ಮಂಗಳೂರು : ಎಂಜಿನ್ ಸಮಸ್ಯೆಯಿಂದ ಸಮುದ್ರದಲ್ಲಿ ಸಿಲುಕಿದ ಬೋಟ್; ಮೂವರು ಮೀನುಗಾರರ ರಕ್ಷಣೆ – ಕಹಳೆ ನ್ಯೂಸ್
ಮಂಗಳೂರು : ಎಂಜಿನ್ ಸಮಸ್ಯೆಯಿಂದ ಸಮುದ್ರದಲ್ಲಿ ಬೋಟ್ ವೊಂದು ಸಿಲುಕಿದ ಪರಿಣಾಮ ಅದರಲ್ಲಿದ್ದ ಮೂವರು ಮೀನುಗಾರರನ್ನು ಕರಾವಳಿ ಕಾವಲು ಪಡೆ ರಕ್ಷಣೆ ಮಾಡಿದೆ.
ಕಣ್ಣೂರಿನಿಂದ 10 ನಾಟಿಕಲ್ ಮೈಲಿ ದೂರದಲ್ಲಿ ದೋಣಿ ಕೆಟ್ಟು ನಿಂತಿತ್ತು. ಈ ಕುರಿತು ಕರಾವಳಿ ಕಾವಲು ಪಡೆ ಸಿಬ್ಬಂದಿ ಮಾಹಿತಿ ಪಡೆದು, ವಿಕ್ರಮ್ ಹಡಗಿನೊಂದಿಗೆ ಕಾರ್ಯಾಚರಣೆ ನಡೆಸಿ, ಮೂವರನ್ನು ರಕ್ಷಿಸಲಾಗಿದೆ, ರಕ್ಷಿಸಿದ ಮೀನುಗಾರರಿಗೆ ಆಹಾರ, ವೈದ್ಯಕೀಯ ನೆರವು ನೀಡಲಾಗಿದೆ.
‘ತೌಕ್ತೆ ಚಂಡಮಾರುತದಿಂದ ಕರಾವಳಿಯಲ್ಲಿ ಶುಕ್ರವಾರ ರಾತ್ರಿಯಿಂದಲೇ ಮಳೆ ಸುರಿಯುತ್ತಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನ ತೊಂದರೆ ಅನುಭವಿಸುವಂತಾಯಿತಾಗಿದೆ.
ವೀಕೆಂಡ್ ಕರ್ಪ್ಯೂ ತೆರವುಗೊಳಿಸಿದ್ದರಿಂದ ಕಾರ್ಮಿಕರು ನಿರ್ಮಾಣ ಕಾಮಗಾರಿ ಸೇರಿದಂತೆ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಿದ್ಧರಾಗಿದ್ದರೂ ಮಳೆಯಿಂದಾಗಿ ಹೊರಗೆ ಹೋಗದಂತಾಗಿದೆ. ಮಾರುಕಟ್ಟೆಯಲ್ಲಿ ಅಗತ್ಯ ವಸ್ತಗಳನ್ನು ಕೊಂಡುಕೊಳ್ಳಲು ಬಂದ ಜನರಿಗೆ ಮಳೆ ಅಡ್ಡಿಯನ್ನುಂಟು ಮಾಡಿದೆ.