Sunday, November 24, 2024
ಆರೋಗ್ಯಬೆಂಗಳೂರುರಾಜ್ಯಸುದ್ದಿ

ರಾಜ್ಯದಲ್ಲಿ ಇಂದು 41,664 ಮಂದಿಗೆ ಪಾಸಿಟಿವ್, 249 ಸಾವು ; 34,425 ಮಂದಿ ಡಿಸ್ಚಾರ್ಜ್ – ಕಹಳೆ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಇಂದು 41,664 ಮಂದಿಗೆ ಕೊರೊನಾ ಬಂದಿದ್ದು, 249 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 34,425 ಮಂದಿ ಡಿಸ್ಚಾರ್ಜ್ ಆಗಿದ್ದಾರೆ

ಒಟ್ಟು ರಾಜ್ಯದಲ್ಲಿ 21,71,931 ಮಂದಿಗೆ ಸೋಂಕು ಬಂದಿದ್ದು, 15,44,982 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೂ ಕೋವಿಡ್‍ನಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 21,434ಕ್ಕೆ ಏರಿಕೆಯಾಗಿದೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.35.20 ಮತ್ತು ಮರಣ ಪ್ರಮಾಣ ಶೇ.0.83ರಷ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು 1,18,345 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು ಒಟ್ಟು 82,793 ಮಂದಿಗೆ ಲಸಿಕೆ ನೀಡಲಾಗಿದ್ದು, ಇಲ್ಲಿಯವರೆಗೆ ಒಟ್ಟು 1,11,49,833 ಡೋಸ್‍ಗಳನ್ನು ವಿತರಣೆ ಮಾಡಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಇವತ್ತು 13,402 ಹೊಸ ಪ್ರಕರಣಗಳು ವರದಿಯಾಗಿದ್ದು, 94 ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 3,66,791 ಸಕ್ರಿಯ ಪ್ರಕರಣಗಳಿವೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 584, ಬಳ್ಳಾರಿ 1622, ಬೆಳಗಾವಿ 1502, ಬೆಂಗಳೂರು ಗ್ರಾಮಾಂತರ 1265, ಬೆಂಗಳೂರು ನಗರ 13402, ಬೀದರ್ 185, ಚಾಮರಾಜನಗರ 535, ಚಿಕ್ಕಬಳ್ಳಾಪುರ 595, ಚಿಕ್ಕಮಗಳೂರು 1,093, ಚಿತ್ರದುರ್ಗ 454, ದಕ್ಷಿಣ ಕನ್ನಡ 1,787, ದಾವಣಗೆರೆ 292, ಧಾರವಾಡ 901, ಗದಗ 459 , ಹಾಸನ 2,443, ಹಾವೇರಿ267, ಕಲಬುರಗಿ 832, ಕೊಡಗು 483, ಕೋಲಾರ 778, ಕೊಪ್ಪಳ 630, ಮಂಡ್ಯ 1,188, ಮೈಸೂರು 2,489, ರಾಯಚೂರು 467, ರಾಮನಗರ524, ಶಿವಮೊಗ್ಗ 1081, ತುಮಕೂರು 2302, ಉಡುಪಿ 1,146, ಉತ್ತರ ಕನ್ನಡ 1,226, ವಿಜಯಪುರ 789 ಮತ್ತು ಯಾದಗಿರಿಯಲ್ಲಿ 343 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.