Sunday, January 19, 2025
ಕ್ರೈಮ್ದಕ್ಷಿಣ ಕನ್ನಡಸುದ್ದಿ

ಹಿಂದೂ ದೇವರ ಅವಹೇಳನ ಮಾಡಿದ ತೊಕ್ಕೊಟ್ಟುವಿನ ಉದ್ಯಮಿ ಸ್ವಾಲಿಝ್ ಇಕ್ಬಾಲ್ ಬಂಧನ – ಕಹಳೆ ನ್ಯೂಸ್

ಉಳ್ಳಾಲ, ಮೇ 15 : ಹಿಂದೂ ದೇವರುಗಳ ನಿಂದಿಸಿದ ತೊಕ್ಕೊಟ್ಟು ನಿವಾಸಿ, ಉದ್ಯಮಿಯನ್ನು ಉಳ್ಳಾಲ ಪೊಲೀಸರು ಮೇ. 15 ರ ಶನಿವಾರ ಬಂಧಿಸಿದ್ದಾರೆ. ಬಂಧಿತನನ್ನು ತೊಕ್ಕೊಟ್ಟು ಸ್ಮಾರ್ಟ್ ಸಿಟಿ ವಸತಿ ಸಂಕೀರ್ಣದಲ್ಲಿ ಇರುವ ಅಂಗಡಿ ಹೊಂದಿರುವ ಉದ್ಯಮಿ ಸ್ವಾಲಿಝ್ ಇಕ್ಬಾಲ್ (45) ಎಂದು ಗುರುತಿಸಲಾಗಿದೆ.

ಆರೋಪಿ ಹಿಂದೂ ದೇವರುಗಳ ವಿರುದ್ಧ ನಿಂದನೆಯ ಮಾತುಗಳನ್ನು ಆಡಿದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಫರ್ನಿಚರ್ ಅಂಗಡಿ ಸಹಿತ ವಿವಿಧ ಉದ್ಯಮಗಳನ್ನು ನಡೆಸುತ್ತಿದ್ದ ಸ್ವಾಲಿಝ್ ಇಕ್ಬಾಲ್ ಹಿಂದು ದೇವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ವೀಡಿಯೋ ಮೂರು ದಿನಗಳಿಂದ ವೈರಲ್ ಆಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ವೈರಲ್ ಆಗುತ್ತಿದ್ದಂತೆ, ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಹಿಂದೂ ಸಂಘಟಕರು ದೂರು ದಾಖಲಿಸಿದ್ದರು. ಅದರಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಾಗಿದ್ದು, ಶನಿವಾರ ಉಳ್ಳಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು