತ ಚಾಚಿದೆ. ಆದರೆ ವೆನ್ಲಾಕ್ ಆಸ್ಪತ್ರೆಗೆ ತಲುಪುವ ಹೊತ್ತಿಗೆ ರವಿಶಂಕರ್ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಇನ್ನು ಮೃತರ ಅಂತ್ಯಕ್ರಿಯೆಗೆ ಬೇಕಾದ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ ತಿಳಿಸಿದ್ದಾರೆ.

ವಾಹನ ವ್ಯವಸ್ಥೆ ಮಾಡಿ ನನ್ನ ಪತಿಯ ಮೃತದೇಹವನ್ನು ಬೆಂಗಳೂರಿಗೆ ಕೊಂಡೊಯ್ಯುವ ಸ್ಥಿತಿಯಲ್ಲಿ ನಾನಿಲ್ಲ. ಸಂಬಂಧಿಕರು ಬೆಂಗಳೂರಿನಿಂದ ಆಗಮಿಸಿದ ಬಳಿಕ ನಗರದಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಿದ್ದಾರೆ.