Recent Posts

Monday, January 20, 2025
ರಾಜ್ಯಸುದ್ದಿ

BREAKING NEWS : ಮೇ.24ರ ನಂತ್ರ ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆ ಬಗ್ಗೆ ಸಿಎಂ ಯಡಿಯೂರಪ್ಪ ಹೇಳಿದ್ದೇನು ಗೊತ್ತಾ.?-ಕಹಳೆ ನ್ಯೂಸ್

ಬೆಂಗಳೂರು : ರಾಜ್ಯ ಸರ್ಕಾರದಿಂದ ಕೊರೋನಾ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವಂತ ರಾಜ್ಯದ ಜನರಿಗೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ರೈತರಿಗೆ ಸಹಕಾರಿ ಸಂಘಗಳಿಂದ ಪಡೆದ ಸಾಲದ ಕಂತು ಪಾವತಿ ಮುಂದೂಡಿದ್ದರೇ, ಹೂ, ಹಣ್ಣು, ತರಕಾರಿ ಬೆಳೆಗಾರರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಅನ್ನು ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಅಲ್ಲದೇ ಮೇ.24ರ ನಂತ್ರ ಕೊರೋನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ವಿಸ್ತರಣೆ ಕುರಿತಂತೆ ಅಂದೇ ನಿರ್ಧಾರ ಪ್ರಕಟಿಸೋದಾಗಿ ತಿಳಿಸಿದ್ದಾರೆ.

ಈ ಕುರಿತಂತೆ ಸಚಿವರೊಂದಿಗೆ ಸಭೆ ನಡೆಸಿದ ಬಳಿಕ, ಸುದ್ದಿಗೋಷ್ಠಿ ನಡೆಸಿ ಇಂದು ಮಾತನಾಡಿದಂತ ಅವರು, ಕೋವಿಡ್ 19 ಸಾಂಕ್ರಾಮಿಕ 2ನೇ ಅಲೆಯ ತೀವ್ರತೆಯಿಂದಾಗಿ ಹೆಚ್ಚುತ್ತಿರುವಂತ ಸೋಂಕಿತರ ಸಂಖ್ಯೆ ನಿಯಂತ್ರಿಸುವ ಸಲುವಾಗಿ ಮೇ.24ರವರೆಗೆ ವಾಣಿಜ್ಯ ಮತ್ತು ಇತರೆ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸೋದು ಅನಿವಾರ್ಯವಾಗಿತ್ತು. ಈ ನಿರ್ಬಂಧದ ನಡುವೆಯು ಕೆಲವು ಸೇವೆಗೆ ಅವಕಾಶ ಕಲ್ಪಿಸಲಾಗಿತ್ತು. ಬೆಳಿಗ್ಗೆ 6-10ರವರೆಗೆ ದಿನಸಿ, ಹೂ, ತರಕಾರಿ, ಹಾಲು ಖರೀದಿಗೆ ಅವಕಾಶ ಮಾಡಿಕೊಡಲಾಗಿತ್ತು. ಕೊರೋನಾ ತಂದ ಬಿಕ್ಕಟ್ಟಿನಿಂದಾಗಿ ವಾಣಿಜ್ಯ ಚಟುವಟಿಕೆ ನಿರ್ಬಂಧಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೋವಿಡ್ 1ನೇ ಅಲೆಯಲ್ಲಿ ನಮ್ಮ ಸರ್ಕಾರ ಹಲವಾರು ವಲಯಗಳಲ್ಲಿ ನಮ್ಮ ಸರ್ಕಾರ ಆರ್ಥಿಕ ಪ್ಯಾಕೇಜ್ ನೀಡಿದೆ. ಇದೀಗ ಕೊರೋನಾ ಸಂಕಷ್ಟದ ಕಾಲದಲ್ಲಿ ಈ ಕೆಳಗಿನ ಸಹಾಯ ಘೋಷಣೆ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುಮಾರು 1500 ಕೋಟಿಗೂ ಹೆಚ್ಚು ಕಾರ್ಯಕ್ರಮ ಮಾಡಲು ನಿರ್ಧಾರ ಮಾಡಲಾಗಿದೆ. ಹೂ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ 10 ಸಾವಿರ ಸಹಾಯ ಧನ ನೀಡಲಾಗುತ್ತದೆ. ಹಣ್ಣು-ತರಕಾರಿ ಬೆಳಗಾರರಿಗೆ 1 ಹೆಕ್ಟೇರ್ ಗೆ ಪ್ರತಿ ಹೆಕ್ಟೇರ್ ಗೆ 10 ಸಾವಿರ ನೀಡಲಾಗುತ್ತದೆ. ಆಟೋ ಟ್ಯಾಕ್ಸಿ ಚಾಲಕರಿಗೆ ಪ್ರತಿಯೊಬ್ಬರಿಗೂ 3 ಸಾವಿರ ನೀಡಲಾಗುತ್ತದೆ ಎಂದರು.

