Thursday, January 23, 2025
ಉಡುಪಿದಕ್ಷಿಣ ಕನ್ನಡಸುದ್ದಿ

Breaking News : ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಪಡುಬಿದ್ರೆ ಬಿಚ್‌ನಲ್ಲಿ ಬೋಟ್ ಪಲ್ಟಿ ; ಓರ್ವ ಸಾವು, ಐವರು ನಾಪತ್ತೆ – ಕಹಳೆ ನ್ಯೂಸ್

ಪಡುಬಿದ್ರೆ, ಮೇ.15 : ತೌಕ್ತೆ ಚಂಡಮಾರುತಕ್ಕೆ ಸಿಲುಕಿದ ಬೋಟು ಪಲ್ಟಿಯಾಗಿ ಓರ್ವ ಮೃತಪಟ್ಟು, ಐವರು ನಾಪತ್ತೆಯಾದ ಘಟನೆ ಪಡುಬಿದ್ರೆ ಬಿಚ್‌ನಲ್ಲಿ ನಡೆದಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಚಂಡಮಾರುತ ಬೀಸಿದ ಪರಿಣಾಮ ಹವಾಮಾನ ವೈಪರೀತ್ಯಕ್ಕೆ ಸಿಲುಕಿ ಸಮುದ್ರ ಪಾಲಾದ ಬೋಟೊಂದು ಪಡುಬಿದ್ರಿ ಕಾಡಿಪಟ್ನ ಸಮುದ್ರ ತೀರದಲ್ಲಿ ಬಂದು ದಡಕ್ಕೆ ಅಪ್ಪಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳಿಗ್ಗೆ 10ಗಂಟೆಯಿಂದ ಈ ಸಿಂಗಲ್ ಮೆಂಟೆನೆನ್ಸ್ ಬೋಟ್ ಸಂಪರ್ಕ ಕಡಿದು ಕಂಡಿತ್ತು. ಬೋಟಿನಲ್ಲಿ ಎಂಟು ಜನರಿದ್ದು ಇಬ್ಬರು ಈಜಿಕೊಂಡು ಮಟ್ಟು ಬೀಚಿನಲ್ಲಿ ದಡ ಸೇರಿದ್ದಾರೆ.

ಇನ್ನು ಒಂದು ಮೃತ ದೇಹ ಪತ್ತೆಯಾಗಿದ್ದು, ಕಾಣೆಯಾದ ಐವರಿಗೆ ಹುಡುಕಾಟ ನಡೆಸುತ್ತಿದ್ದೇವೆ ಎಂದು ಕರಾವಳಿ ಪೋಲೀಸ್ ಅಧಿಕಾರಿ ಚೇತನ್ ಐಪಿಎಸ್ ತಿಳಿಸಿದ್ದಾರೆ.