Friday, April 11, 2025
ಸುಳ್ಯ

ಸುಳ್ಯ :ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿ-ಕಹಳೆ ನ್ಯೂಸ್

ಲಾಕ್ ಡೌನ್ ಸಂದರ್ಭದಲ್ಲಿ ಸರಕಾರದ ಆದೇಶದಂತೆ ದಿನಸಿ ಖರೀದಿಗೆ ಬಂದಿದ್ದ ವಿಕಲಚೇತನ ವ್ಯಕ್ತಿಯೊಬ್ಬರನ್ನು ಪೊಲೀಸ್ ಸಿಬ್ಬಂದಿಯೊಬ್ಬರು ತನ್ನ ದ್ವಿಚಕ್ರ ವಾಹನದಲ್ಲಿ ಮನೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

ಸುಳ್ಯದ ಬೋರುಗುಡ್ಡೆಯ ವಿಕಲ ಚೇತನ ವ್ಯಕ್ತಿ ಆರೀಸ್ ಸಿ.ಎ.ಅವರು ಮಂಗಳವಾರ ದಿನಸಿ ಯನ್ನು ಹೊತ್ತು ನಡೆದುಕೊಂಡು ಕಷ್ಟ ಪಟ್ಟು ಹೋಗುತ್ತಿದ್ದರು.ಸುಳ್ಯ ಪೇಟೆಗೆ ಬಂದು ಮನೆ ಕಡೆ ಹೋಗುತ್ತಿದ್ದಾಗ ಬೆಳಗ್ಗೆ 10 ಗಂಟೆ ಆಗಿತ್ತು‌.

ಜಾಹೀರಾತು
ಜಾಹೀರಾತು
ಜಾಹೀರಾತು

ಇದನ್ನು ಗಮನಿಸಿದ ಸುಳ್ಯ ಪೋಲೀಸ್ ಠಾಣೆಯ ಕಾನ್ಸ್ ಟೇಬಲ್ ಮನು ಗೌಡರವರು ತಮ್ಮ ಬೈಕ್ ನಲ್ಲಿ ಅವರನ್ನು ಮನೆ ತನಕ ಬಿಟ್ಟು ಮಾನವೀಯತೆ ಮೆರೆದಿದ್ದಾರೆ. ಇವರ‌ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