ಕಟ್ಟಡ ಕಾರ್ಮಿಕರಿಗೆ ತಲಾ ಮೂರು ಸಾವಿರದಂತೆ ಕರ್ನಾಟಕ ಕಟ್ಟಡ ಕಲ್ಯಾಣ ಮಂಡಳಿಯಲ್ಲಿ ನೊಂದಣಿ ಮಾಡಿಸಿದವರಿಗೆ ನೀಡಲಾಗುತ್ತದೆ. ಅಸಂಘಟಿತ ಕಾರ್ಮಿಕರಾದಂತ ಕ್ಷೌರಿಕರು, ಕುಂಬಾರಿಗಳು, ಕಮ್ಮಾರಿಗಳು ಸೇರಿದಂತ 3.5 ಲಕ್ಷ ಜನರಿಗೆ 2 ಸಾವಿರ ನೀಡಲಾಗುತ್ತದೆ ಎಂದರು.

ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವವರಿಗೆ 2 ಸಾವಿರ ರೂಪಾಯಿಗಳನ್ನು 2.20 ಲಕ್ಷ ಜನರಿಗೆ ನೀಡಲಾಗುತ್ತದೆ. ಕಲಾವಿಧರು, ಕಲಾತಂಡಗಳಿಗೆ ತಲಾ 3 ಸಾವಿರ ನೀಡಲಾಗುತ್ತದೆ. ರೈತರು ಮತ್ತು ಸ್ವಸಾಹಾಯ ಸಂಘಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರದಿಂದ 1-5-2020 ರಿಂದ ಮರು ಪಾವತಿಸಬೇಕಾದಂತ ಸಾಲದ ಮೊತ್ತವನ್ನು 31-07-2021 ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದರು.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ ಬಿಪಿಎಲ್ ಕಾರ್ಡ್ ದಾರರಿಗೆ ಮೇ, ಜೂನ್ ತಿಂಗಳಲ್ಲಿ ಉಚಿತವಾಗಿ ಪಡಿತರ ಧಾನ್ಯ ನೀಡಲಾಗುತ್ತದೆ. ಇದಕ್ಕಾಗಿ 180 ಕೋಟಿ ಕರ್ಚು ಮಾಡಲಾಗುತ್ತದೆ ಎಂದರು.

ಪಡಿತರ ಚೀಟಿಗಾಗಿ ಅರ್ಚಿ ಸಲ್ಲಿಸಿದವರಿಗೆ, ಪಡಿತರ ಚೀಟಿ ನೀಡದಿದ್ದರೂ, ಬಿಪಿಎಲ್ ಕಾರ್ಡ್ ದಾರರಿಗೆ ಮೇ, ಜೂನ್ ತಿಂಗಳ ಉಚಿತ ಪಡಿತರ, ಎಪಿಎಲ್ ಕಾರ್ಡ್ ದಾರರಿಗೆ ಕೆಜಿಗೆ 15 ರೂಪಾಯಿಯಂತೆ ನೀಡಲಾಗುತ್ತದೆ ಎಂದು ತಿಳಿಸಿದರು.

