Sunday, November 24, 2024
ಸುದ್ದಿ

ತೌಕ್ತೇ ಬಳಿಕ ಯಾಸ್‌ ಚಂಡಮಾರುತ – ಕರಾವಳಿ ಜಿಲ್ಲೆಗಳಲ್ಲಿ ಮತ್ತಷ್ಟು ಮಳೆ ಸಾಧ್ಯತೆ-ಕಹಳೆ ನ್ಯೂಸ್

ಕರಾವಳಿ ಭಾಗದಲ್ಲಿ ತೌಕ್ತೇ ಚಂಡಮಾರುತದಿಂದ ಮಳೆಯಾಗಿದ್ದು ಇದೀಗ ಬಂಗಾಲಕೊಲ್ಲಿಯಲ್ಲಿ ಸೃಷ್ಟಿಯಾಗಲಿರುವ ಚಂಡಮಾರುತ ಪರಿಣಾಮ ಮುಂದಿನ ವಾರದಿಂದ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ.

ಬಂಗಾಲಕೊಲ್ಲಿಯ ರೂಪುಗೊಳ್ಳುತ್ತಿರುವ ಚಂಡಮಾರುತಕ್ಕೆ ಯಾಸ್‌ ಎಂದು ಹೆಸರಿಡಲಾಗಿದ್ದು, ಹೊಸ ಚಂಡಮಾರುತದ ಕಡಿಮೆ ಒತ್ತಡವು ಮೇ 22 ರೊಳಗೆ ಬಂಗಾಳಕೊಲ್ಲಿಯಲ್ಲಿ ರೂಪುಗೊಳ್ಳುವ ನಿರೀಕ್ಷೆಯಿದೆ. ಮೇ 23 ಚಂಡಮಾರುತದ ಒತ್ತಡದ ಹಂತವನ್ನು ಗುರುತಿದ ಬಳಿಕ ಅಂತಿಮವಾಗಿ ಚಂಡಮಾರು ರೂಪುಗೊಂಡು ಮೇ 24-25ರ ವೇಳೆಗೆ ವೇಗವನ್ನು ಪಡೆಯುವ ನಿರೀಕ್ಷೆಯಿದೆ. ಮೇ 26 ರಂದು ಕೇರಳ ಅಥವಾ ಒಡಿಶಾ ಮತ್ತು ಪಶ್ಚಿಮ ಬಂಗಾಳದ ತೀರವನ್ನು ಅಪ್ಪಳಿಸುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಹವಾಮಾನ ಮುನ್ಸೂಚನೆ ಕೇಂದ್ರದ ಹಿರಿಯ ವಿಜ್ಞಾನಿ ಆರ್.ಕೆ.ಜೆನಮಣಿ ಬುಧವಾರ ಮಾಹಿತಿ ನೀಡಿದ್ದಾರೆ,

ಜಾಹೀರಾತು
ಜಾಹೀರಾತು
ಜಾಹೀರಾತು

ಇದರೊಂದಿಗೆ ಮುಂಗಾರಿಗೆ ಪ್ರವೇಶಕ್ಕೆ ದಿನಗಣನೆ ಆರಂಭವಾಗಿದ್ದು, ಐಎಂಡಿ ಪ್ರಕಾರ ಮೇ 31ರಂದು ಕೇರಳ ಕರಾವಳಿ ತೀರಕ್ಕೆ ಮುಂಗಾರು ಪ್ರವೇಶ ಪಡೆಯಲಿದೆ. ಬಳಿಕ ಒಂದೆರಡು ದಿನಗಳಲ್ಲಿ ರಾಜ್ಯ ಕರಾವಳಿಗೆ ಆಗಮಿಸಲಿದೆ. ಇದಕ್ಕೂ ಮುನ್ನ ಚಂಡಮಾರುತ ಅಪ್ಪಳಿಸಲಿದ್ದು, ಮುಂಗಾರಿನ ಮೇಲೆ ಪರಿಣಾಮ ಸಾಧ್ಯತೆ ಇದೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು