Monday, January 20, 2025
ಸುದ್ದಿಸುಳ್ಯ

ಸುಬ್ರಹ್ಮಣ್ಯ :ಅಕ್ರಮ ಬಂದೂಕು ತಯಾರಿಸಿ ಮಾರಾಟ,ಸುಳ್ಯದಲ್ಲಿ ನಾಲ್ವರ ಬಂಧನ– ಕಹಳೆ ನ್ಯೂಸ್

ಸುಬ್ರಹ್ಮಣ್ಯ :ಅಕ್ರಮ ಬಂದೂಕು ತಯಾರಿಸಿ ಮಾರಾಟ,ಸುಳ್ಯದಲ್ಲಿ ನಾಲ್ವರ ಬಂಧನ. ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಛತ್ರಪ್ಪಾಡಿ ಎಂಬಲ್ಲಿ ಅಕ್ರಮವಾಗಿ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಬಂದೂಕು, ಮದ್ದುಗುಂಡು ವಶಪಡಿಸಿಕೊಳ್ಳಲಾಗಿದೆ.


ಅಕ್ರಮವಾಗಿ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಸುಬ್ರಹ್ಮಣ್ಯ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಸುಳ್ಯದ ಛತ್ರಪ್ಪಾಡಿ ದಿವಾಕರ ಆಚಾರಿ (52), ಕಡಬ ತಾಲೂಕಿನ ಸುಬ್ರಹ್ಮಣ್ಯ ನೂಚಿಲ ನಿವಾಸಿ ಕಾರ್ತಿಕ್ (25), ಕಡಬದ ನೆಟ್ಟಣ ಸಮೀಪದ ಚಿದ್ಗಲ್ ನಿವಾಸಿ ಅಶೋಕ್ (35), ಹಾಸನ ಜಿಲ್ಲೆಯ ಹನುಮಂತಪುರದ ಚಂದನ್ (32) ಬಂಧಿತರು. ಇವರು ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಛತ್ರಪ್ಪಾಡಿ ಎಂಬಲ್ಲಿ ಅಕ್ರಮವಾಗಿ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದರು. ಈ ನಾಲ್ವರ ವಿರುದ್ಧ ಅಕ್ರಮ ಶಸ್ತ್ರಾಸ್ತ್ರಗಳ ನಿರ್ಮಾಣ ಮತ್ತು ದಾಸ್ತಾನು ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಂಧಿತರಿಂದ ಬಂದೂಕು, ಮದ್ದುಗುಂಡು ವಶಪಡಿಸಿಕೊಳ್ಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಈ ಪ್ರಕರಣದ ಪತ್ತೆಯ ಬಗ್ಗೆ ಮಾನ್ಯ ಪೊಲೀಸು ಅಧೀಕ್ಷಕರಾದ ಶ್ರೀ ರಿಷಿಕೇಶ ಸೋನವಾಲೆ ಐ ಪಿ ಎನ್ , ಮಾನ್ಯ ಹೆಚ್ಚುವರಿ ಪೊಲೀಸು ಅಧೀಕ್ಷಕ ರಾದ ಭಾಸ್ಕರ್ ಹಾಗೂ ಪೊಲೀಸ್ ಉಪಾಧೀಕ್ಷಕರಾದ ಕುಮಾರಿ | ಗಾನ. ಪಿ ಕುಮಾರ್ ರವರ ಮಾರ್ಗದರ್ಶನದಲ್ಲಿ ಸುಳ್ಯ ವೃತ್ತಿನಿರಿಕ್ಷರರಾದ ಶ್ರೀ ನವೀನ್ ಚಂದ್ರ ಜೋಗಿ ಮತ್ತು ಸುಬ್ರಹ್ಮಣ್ಯ ಠಾಣಾ ಪಿಎ‌ಐ ಶ್ರೀಮತಿ ಓಮನ ಮತ್ತು ಸಿಬ್ಬಂದಿಗಳಾದ , ಬೆಳ್ಳಾರೆ ರಾಣಾ ಎಎನ್ ಐ ದಾಮೋದರ ನಾಯ್ಕ್,ಹೆಚ್ ಸಿ,ವಸಂತ ಗೌಡ ನೂಜೆ , ಸುಬ್ರಹ್ಮಣ್ಯ ಪೊಲೀಸ್ ಠಾಣಾ ಹೆಚ್ ಸಿ,ಆನಂದ ನಾಯ್ಕ , ಹೆಚ್ ಸಿ ನಿತೇಶ್ ಶೆಟ್ಟಿ ,ಪಿಸಿ ಭೀಮನಗೌಡ ಬಿರಾದಾರ, ಪಿಸಿ ಸಿದ್ದಪ್ಪ ಹೂಗಾರ , ಪಿಸಿ ಬಸವರಾಜ ವಂದಾಲ ಪಿಸಿ 239 ಪ್ರವೀಣ ಪೂಜಾರಿ ಪಿಸಿ, ಪ್ರಕಾಶ ಪಿಸಿ,ಆಕಾಶ ಗೌಡ,ಮಹಾಲಕ್ಷ್ಮೀ . ಹಾಗೂ ಎಹೆಚ್ ಸಿ,ದಂಜಿತ್ ಕುಮಾರ್ ಮತ್ತು ಎಚ್ ಸಿ ನಾರಾಯಣ ಪಾಟಾಳಿ, ರೋಹಿತಾಕ್ಷ,ಪತ್ತೆ ಕಾರ್ಯದಲ್ಲಿ ಭಾಗವಹಿಸಿದರು .

ಜಾಹೀರಾತು
ಜಾಹೀರಾತು
ಜಾಹೀರಾತು