Monday, January 20, 2025
ರಾಜ್ಯ

ಕಿಲ್ಲರ್ ಕೊರೊನಾಗೆ ರಾಜ್ಯದಲ್ಲಿ 24 ಗಂಟೆಯಲ್ಲಿ 626  ಮಂದಿ ಬಲಿ ;35573 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ : 25979 ಮಂದಿಗೆ ಕೊರೊನಾ ಪಾಸಿಟಿವ್ – ಕಹಳೆ ನ್ಯೂಸ್

ಬೆಂಗಳೂರು: ಕಟ್ಟುನಿಟ್ಟಿನ ಲಾಕ್ ಡೌನ್ ಘೋಷಣೆಯಾದಾಗಿನಿಂದ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖ ಕಾಣಿಸಿದೆ. ಇಂದು (ಮೇ.23) 25979 ಕೋವಿಡ್ ಹೊಸ ಪ್ರಕರಣಗಳು ಪತ್ತೆಯಾಗಿವೆ. ಆದರೆ, ದಾಖಲೆ ಪ್ರಮಾಣದಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಕಳೆದ 24 ಗಂಟೆಗಳ ಅವಧಿಯಲ್ಲಿ ( ದಿನಾಂಕ : 22.05.2021, 00:00 ರಿಂದ 23:59ರ ವರೆಗೆ) 25979 ಜನರಿಗೆ ಕೋವಿಡ್ ಪಾಸಿಟಿವ್ ಸೋಂಕು ತಗಲಿರುವುದು ದೃಢ ಪಟ್ಟಿದೆ. ಆದರೆ, ಇದೆ ಅವಧಿಯಲ್ಲಿ 626 ಜನರು ಕೋವಿಡ್ ಮಾರಿಗೆ ಪ್ರಾಣ ಕಳೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗುಣಮಖರಾದವರ ಸಂಖ್ಯೆ ಹೆಚ್ಚು :

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಕಳೆದ ಕೆಲ ದಿನಗಳಿಂದ ಕೋವಿಡ್ ಹೊಸ ಪ್ರಕರಣಗಳಿಗೆ ಹೋಲಿಸಿದರೆ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇಂದು ಕೂಡ 35573 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಹೋಗಿದ್ದಾರೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-218, ಬಳ್ಳಾರಿ-1190, ಬೆಳಗಾವಿ-1066, ಬೆಂಗಳೂರು ಗ್ರಾಮಾಂತರ-400, ಬೆಂಗಳೂರು ನಗರ-7494, ಬೀದರ್-49, ಚಾಮರಾಜನಗರ-407, ಚಿಕ್ಕಬಳ್ಳಾಪುರ-613, ಚಿಕ್ಕಮಗಳೂರು-577, ಚಿತ್ರದುರ್ಗ-365, ದಕ್ಷಿಣ ಕನ್ನಡ-899, ದಾವಣಗೆರೆ-363, ಧಾರವಾಡ-858, ಗದಗ-371, ಹಾಸನ-1618, ಹಾವೇರಿ-243, ಕಲಬುರಗಿ-234, ಕೊಡಗು-329, ಕೋಲಾರ-439, ಕೊಪ್ಪಳ-356, ಮಂಡ್ಯ-643, ಮೈಸೂರು-2222, ರಾಯಚೂರು-540, ರಾಮನಗರ-279, ಶಿವಮೊಗ್ಗ-643, ತುಮಕೂರು-1269, ಉಡುಪಿ-909, ಉತ್ತರ ಕನ್ನಡ-862, ವಿಜಯಪುರ-246, ಯಾದಗಿರಿ-277.