Recent Posts

Monday, January 20, 2025
ಸುದ್ದಿ

BIG BREAKING NEWS : ರಾಜ್ಯದ ಜನತೆಗೆ ಸಿಎಂ ಬಿಎಸ್ ವೈ ಭರ್ಜರಿ ಗುಡ್ ನ್ಯೂಸ್ : 1,250 ಕೋಟಿ ರೂ. ಪರಿಹಾರ ಘೋಷಣೆ! ಯಾರಿಗೆ ಎಷ್ಟು ಪರಿಹಾರ? ಇಲ್ಲಿದೆ ಫುಲ್ ಡಿಟೇಲ್ಸ್- ಕಹಳೆ ನ್ಯೂಸ್

ಬೆಂಗಳೂರು : ರಾಜ್ಯದ ಜನತೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರ್ಜರಿ ಸಿಹಿಸುದ್ದಿ ನೀಡಿದ್ದು, ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ 1,250 ಕೋಟಿ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

ಲಾಕ್ ಡೌನ್ ಪ್ಯಾಕೇಜ್ ಘೋಷಣೆ ಕುರಿತಂತೆ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಹಿರಿಯ ಸಚಿವರ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, 1250 ಕೋಟಿ ರೂ. ಪರಿಹಾರ ಘೋಷಣೆ ಮಾಡಲಾಗಿದ್ದು, ಹೂವು ಬೆಳಗಾರರಿಗೆ ಪ್ರತಿ ಹೆಕ್ಟರ್ ಹೂ ಹಾನಿಗೆ 10 ಸಾವಿರ ಸಹಾಯಧನ, ಹಣ್ಣು ಮತ್ತು ತರಕಾರಿ ಬೆಳಗಾರರಿಗೆ ಒಂದು ಹೆಕ್ಟರ್ ಗೆ 10 ಸಾವಿರ ಸಹಾಯಧನ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯಾರಿಗೆ ಎಷ್ಟು ಪರಿಹಾರ? ಇಲ್ಲಿದೆ ಫುಲ್ ಡಿಟೇಲ್ಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಆಟೋ, ಟ್ಯಾಕ್ಸಿ ಚಾಲಕರಿಗೆ 3 ಸಾವಿರ ರೂ. ಸಹಾಯಧನ

ಕಟ್ಟಡ ಕಾರ್ಮಿರಕಿಗೆ 3 ಸಾವಿರ ರೂ.

ಅಸಂಘಟಿತ ಕಾರ್ಮಿಕರಿಗೆ ತಲಾ 2 ಸಾವಿರ ರೂ.

ರಸ್ತೆ ಬದಿ ವ್ಯಾಪಾರ ಮಾಡೋರಿಗೆ -2 ಸಾವಿರ ರೂ.

ಕಲಾವಿದರು, ಕಲಾತಂಡಗಳಿಗೆ ತಲಾ ಮೂರು ಸಾವಿರ ರೂ.

ಗರೀಬ್ ಕಲ್ಯಾಣ ಯೋಜನೆಯಡಿ ಪಡಿತ ಚೀಟಿದಾರರ ಕುಟುಂಬದ ಪ್ರತಿ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ

ಬಿಬಿಎಂಪಿ ವ್ಯಾಪ್ತಿ ನಗರ ಪ್ರದೇಶದಲ್ಲಿ ಉಚಿತ ಊಟ

ಕೊರೊನಾ ರೋಗಿಗಳಿಗೆ ಸರ್ಕಾರಿ ಅಸ್ಪತ್ರೆಗಳಲಿ ಉಚಿತ ಚಿಕಿತ್ಸೆ

ಕೋವಿಡ್ ನಿರ್ವಹಣೆಗೆ ಗ್ರಾಮಪಂಚಾಯಿತಿಗಳಿಗೆ ಹಣ

ಸಾಲ ಮರುಪಾವತಿ ಕಂತು 3 ತಿಂಗಳು ಮುಂದೂಡಿಕೆ ಮಾಡಲಾಗಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.