Monday, January 20, 2025
ಸುದ್ದಿ

ಮದುವೆಗೆ ಬಂದು ಕಪ್ಪೆಯಂತೆ ಜಿಗಿಯುತ್ತ ವಾಪಸ್ ಹೋದ ಅತಿಥಿಗಳು – ಕಹಳೆ ನ್ಯೂಸ್

ಭೋಪಾಲ್: ಲಾಕ್‍ಡೌನ್ ನಿಮಯ ಮೀರಿ ಮದುವೆಗೆ ಖುಷಿಯಿಂದ ಹೋದ ಅತಿಥಿಗಳಿಗೆ ಫುಲ್ ಶಾಕ್ ಕೊಟ್ಟ ಪೊಲೀಸರು ವಿಭಿನ್ನವಾದ ಶಿಕ್ಷೆಯನ್ನು ನೀಡಿರುವ ಘಟನೆ ಮಧ್ಯಪ್ರದೇಶದ ಭಿಂಡ್‍ನಲ್ಲಿ ನಡೆದಿದೆ.

ಮಧ್ಯಪ್ರದೇಶದ ಉಮಾರಿ ಎಂಬ ಹಳ್ಳಿಯಲ್ಲಿ ಮದುವೆ ನಡೆಯುತ್ತಿತ್ತು. ಈ ವಿವಾಹದಲ್ಲಿ ಸುಮಾರು 300 ಮಂದಿ ಸೇರಿದ್ದರು. ಈಗ ಯಾವುದೇ ಮದುವೆ, ಶುಭಸಮಾರಂಭ ನಡೆಯಬೇಕೆಂದರೂ ಜಿಲ್ಲಾಡಳಿತದ ಅನುಮತಿ ಬೇಕು. ಹಾಗಾಗಿ ಸಹಜವಾಗಿಯೇ ಜಿಲ್ಲಾಡಳಿತ, ಪೊಲೀಸರು ಒಂದು ಗಮನ ಇಟ್ಟಿರುತ್ತಾರೆ. ಅಂತೆಯೇ ಇಲ್ಲಿಯೂ ಸಹ ಕೊರೊನಾ ಲಾಕ್‍ಡೌನ್ ನಿಯಮ ಪಾಲನೆಯಾಗಿದೆಯೇ ಎಂದು ಪರಿಶೀಲನೆ ನಡೆಸಲು ಪೊಲೀಸರು ಬಂದಿದ್ದರು. ಪೊಲೀಸರು ಸ್ಥಳಕ್ಕೆ ಬಂದಾಗ ಅಲ್ಲಿ 300ಕ್ಕೂ ಹೆಚ್ಚು ಮಂದಿ ಸೇರಿದ್ದು ಕಂಡುಬಂತು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಪೊಲೀಸರನ್ನು ನೋಡುತ್ತಿದ್ದಂತೆ ಅನೇಕರು ತಪ್ಪಿಸಿಕೊಂಡು ಓಡಿದರೂ, ಮತ್ತೊಂದಷ್ಟು ಮಂದಿ ಸಿಕ್ಕಿಬಿದ್ದರು. ಹೀಗೆ ಸಿಕ್ಕಿಬಿದ್ದವರಿಗೆ ಪೊಲೀಸರು ಕಪ್ಪೆಯಂತೆ ಜಿಗಿಯುತ್ತಾ ಹೋಗುವ ಶಿಕ್ಷೆಯನ್ನು ನೀಡಿದ್ದಾರೆ. 17 ಮಂದಿ ಪುರುಷರು ಕಪ್ಪೆಯಂತೆ ಜಿಗಿದಿರುವ ವೀಡಿಯೋ ವೈರಲ್ ಆಗಿದೆ.

ಮಧ್ಯಪ್ರದೇಶದಲ್ಲಿ 7 ಲಕ್ಷಕ್ಕೂ ಅಧಿಕ ಕೊರೊನಾ ಕೇಸ್‍ಗಳಿದ್ದು, ಕಳೆದ 24 ಗಂಟೆಯಲ್ಲಿ 5,065 ಪ್ರಕರಣಗಳು ದಾಖಲಾಗಿವೆ. ಇಲ್ಲಿಯವರೆಗೆ ಆ ರಾಜ್ಯದಲ್ಲಿ 7227 ಮಂದಿ ಮೃತಪಟ್ಟಿದ್ದಾರೆ.