Friday, November 22, 2024
ಅಂತಾರಾಷ್ಟ್ರೀಯಸುದ್ದಿ

ಚೀನಾದ ಅತೀ ದೊಡ್ಡ ರಾಕೆಟ್ ಹಿಂದೂ ಮಹಾಸಾಗರದ ಮೇಲೆ ಪತನ – ಕಹಳೆ ನ್ಯೂಸ್

ಬೀಜಿಂಗ್, ಮೇ. 09 : ಚೀನಾದ ಅತೀ ದೊಡ್ಡ ರಾಕೆಟ್ ರವಿವಾರ ಬೆಳಗ್ಗೆ ಹಿಂದೂ ಮಹಾ ಸಾಗರದ ಮೇಲೆ ಪತನಗೊಂಡಿದೆ ಎಂದು ಚೀನಾದ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಏಪ್ರಿಲ್ 29 ರಂದು ಚೀನಾದ ಹೊಸ ಟಿಯಾನ್ಹೆ ಬಾಹ್ಯಾಕಾಶ ಕೇಂದ್ರದ ಮೊದಲ ಮೊಡ್ಯೂಲ್ ಅನ್ನು ಭೂಮಿಯ ಕಕ್ಷೆಗೆ ಉಡಾಯಿಸಿದ ಲಾಂಗ್ ಮಾರ್ಚ್ -5 ಬಿ ರಾಕೆಟ್‌ನ ಫ್ರೀಫಾಲಿಂಗ್ ವಿಭಾಗದಿಂದ ಸ್ವಲ್ಪ ಅಪಾಯವಿದೆ ಎಂದು ಬೀಜಿಂಗ್ ಅಧಿಕಾರಿಗಳು ತಿಳಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಈ ಕುರಿತು ಮೇಲ್ವಿಚಾರಣೆ ಮತ್ತು ವಿಶ್ಲೇಷಣೆಯ ನಡೆಸಿದ ಬಳಿಕ ಮೇ 9, 2021 ರಂದು 10:24 (0224 ಜಿಎಂಟಿ) ನಲ್ಲಿ, ಲಾಂಗ್ ಮಾರ್ಚ್ 5 ಬಿ ಯಾವೋ -2 ಉಡಾವಣಾ ವಾಹನದ ಕೊನೆಯ ಹಂತದ ಭಗ್ನಾವಶೇಷವು ವಾತಾವರಣಕ್ಕೆ ಮತ್ತೆ ಪ್ರವೇಶಿಸಿದೆ ” ಎಂದು ಚೀನಾ ಮ್ಯಾನ್ಡ್ ಸ್ಪೇಸ್ ಎಂಜಿನಿಯರಿಂಗ್ ಕಚೇರಿಯು ತಿಳಿಸಿದೆ.

ಭೂಮಿಗೆ ಮತ್ತೆ ಪ್ರವೇಶಿಸುವ ಹೊತ್ತಲ್ಲಿ ಅದರ ಬಹುಪಾಲು ಘಟಕಗಳು ಸುಟ್ಟುಹೋಗಿವೆ ಎಂದು ಚೀನಾದ ಬಾಹ್ಯಾಕಾಶ ಸಂಸ್ಥೆಯ ಮಾಹಿತಿ ಉಲ್ಲೇಖಿಸಿ ಚೀನಾದ ಮಾಧ್ಯಮಗಳು ವರದಿ ಮಾಡಿದೆ.