ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆಯ ಸಾವಿರ ಮೆಟ್ರಿಕ್ ಟನ್ ಗೋದಾಮಿಗೆ ಸೇರಿದ ಕೇಂದ್ರದ ಅಕ್ಕಿ-ಕಹಳೆ ನ್ಯೂಸ್
ಪುತ್ತೂರು: ಕೋವಿಡ್ ಪರಿಹಾರವಾಗಿ ಕೇಂದ್ರದಿಂದ ಸುಮಾರು 26 ಸಾವಿರ ಮೆಟ್ರಿಕ್ ಟನ್ ಪಡಿತರ ಅಕ್ಕಿ ಪುತ್ತೂರಿಗೆ ಬಂದಿದ್ದು, ಅದರ ದಾಸ್ತಾನನ್ನು ಪುತ್ತೂರು
ಎಪಿಎಂಸಿಯ ನೂತನ ಸಾವಿರ ಮೆಟ್ರಿಕ್ ಟನ್ ಗೋದಾಮಿನಲ್ಲಿ ಸುರಕ್ಷಿತವಾಗಿ ದಾಸ್ತಾನು ಮಾಡಲಾಗಿದೆ. ಮುಂದೆ ಇಲ್ಲಿಂದ ಪುತ್ತೂರು ತಾಲೂಕಿನ ವಿವಿಧ
ಗ್ರಾಮಗಳಿಗೆ ಮತ್ತು ಕಡಬ ತಾಲೂಕಿಗೆ ಸರಬರಾಜು ಆಗಲಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಎಪಿಎಂಸಿಯಲ್ಲಿ ಅಕ್ಕಿ ದಾಸ್ತಾನು ಗೋದಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಅವರು ಪತ್ರಿಕಾ ಮಾದ್ಯಮದವರೊಂದಿಗೆ
ಮಾತನಾಡಿ ಎಪಿಎಂಸಿ ಕೃಷಿಕ ಸ್ನೇಹಿಯಾಗಿ ಮಾರುಕಟ್ಟೆಯಾಗಿ ಪರಿವರ್ತನೆಗೊಂಡ ಬಳಿಕ ಕೋವಿಡ್ ಸಂದರ್ಭದಲ್ಲಿ ಕೃಷಿಕರಿಗೆ ಮೂಲಭೂತವಾಗಿ ತಮ್ಮ ಕೃಷಿ ಉತ್ಪನ್ನ ಮಾರಾಟ ಆಗದೆ ಇರುವ ಸಂದರ್ಭದಲ್ಲಿ ಅಡಮಾನ ಸಾಲ ಪಡೆದು ಕೊಳ್ಳುವ ಅವಕಾಶ, ಗರಿಷ್ಠ ರೂ. 2ಲಕ್ಷ ಮೊತ್ತವನ್ನು ಪಡೆಯಲು ಅದೂ ಕೂಡಾ ೩ ತಿಂಗಳ ಅವಧಿಗೆ ಶೇಕಡ ಸೊನ್ನೆ ಬಡ್ಡಿಯಲ್ಲಿ ನೀಡುವ ಅವಕಾಶ ನೀಡಿದೆ.
ಅದೇ ರೀತಿ ಪುತ್ತೂರಿನ ಪಡಿತರ ವ್ಯವಸ್ಥೆಗೆ ಸಂಬಂಧಿಸಿ ನೂತನ ಗೋದಾಮ್ ನಿರ್ಮಾಣ ಮಾಡಿ ಕರ್ನಾಟಕ ಆಹಾರ ಉತ್ಪನ್ನ ನಿಗಮಕ್ಕೆ ಅದನ್ನು ಕೊಡುವ ಮೂಲಕ ಕೇಂದ್ರದಿಂದ ಬಂದ ಅಕ್ಕಿಯನ್ನು ದಾಸ್ತಾನು ವ್ಯವಸ್ಥೆ ಮಾಡಲಾಗಿದೆ. ಪಡಿತರ ಅಕ್ಕಿಯಲ್ಲಿ ಈ ಭಾರಿ ತಲಾ 9100 ಟನ್ ಬೆಳ್ತಿಗೆ ಅಕ್ಕಿ ಮತ್ತು ಕುಚಲಕ್ಕಿ
ನೀಡಲಾಗುತ್ತಿದೆ.
ಈ ಅಕ್ಕಿಯನ್ನು ಎಪಿಎಲ್ ಕಾರ್ಡ್‌ದಾರರಿಗೆ ಮತ್ತು ಬಿಪಿಲ್ ಕಾರ್ಡ್‌ದಾರರಿಗೆ ಇದರ ಜೊತೆಗೆ ಬೇರೆ ಜಿಲ್ಲೆಯಿಂದ ಬಂದು ಇಲ್ಲಿ ವಾಸವಾದವರಿಗೂ ಹಾಗು ಇಲ್ಲಿನ ತನಕ ಪಡಿತರ ಅಕ್ಕಿ ಪಡೆದಿಲ್ಲವೋ ಆ ಎಲ್ಲಾ ಕುಟುಂಬಕ್ಕೆ ಕೋವಿಡ್ ಪರಿಹಾರ ಅಕ್ಕಿಯನ್ನು ಕೇಂದ್ರ ಸರಕಾರ ಒದಗಿಸಿದೆ ಎಂದರು.
ಮುಂದಿನ ತಿಂಗಳು ಅಕ್ಕಿಯ ವಿತರಣೆ ನಡೆಯಲಿದೆ ಎಂದು ಶಾಸಕರು ಹೇಳಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜೀವಂಧರ್ ರೈ, ಎಪಿಎಂಸಿ
ಅಧ್ಯಕ್ಷ ದಿನೇಶ್ ಮೆದು ಅವರು ಉಪಸ್ಥಿತರಿದ್ದರು.