Sunday, January 19, 2025
ಸುದ್ದಿ

ವಲಸೆ ಕಾರ್ಮಿಕರಿಗೆ ಸಹಾಯ ಮಾಡುವ ಮೂಲಕ ಬರ್ತ್ ಡೇ ಆಚರಿಸಿಕೊಂಡ ಸನ್ನಿ- ಕಹಳೆ ನ್ಯೂಸ್

ಪಡ್ಡೆ ಹುಡುಗರ ಮನದನ್ನೆ, ಮೋಹಕ ತಾರೆ, ಬಾಲಿವುಡ್​ ನಟಿ ಸನ್ನಿ ಲಿಯೋನ್​ ಇಂದು 40 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇವರು ಸಿನಿರಂಗದ ಜೊತೆ ಜೊತೆಗೆ ಸಾಮಾಜಿಕ ಕಾಳಜಿಯನ್ನು ಹೊತ್ತಿದ್ದಾರೆ. ದ್ಯ ಕೋವಿಡ್ ಸಂಕಷ್ಟ ದೇಶವನ್ನೇ ನಲುಗಿಸುತ್ತಿರುವಾಗ ನಟಿ ಸನ್ನಿ ವಲಸೆ ಕಾರ್ಮಿಕರ ನೆರವಿಗೆ ನಿಂತಿದ್ದಾರೆ.

‘ಪೀಪಲ್​ ಪಾರ್​ ದಿ ಎಥಿಕಲ್​ ಟ್ರೀಟ್​ಮೆಂಟ್​ ಆಫ್​ ಅನಿಮಲ್’​ ಸಂಸ್ಥೆಯ ಜೊತೆಗೂಡಿ ಸನ್ನಿಲಿಯೋನ್ ವಲಸೆ ಕಾರ್ಮಿಕರಿಗೆ ಆಹಾರ ಒದಗಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಮೂಲಕ ತಮ್ಮ ಹುಟ್ಟುಹಬ್ಬದ ಅರ್ಥಪೂರ್ಣ ಆಚರಣೆಗೆ ಮುಂದಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

“ಸದ್ಯ ನಾವು ಕೋವಿಡ್ ಕಾಲದಲ್ಲಿದ್ದೇವೆ. ಈ ಸಂಕಷ್ಟವನ್ನು ಸಹಾನುಭೂತಿ ಮತ್ತು ಒಗ್ಗಟ್ಟಿನಿಂದ ದೂರ ಮಾಡಬೇಕು. ಈ ಹಿನ್ನೆಲೆಯಲ್ಲಿ ನಾನು ಪೆಟಾ ಜೊತೆ ಕೈ ಜೋಡಿಸುತ್ತಿದ್ದೇನೆ. ಈ ಸಂಸ್ಥೆಯ ಮೂಲಕ ವಲಸೆ ಕಾರ್ಮಿಕರಿಗೆ ಕಿಚಡಿ ಮತ್ತು ಹಣ್ಣುಗಳನ್ನು ನೀಡಲಿದ್ದೇವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಷ್ಟೇ ಅಲ್ಲದೆ, ಇತ್ತೀಚಿಗೆ ದೇಶದ ಜನತೆ ವ್ಯಾಕ್ಸಿನ್​ ಹಾಕಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು. “ಕೋವಿಡ್ ವಿರುದ್ಧ ಒಗ್ಗಟ್ಟಾಗಿ ಹೋರಾಡೋಣ. ಇದೀಗ ವ್ಯಾಕ್ಸಿನ್​ ಹಾಕಿಸಿಕೊಳ್ಳುವ ಸಮಯ. ಎಲ್ಲರೂ ಸುರಕ್ಷಿತವಾಗಿರಿ. ಸಾಂಕ್ರಾಮಿಕದ ವಿರುದ್ಧ ಹೋರಾಡಲು ಸಹಾಯ ಮಾಡೋಣ. ಜೊತೆಗೆ ಪ್ಲಾಸ್ಮಾ ದಾನಾ ಮಾಡೋಣ, ಅನೇಕ ಪ್ರಾಣಗಳನ್ನು ಉಳಿಸೋಣ ಎಂದು ಹೇಳಿದ್ದರು.