Saturday, April 5, 2025
ಉಡುಪಿದಕ್ಷಿಣ ಕನ್ನಡಸಂತಾಪಸುದ್ದಿ

ಖ್ಯಾತ ಛಾಯಾಗ್ರಾಹಕ ಡೆನಿಸ್ ರೆಗೊ ನಿಧನ – ಕಹಳೆ ನ್ಯೂಸ್

ಮಂಗಳೂರು, ಮೇ.22 : ಖ್ಯಾತ ಛಾಯಾಗ್ರಾಹಕ ಡೆನಿಸ್ ಸ್ಟುಡಿಯೋದ ಡೆನಿಸ್ ರೆಗೊ ಶನಿವಾರ ನಿಧನರಾಗಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಡೆನಿಸ್ ಅವರು ಮೂರು ವಾರಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ಮತ್ತು ಉಡುಪಿಯಲ್ಲಿ ಛಾಯಾಗ್ರಹಣ ಜಗತ್ತಿನಲ್ಲಿ ಡೆನಿಸ್ ಅವರು ಪರಿಚಿತ ಮುಖ. ಅವರ ಫೋಟೋ ಸ್ಟುಡಿಯೋ ಬಲ್ಮಠದಲ್ಲಿದೆ.

ಇನ್ನು 50 ವರ್ಷಗಳಿಂದ ಛಾಯಾಗ್ರಾಹಣ ಕ್ಷೇತ್ರದಲ್ಲಿದ್ದು, ಜಿಲ್ಲೆಯ ಅನೇಕ ಹವ್ಯಾಸಿ ಛಾಯಾಗ್ರಾಹಕರಿಗೆ ಸ್ಫೂರ್ತಿ ನೀಡಿದರು.

ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿನ ಹಲವಾರು ಧಾರ್ಮಿಕ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಡೆನಿಸ್ ಮುಖ್ಯ ಛಾಯಾಗ್ರಾಹಕರಾಗಿದ್ದರು.

ಮೃತರು ಪತ್ನಿ ಮೋನಿಕಾ, ಮಗಳು ಮಿರಿಯಮ್ ಮತ್ತು ಮಗ ಡ್ಯಾರಿಲ್ ಅವರನ್ನು ಅಗಲಿದ್ದಾರೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