ನಾಳೆ ಜನಪ್ರೀಯ ಶಾಸಕಿ ಶುಕುಂತಳಾ ಶೆಟ್ಟಿ ನಾಮಪತ್ರ ಸಲ್ಲಿಕೆ ; ನನ್ನ ಕ್ಷೇತ್ರದ ಅಭಿವೃದ್ಧಿ, ಜನಪರ ಯೋಜನೆಗಳೇ ನನ್ನ ಗೆಲುವು – ಕಹಳೆ ನ್ಯೂಸ್
ಪುತ್ತೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಪುತ್ತೂರು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಹಾಲಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಎ. 23ರಂದು ಬೆಳಗ್ಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬೆಳಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕೇಂದ್ರ ಜುಮಾ ಮಸೀದಿ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಜೈನ ಬಸದಿ, ಮಾಯಿದೆ ದೇವುಸ್ ಚರ್ಚ್, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದರು.
ಅನಂತರ ಎರಡೂ ಬ್ಲಾಕ್‌ಗಳಿಂದ ಕಾರ್ಯಕರ್ತರು ನೆಲ್ಲಿಕಟ್ಟೆಯಲ್ಲಿನ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಸೇರಲಿದ್ದಾರೆ. ಅಲ್ಲಿಂದ ಪಾದಯಾತ್ರೆ ಮೆರ ವಣಿಗೆಯ ಮೂಲಕ ಸಾಗಿ ಸಹಾಯಕ ಕಮಿಷನರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಸುಮಾರು 2 ಸಾವಿರ ಮಂದಿ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಮ ಪತ್ರ ಸಲ್ಲಿಸಿಯಾದ ಬಳಿಕ ಟೌನ್‌ಬ್ಯಾಂಕ್ ಸಭಾಂಗಣದಲ್ಲಿ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ ಎಂದರು.
ಗೆಲುವು ಖಚಿತ
ಶಕುಂತಳಾ ಟಿ. ಶೆಟ್ಟಿ ಅವರು 5 ವರ್ಷದ ಅವಧಿಯ ಅಭಿವೃದ್ಧಿ ಕಾರ್ಯಗಳು ಹಾಗೂ ಸಿದ್ದರಾಮಯ್ಯ ಸರಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಚುನಾವಣಾ ಪ್ರಚಾರ ಕೈಗೊಳ್ಳಲಿದ್ದೇವೆ. ಶಕುಂತಳಾ ಶೆಟ್ಟಿ ಅವರು ಸರಳ, ಯಾವುದೇ ಕಪ್ಪುಚುಕ್ಕೆ ಇಲ್ಲದ, ಮಹಿಳೆಯರಿಗೆ ಆದರ್ಶವಾದ ರಾಜಕಾರಣಿ. ಪಕ್ಷ, ಜಾತಿ, ಮತಗಳನ್ನು ಬಿಟ್ಟು ನ್ಯಾಯದ ಪರ ನಿಲ್ಲುವ ಅವರ ಆದರ್ಶಕ್ಕೆ ಈ ಬಾರಿ ಗೆಲುವಾಗಲಿದೆ ಎಂದು ಹೇಳಿದರು.
ಭಿನ್ನಮತದ ಲಾಭ ಬೇಡ
ಈಗಾಗಲೇ ಪ್ರತಿ ಮನೆಗಳ ಭೇಟಿ ಕಾರ್ಯಕ್ರಮವನ್ನು ಮುಗಿಸಲಾಗಿದೆ. 4ನೇ ಹಂತದ ಪ್ರಚಾರ ಕಾರ್ಯನಡೆಯುತ್ತಿದೆ. ಪಕ್ಷದಲ್ಲಿ ಅಧಿಕೃತ ಅಭ್ಯರ್ಥಿ ಘೋಷಣೆಯಾದ ಬಳಿಕ ಎಲ್ಲರೂ ಒಟ್ಟಾಗಿದ್ದಾರೆ. ವಿರೋಧ ಪಕ್ಷಗಳ ಭಿನ್ನಮತದ ಲಾಭ ನಮಗೆ ಬೇಕಾಗಿಲ್ಲ. ನಮ್ಮ ಪ್ರಯತ್ನದಿಂದ ಶೇ.100 ರಷ್ಟು ಗೆಲುವು ನಮ್ಮದಾಗಲಿದೆ ಎಂದು ಮಹಮ್ಮದ್ ಬಡಗನ್ನೂರು ಹೇಳಿದರು. ವಿಟ್ಲ -ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ವಿಶ್ವನಾಥ್, ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿ ವಲೇರಿಯನ್ ಡಯಾಸ್ ಉಪಸ್ಥಿತರಿದ್ದರು.