Sunday, January 19, 2025
ಉಡುಪಿಕಾಸರಗೋಡುದಕ್ಷಿಣ ಕನ್ನಡ

ಮಂಗಳೂರು: ತೌಕ್ತೇ ಚಂಡಮಾರುತ ಎದುರಿಸಲು ದ.ಕ. ಜಿಲ್ಲಾಡಳಿತ ಸಿದ್ಧತೆ – ಮೀನುಗಾರರಿಗೆ ಎಚ್ಚರಿಕೆ- ಕಹಳೆ ನ್ಯೂಸ್

ಮಂಗಳೂರು:- ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, “ತೌಕ್ತೇ” ಚಂಡಮಾರುತ ಕಾಣಿಸಿಕೊಳ್ಳಲಿರುವ ಹಿನ್ನಲೆಯಲ್ಲಿ ರಾಜ್ಯದ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು ಸಂಭಾವ್ಯ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸರ್ವಸನ್ನದ್ಧವಾಗಿದೆ.

ಇದಕ್ಕಾಗಿ ಅಗ್ನಿಶಾಮಕ ಮತ್ತು ತುರ್ತು ಸೇವೆ ಗೃಹರಕ್ಷಕ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ಸೂಚಿಸಲಾಗಿದೆ. ಸುಮಾರು20 ಸದಸ್ಯರ ಎಸ್ ಡಿ ಆರ್ ಎಫ್ ತಂಡವನ್ನು ಸಿದ್ಧಗೊಳಿಸಲಾಗಿದೆ. ಇದಲ್ಲದೆ ಸುಮಾರು ತುರ್ತು ಕಾರ್ಯಾಚರಣೆಗೆ 16 ದೋಣಿಗಳು ಸಿದ್ಧವಾಗಿದೆ. ಇನ್ನೊಂದೆಡೆ ಚಂಡಮಾರುತದ ಸಾಧ್ಯತೆಗಳಿರುವುದರಿಂದ ಮೀನುಗಾರಿಕೆ ನಿರತ ಮೀನುಗಾರರಿಗೆ ಕೋಸ್ಟ್ ಗಾರ್ಡ್ ಮೈಕ್ ಮೂಲಕ ಎಚ್ಚರಿಕೆಯ ಸೂಚನೆ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಂಡಮಾರುತದ ಪರಿಣಾಮವೂ ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಮೇ 13 ರಿಂದಲೇ ಕಂಡುಬರಲಿದ್ದು ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗಸ್ತು ತಿರುಗುವ ಐಸಿಜಿ ಹಡಗುಗಳು ಮತ್ತು ಸಿಜಿ ಡಾರ್ನಿಯರ್ ವಿಮಾನಗಳು, ವಿಹೆಚ್ ಎಫ್ ಚಾಲೆಂಜ್ ಚಾನೆಲ್’ನಲ್ಲಿ ಸಮುದ್ರದಲ್ಲಿರುವ ಮೀನುಗಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿ ತಕ್ಷಣ ಹತ್ತಿರದ ತೀರಕ್ಕೆ ಮರಳುವಂತೆ ಸೂಚಿಸಿದೆ.