Saturday, November 23, 2024
ಬೆಂಗಳೂರುರಾಜಕೀಯರಾಜ್ಯರಾಷ್ಟ್ರೀಯ

ದೇಶಾದ್ಯಂತ ಕೋವಿಡ್ ಎರಡನೇ ಅಲೆ ರೌದ್ರ ನರ್ತನ ; ಕರ್ನಾಟಕ ಸೇರಿ ನಾಲ್ಕು ರಾಜ್ಯಗಳ ಸಿಎಂಗಳ ಜೊತೆ ಪ್ರಧಾನಿ ಮೋದಿ ಸಮಾಲೋಚನೆ – ಕಹಳೆ ನ್ಯೂಸ್

ಬೆಂಗಳೂರು: ಕರ್ನಾಟಕ, ಪಂಜಾಬ್, ಬಿಹಾರ ಹಾಗೂ ಉತ್ತರಾಖಂಡ್ ಸಿಎಂಗಳ ಜೊತೆ ಪ್ರಧಾನಿ ನರೇಂದ್ರ ಮೋದಿಯವರು ಫೋನ್ ಕರೆ ಮೂಲಕ ಮಾತುಕತೆ ನಡೆಸಿದ್ದಾರೆ.

ದೇಶಾದ್ಯಂತ ಕೋವಿಡ್ ಎರಡನೇ ಅಲೆ ರೌದ್ರ ನರ್ತನ ನಡೆಸುತ್ತಿದ್ದು, ಮಹಾಮಾರಿ ಸೋಂಕಿನ ವಿರುದ್ಧ ಕೇಂದ್ರ ಸರ್ಕಾರ ಒಗ್ಗಟ್ಟಿನ ಹೋರಾಟ ನಡೆಸಿದೆ. ದೇಶದ ಎಲ್ಲ ರಾಜ್ಯಗಳ ಜೊತೆ ಸಮನ್ವಯತೆ ಮಾಡಿಕೊಂಡು ಕೋವಿಡ್ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಲಸಿಕಾ ಅಭಿಯಾನದ ಕುರಿತು ಸಮಾಲೋಚನೆ ನಡೆಸುತ್ತಿದ್ದಾರೆ ಪ್ರಧಾನಿ ಮೋದಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಎಲ್ಲ ರಾಜ್ಯ ಮುಖ್ಯಮಂತ್ರಿಗಳೊಡನೆ ನಿರಂತರ ಸಂಪರ್ಕದಲ್ಲಿರುವ ಮೋದಿ, ರಾಜ್ಯದ ಸ್ಥಿತಿಗತಿಗಳನ್ನು ತಿಳಿದುಕೊಂಡು ಅಗತ್ಯ ಸಲಹೆಯನ್ನೂ ನೀಡುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಿನ್ನೆಯಷ್ಟೇ ಮಹಾರಾಷ್ಟ್ರ, ಆಂಧ್ರ ಪ್ರದೇಶ, ಹಾಗೂ ಮಧ್ಯ ಪ್ರದೇಶದ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದ ಮೋದಿ, ಇಂದು ಕರ್ನಾಟಕ, ಪಂಜಾಬ್, ಬಿಹಾರ ಹಾಗೂ ಉತ್ತರಾಖಂಡ್ ಸಿಎಂಗಳಿಗೆ ಕರೆ ಮಾಡಿದ್ದಾರೆ.

 

ಇನ್ನು ಕರ್ನಾಟಕದಲ್ಲಿ ಕೋವಿಡ್ ಉಲ್ಬಣಗೊಂಡಿದೆ. ಜನ ಸಾಮಾನ್ಯರ ಪರಿಸ್ಥಿತಿ ಬಹಳ ಹದಗೆಟ್ಟಿದೆ. ಹೀಗಿರುವಾಗ ಪ್ರಧಾನ ಮಂತ್ರಿಯ ಈ ಕರೆ ಬಹಳ ಮಹತ್ವ ಪಡೆದುಕೊಂಡಿದೆ. ಸದ್ಯ ಕೋವಿಡ್ ನಿಯಂತ್ರಣಕ್ಕೆ ನಾಳೆ, ಮೇ 10 ರಿಂದ 24ರವರೆಗೆ ರಾಜ್ಯಾದ್ಯಂತ ಸೆಮಿ ಲಾಕ್ಡೌ‌ನ್ ಘೋಷಿಸಲಾಗಿದೆ.