Recent Posts

Monday, January 20, 2025
ಉಡುಪಿಸಿನಿಮಾಸುದ್ದಿ

ಭುವನ ಸುಂದರಿ ಸ್ಪರ್ಧೆಯಲ್ಲಿ ಉಡುಪಿಯ ಆಯಡ್ಲಿನ್‌ಗೆ ಮೂರನೇ ರನ್ನರ್‌ಅಪ್‌ ಸ್ಥಾನ – ಕಹಳೆ ನ್ಯೂಸ್

ಉಡುಪಿ, ಮೇ.17 : ಅಮೇರಿಕಾದ ಫ್ಲೋರಿಡಾದಲ್ಲಿ ನಡೆದ 2021ನೇ ಸಾಲಿನ ಭುವನ ಸುಂದರಿ ಸ್ಪರ್ಧೆಯಲ್ಲಿ ಉಡುಪಿಯ ಉದ್ಯಾವರದ ಆಯಡ್ಲಿನ್‌ ಕಸ್ತಲಿನೊ ಮೂರನೇ ರನ್ನರ್‌ಅಪ್‌ ಪ್ರಶಸ್ತಿ ಪಡೆದುಕೊಂಡಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆಯಡ್ಲಿನ್‌ ಅವರು ಉದ್ಯಾವರದ ಕೊರಂಗ್ರಪಾಡಿಯ ನಿವಾಸಿಯಾಗಿರುವ ಆಲ್ಫೊನ್ಸಸ್‌ ಕಸ್ತಲಿನೊ ಹಾಗೂ ಮೀರಾ ಕಸ್ತಲಿನೊ ದಂಪತಿ ಪುತ್ರಿಯಾಗಿದ್ದು, ಇತ್ತೀಚೆಗೆ ಮುಂಬೈನಲ್ಲಿ ನಡೆದ ಲಿವಾ ಮಿಸ್‌ ದಿವಾ ಯುನಿವರ್ಸ್‌-2020 ಸ್ಪರ್ಧೆಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

ಆಯಡ್ಲಿನ್ ಮಂಬೈನಲ್ಲಿ ಶಿಕ್ಷಣ ಪಡೆದಿದ್ದು, ನಟನೆ, ಕೊರಿಯೊಗ್ರಫಿ ಮಾಡುತ್ತಿದ್ದಾರೆ.

ಇನ್ನು ಅಮೇರಿಕಾದ ಫ್ಲೋರಿಡಾದಲ್ಲಿ ನಡೆದ ಮಿಸ್ ಯೂನಿವರ್ಸ್ ಸ್ಪರ್ಧೆಯ ಕೊನೆಯ ಸುತ್ತಿನಲ್ಲಿ ಆಂಡ್ರಿಯಾ ಭುವನ ಸುಂದರಿ ಕಿರೀಟ ಗೆದ್ದಿದ್ದು, ಬ್ರೆಜಿಲ್ ನ ಜೂಲಿಯ ಗಾಮಾ ಮೊದಲ ರನ್ನರ್ ಅಪ್ ಹಾಗೂ ಪೆರುವಿನ ಜಾನಿಕ್ ಮಾಸೆಟಾ ಎರಡನೇ ರನ್ನರ್ ಆಪ್ ಮಿಂಚಿದ್ದಾರೆ.

ಭುವನ ಸುಂದರಿ ಸ್ಪರ್ಧೆಯಲ್ಲಿದ್ದ ವಿಶ್ವದಾದ್ಯಂತ 70 ಸ್ಪರ್ಧಿಗಳು ಭಾಗವಹಿಸಿದ್ದು, ಭಾರತವನ್ನು ಪ್ರತಿನಿಧಿಸಿದ್ದ ಕರಾವಳಿ ಬೆಡಗಿ ಆಯಡ್ಲಿನ್‌ ಕಸ್ತಲಿನೊ ಮೂರನೇ ರನ್ನರ್ ಅಪ್ ಆಗಿರುವುದು ಹೆಮ್ಮೆಯ ವಿಷಯವಾಗಿದೆ.