Sunday, January 19, 2025
ಬೆಂಗಳೂರುರಾಜಕೀಯರಾಜ್ಯಸುದ್ದಿ

‘ಲಾಕ್​ಡೌನ್​ ವಿಸ್ತರಣೆ ಕುರಿತು ಸಿಎಂ ಮಟ್ಟದಲ್ಲಿ ಅಧಿಕೃತವಾಗಿ ಚರ್ಚೆ ನಡೆದಿಲ್ಲ’ ; ಗೃಹ ಸಚಿವ ಬಸವರಾಜ ಬೊಮ್ಮಾಯಿ – ಕಹಳೆ ನ್ಯೂಸ್

ಬೆಂಗಳೂರು, ಮೇ.15 : ರಾಜ್ಯದಲ್ಲಿ ಲಾಕ್​ಡೌನ್​ ವಿಸ್ತರಣೆ ಕುರಿತು ಚರ್ಚೆಯಾಗಿಲ್ಲ ಸಿಎಂ ಮಟ್ಟದಲ್ಲಿ ಅಧಿಕೃತವಾಗಿ ಇನ್ನೂ ಈ ಕುರಿತು ಮಾತುಕತೆ ನಡೆದಿಲ್ಲ, ಈಗಿರುವಂತೆ ಮೇ 24ರ ವರೆಗೆ ಲಾಕ್‌ಡೌನ್ ಮುಂದುವರೆಯಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

 

ಈ ಕುರಿತು ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಆಹಾರ ಪೂರೈಕೆ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಲಾಕ್​ಡೌನ್​ ಜಾರಿಯಲ್ಲಿದ್ದರೂ ಸೋಂಕು ಕಡಿಮೆಯಾಗುತ್ತಿಲ್ಲ, ಜೊತೆಗೆ ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಲಾಕ್​ಡೌನ್​ ವಿಸ್ತರಣೆ ನಡೆಸುವ ಚಿಂತನೆ ನಡೆಸಿದ್ದು, ಇದೇ ಸಲಹೆಯನ್ನು ತಜ್ಞರು ಕೂಡ ನೀಡಿದ್ದಾರೆ” ಎಂದರು.

ಲಾಕ್​ಡೌನ್​ ಹಿನ್ನಲೆ ಸೋಂಕು ಪರೀಕ್ಷೆ ಮಾಡುವ ಸಂಖ್ಯೆ ಕಡಿಮೆಯಾಗಿಲ್ಲ. ಪರೀಕ್ಶ್ಜೆ ಮಾಡುವ ವಿಧಾನ ಮಾತ್ರ ಬದಲಾಗಿದ್ದು, ಲಾಕ್‌ಡೌನ್ ಕಾರಣ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಟೆಸ್ಟ್ ಮಾಡುತ್ತಿಲ್ಲ. ಹೀಗಾಗಿ ಟೆಸ್ಟ್ ಪ್ರಮಾಣ ಕಡಿಮೆಯಾಗಿದೆ. ಆದರೆ ಸರ್ಕಾರ ಟೆಸ್ಟಿಂಗ್ ಕಡಿಮೆ‌ ಮಾಡಿಲ್ಲ ಎಂದಿದ್ದಾರೆ.

ಕಳೆದ ಬಾರಿಯ ಕೊರೊನಾ ಸಂಧರ್ಭದಲ್ಲಿ ಇಸ್ಕಾನ್​ ದೇವಾಲಯ ಅನ್ನದಾಸೋಹ ನಡೆಸಿದ್ದು, ಎರಡನೇ ಅಲೆ ಆರಂಭವಾದಾಗ ಆಸ್ಪತ್ರೆಗಳಿಗೆ ಪೂರೈಕೆ ಮಾಡುತ್ತಿದ್ದಾರೆ. ಆಸ್ಪತ್ರೆ ಜೊತೆಗೆ‌ ಪೊಲೀಸರಿಗೆ ನೀಡಿ ಎಂದು ಕೇಳಿಕೊಂಡಿದ್ದೆ. ಈ ಹಿನ್ನಲೆ 5 ಸಾವಿರ ಪೊಲೀಸ್ ಸಿಬ್ಬಂದಿಗೆ‌ ಇಂದಿನಿಂದ ಆಹಾರ ಪೂರೈಕೆ ಮಾಡಲಿದ್ದು, ಜೊತೆಗೆ ಕೂಲಿ ಕಾರ್ಮಿಕರು, ಶ್ರಮಿಕರು, ವ್ಯಾಪಾರಸ್ಥರಿಗೂ ಆಹಾರ ನೀಡಿ‌ ಸಹಾಯ ಮಾಡುತ್ತಾರೆ. ಹಾಗಾಗಿ ಅಗತ್ಯವಿರುವವರು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

ಇನ್ನು ಲಾಕ್​ಡೌನ್​ನ ಸಂದರ್ಭದಲ್ಲಿ ಬಡ ಜನರು ಆಹಾರ ಕೊರತೆ ಎದುರಿಸಬಾರದೆಂಬ ಉದ್ದೇಶದಿಂದ ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತಿದ್ದು, ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ನೀಡುತ್ತಿದೆ. ಕೇಂದ್ರ ಸರ್ಕಾರದ‌ ಸಹಕಾರದೊಂದಿಗೆ ಉಚಿತ ಅಕ್ಕಿ ನೀಡಿತ್ತಿದ್ದೇವೆ ಎಂದರು.

ಸಮಾರಂಭದಲ್ಲಿ ಚಿಕ್‌ಪೇಟೆ ಬಿಜೆಪಿ ಶಾಸಕ ಉದಯ್, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯೆಲ್ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಉಪಸ್ಥಿತರಿದ್ದರು.