Recent Posts

Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಶಾಸಕ ಸಂಜೀವ ಮಠಂದೂರು ನಿರ್ದೇಶನದಂತೆ ನಗರಸಭಾ ವ್ಯಾಪ್ತಿಯಲ್ಲಿ ಕೋವಿಡ್ ಜಾಗೃತಿ ಮತ್ತು ವ್ಯಾಕ್ಸಿನೇಷನ್‌ ಮಾಹಿತಿ ಸಂಗ್ರಹ ಅಭಿಯಾನ – ಕಹಳೆ ನ್ಯೂಸ್

ಪುತ್ತೂರು : ನಗರಸಭಾ ವ್ಯಾಪ್ತಿಯಲ್ಲಿ ಶಾಸಕ ಸಂಜೀವ ಮಠಂದೂರು ನಿರ್ದೇಶನದಂತೆ ನಗರ ಮಂಡಲ ಬಿಜೆಪಿ ಅಧ್ಯಕ್ಷ, ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್ ಹಾಗೂ ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ನೇತೃತ್ವದಲ್ಲಿ ಪುತ್ತೂರು ನಗರಸಭಾ ವ್ಯಾಪ್ತಿಯ ಪ್ರತಿ ವಾರ್ಡ್ ಗಳಲ್ಲಿ ಪ್ರತಿ ಮನೆಗೆ ಭೇಟಿ ನೀಡಿ, ಕೋವಿಡ್ ಜಾಗೃತಿ ಹಾಗೂ ವ್ಯಾಕ್ಸಿನೇಷನ್‌ ಮಾಹಿತಿ ಸಂಗ್ರಹ ಅಭಿಯಾನ ನಡೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಅಭಿಯಾನದಲ್ಲಿ ನಗರಸಭಾ ಸದಸ್ಯರು, ಬಿಜೆಪಿ ಸ್ಥಳೀಯ ಮುಖಂಡರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿ ಸಹಿತ ನಗರಸಭಾ ಸಿಬ್ಬಂದಿಗಳೊಂದಿಗೆ ಭೇಟಿ ನೀಡಿ, ಪ್ರತಿ ಮನೆಯಲ್ಲಿ ಪಡೆಯುವ ಮಾಹಿತಿ ಈಕಳಗಿನಂತಿದೆ :
*ಬೆಂಗಳೂರಿನಿಂದ ಬಂದವರ ಬಗ್ಗೆ ಮಾಹಿತಿ ನೀಡುವುದು
*ತೀರಾ ಅಗತ್ಯ ಸಂದರ್ಭದಲ್ಲಿ ಮಾತ್ರ ಪೇಟೆಗೆ ಬರುವುದು
*ತೀರಾ ಅಗತ್ಯವಾದ ಸಂಬಂಧಿಗಳ ಕಾರ್ಯಕ್ರಮದಲ್ಲಿ ಮಾತ್ರ ಭಾಗವಹಿಸುವುದು
*ಹೊರ ಸಂಚಾರ ಮಾಡಿದವರು ಮನೆ ಸೇರುವಾಗ ಸ್ಯಾನಿಟೈಸರ್ ಬಳಸುವುದು
* ಆಗಾಗ ಸಾಬೂನು ಉಪಯೋಗಿಸಿ ಕೈ ತೊಳೆಯುವುದು
*ಅಪರಿಚಿತ ವ್ಯಕ್ತಿಗಳ ಜೊತೆ ಮಾತಾಡುವಾಗ ಸಾಕಷ್ಟು ಅಂತರ ಕಾಪಾಡುವುದು
* ಮಕ್ಕಳು ವೃದ್ದರ ಬಗ್ಗೆ ವಿಶೇಷ ಕಾಳಜಿವಹಿಸುವುದು
* ಕೆಮ್ಮು ಶೀತ ಜ್ವರ ಕಂಡುಬಂದಲ್ಲಿ ತಕ್ಷಣ ಸಮೀಪದ ಆರೋಗ್ಯ ಕೇಂದ್ರ ವನ್ನು ಸಂಪರ್ಕಿಸುವುದು ಇತ್ಯಾದಿ ಬಗ್ಗೆ ಮನೆ ಬೇಟಿ ಸಂದರ್ಭ ವಿನಂತಿಸಲಾಗಿದೆ.