ಬಿಬಿಎಂಪಿ ಹಾಗೂ ನಗರ ಪ್ರದೇಶದ ಬಡ ಜನರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ. ಇದರಿಂದ 6 ಲಕ್ಷ ಜನರಿಗೆ ಉಪಯೋಗವಾಗುತ್ತಿದೆ ಎಂದರು.

ಇಲ್ಲಿಯವರೆಗೆ 2.6 ಲಕ್ಷ ಜನರಿಗೆ ಉಚಿತವಾಗಿ ಕೋವಿಡ್ ಚಿಕಿತ್ಸೆ ನೀಡಲಾಗಿದೆ. ಮೂರುವರೆ ಕೋಟಿ ಲಸಿಕೆ ಖರೀದಿಗೆ ಆದೇಶ ಮಾಡಲಾಗಿದೆ. ಕೋವಿಡ್ ನಿರ್ವಹಣೆಗಾಗಿ ಪ್ರತಿ ಗ್ರಾಮ ಪಂಚಾಯ್ತಿಗಳಿಗೆ 50 ಸಾವಿರ ನೀಡಲಾಗುತ್ತದೆ ಎಂದರು

2500 ವೈದ್ಯರನ್ನು ಕೋವಿಡ್ ಚಿಕಿತ್ಸೆಗಾಗಿ ಮೂರು ದಿನದೊಳಗೆ ನೇಮಕ ಮಾಡಿಕೊಳ್ಳಲು ತೀರ್ಮಾನ ಮಾಡಲಾಗಿದೆ. ಲೈನ್ ಮೆನ್ ಗಳು, ಗ್ಯಾಸ್ ಸಿಲಿಂಡರ್ ತಲುಪಿಸೋರನ್ನು ಮುಂಚೂಣಿ ಕಾರ್ಯಕರ್ತರು ಎಂದು ಪರಿಗಣಿಸಿ, ಲಸಿಕೆ ನೀಡಲಾಗುತ್ತದೆ ಎಂದರು.

10ಕ್ಕಿಂತ ಹೆಚ್ಚು ಕೊರೋನಾ ಸೋಂಕು ಪತ್ತೆಯಾದಂತ ಗ್ರಾಮಗಳಲ್ಲಿ ನನ್ನ ನೇತೃತ್ವದಲ್ಲಿ ಕೋವಿಡ್ ವೀಡಿಯೋ ಸಂವಾದ ನಡೆಸುವ ಮೂಲಕ, ಕ್ರಮ ಕೈಗೊಳ್ಳಲಾಗಿದೆ ಎಂದರು.

ಮೇ.24ರ ನಂತ್ರ ಲಾಕ್ ಡೌನ್ ವಿಸ್ತರಣೆ ಬಗ್ಗೆ, ಮೇ.24ರಂದೇ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುತ್ತದೆ. ಸದ್ಯಕ್ಕೆ ಇಂದು ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದರು.

ಒಟ್ಟಾರೆಯಾಗಿ ರಾಜ್ಯದಲ್ಲಿ ಕೊರೋನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವಂತ ರಾಜ್ಯದ ಜನರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, 1250 ಕೋಟಿ ರೂಪಾಯಿಯ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ಈ ಆರ್ಥಿಕ ಪ್ಯಾಕೇಜ್ ಹಣವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ತಲುಪಲಿದೆ. ಈ ಮೂಲಕ ಸಂಕಷ್ಟದಲ್ಲಿರುವಂತ ರಾಜ್ಯದ ಜನರ ನೆರವಿಗೆ ಧಾವಿಸಿದ್ದಾರೆ.