Recent Posts

Sunday, January 19, 2025
ಸುದ್ದಿ

PUBG ಪ್ರಿಯರಿಗೆ ಖುಷಿ ಸುದ್ದಿ: ಪೂರ್ವ ನೋಂದಣಿ ಮಾಡಿಕೊಂಡವರಿಗೆ ರಿವಾರ್ಡ್ಸ್ – ಕಹಳೆ ನ್ಯೂಸ್

ಪಬ್ಜಿ ಪ್ರಿಯರಿಗೆ ಖುಷಿ ಸುದ್ದಿಯೊಂದಿದೆ. ಭಾರತದ ಪಬ್ಜಿ ಪ್ರೇಮಿಗಳ ಕಾಯುವಿಕೆ ಮುಗಿದಿದೆ. ಬ್ಯಾಟೆಲ್ ಗ್ರೌಂಡ್ ಮೊಬೈಲ್ ಇಂಡಿಯಾ ಆಂಡ್ರಾಯ್ಡ್ ಬಳಕೆದಾರರಿಗಾಗಿ ಪೂರ್ವ ನೋಂದಣಿಯನ್ನು ಪ್ರಾರಂಭಿಸಿವೆ. ಐಒಎಸ್ ಬಳಕೆದಾರರಿಗೆ ಇದು ಯಾವಾಗ ಲಭ್ಯವಾಗಲಿದೆ ಎಂಬ ಮಾಹಿತಿ ಸಿಕ್ಕಿಲ್ಲ. ಆದ್ರೆ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಈ ಆಟ ಉಚಿತವಾಗಿರಲಿದೆ ಎಂದು ಗೇಮ್ ಡೆವಲಪರ್ ಕ್ರಾಫ್ಟನ್ ಹೇಳಿದೆ.

ಪಬ್ಜಿ ಮೊಬೈಲ್ ನ ಭಾರತೀಯ ಆವೃತ್ತಿ ಹೊಸ ಅವತಾರದಲ್ಲಿ ಬಿಡುಗಡೆಯಾಗಲಿದೆ. ಬ್ಯಾಟಲ್ ಗ್ರೌಂಡ್ ಮೊಬೈಲ್ ಇಂಡಿಯಾ ಜೂನ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಆಟಗಾರರ ಸಂಖ್ಯೆ ಹೆಚ್ಚಿಸಲು ಹಾಗೂ ಉತ್ಸಾಹವನ್ನು ಉಳಿಸಿಕೊಳ್ಳಲು ಈಗ್ಲೇ ಹೆಸರು ನೋಂದಾಯಿಸುವ ಆಟಗಾರರಿಗೆ ರಿವಾರ್ಡ್ಸ್ ನೀಡುವುದಾಗಿ ಕ್ರಾಫ್ಟನ್ ಹೇಳಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪೂರ್ವ ನೋಂದಣಿ ಕೇವಲ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಐಒಎಸ್ ಬಳಕೆದಾರರಿಗೆ ಇದು ಯಾವಾಗ ಲಭ್ಯವಾಗಲಿದೆ ಎಂಬ ಬಗ್ಗೆ ಮಾಹಿತಿ ನೀಡಲಾಗಿಲ್ಲ. ಪೂರ್ವ ನೋಂದಣಿ ಲಿಂಕ್ ಮಧ್ಯಾಹ್ನ 12 ಗಂಟೆಯಿಂದ ಲೈವ್ ಆಗಲಿದೆ. ಲಿಂಕ್ ಲೈವ್ ಆದ ನಂತರ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಬೇಕು. ನಂತರ ಗೇಮ್ ಹುಡುಕಿ ಪೂರ್ವ-ರಿಜಿಸ್ಟರ್ ಬಟನ್ ಕ್ಲಿಕ್ ಮಾಡಿ.

ಜಾಹೀರಾತು
ಜಾಹೀರಾತು
ಜಾಹೀರಾತು