Sunday, January 19, 2025
ಕ್ರೈಮ್ಸುದ್ದಿ

ಕಾರ್ಕಳ: ಇಬ್ಬರ ನಡುವೆ ಮಾತಿನ ಚಕಮಕಿ ಓರ್ವನ ಕೊಲೆಯಲ್ಲಿ ಅಂತ್ಯ -ಕಹಳೆ ನ್ಯೂಸ್

ಮಾಳ ಗ್ರಾಮದಲ್ಲಿ ಮನೆಯೊಂದಕ್ಕೆ ತೆರಳಿದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಒಬ್ಬನ ಕೊಲೆಯೊಂದಿಗೆ ಪರ್ಯಾವಸಗೊಂಡ ಘಟನೆ ಮೇ. 23ರ ಭಾನುವಾರ ರಾತ್ರಿ ನಡೆದಿದೆ.

ಕೊಲೆಗೀಡಾದವನನ್ನು ಹರೀಶ್ ಪೂಜಾರಿ ಎಂದು ಗುರುತಿಸಲಾಗಿದೆ. ಗುರುವ ಪ್ರಕರಣದ ಆರೋಪಿ. ಇವರಿಬ್ಬರು ಮಾಳದ ನಿವಾಸಿಯಾಗಿದ್ದು ಸ್ಥಳೀಯ ನಿವಾಸಿ ರೀಟಾ ಎಂಬವರ ಮನೆಗೆ ಭಾನುವಾರ ರಾತ್ರಿ ಹೋಗಿದ್ದರು.ಯಾವುದೋ ವಿಚಾರಕ್ಕೆ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಅಲ್ಲೇ ಇದ್ದ ಕಬ್ಬಿಣದ ರಾಡ್ ನಿಂದ ಹರೀಶ್ ಪೂಜಾರಿಯ ತಲೆಗೆ ಬಡಿದ ಆರೋಪಿ ಗುರುವ ಅಲ್ಲಿಂದ ಪರಾರಿಯಾಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆಯ ಮಾಹಿತಿ ತಿಳಿದ ಪೊಲೀಸ್ ವೃತ್ತ ನಿರೀಕ್ಷಕ ಸಂಪತ್ ಕುಮಾರ್, ಕಾರ್ಕಳ ಗ್ರಾಮಾಂತರ ಎಸ್.ಐ ತೇಜಸ್ಸು ಘಟನೆ ಸ್ಥಳಕ್ಕೆ ತೆರಳಿದಾಗ ಹರೀಶ್ ರಕ್ತದ ಮಡವಿನಲ್ಲಿ ಬಿದ್ದು ಸಾವಿಗೀಡಾದ್ದಾನೆ. ಆರೋಪಿ ಗುರುವಿನ ಇರುವಿಕೆಯ ಮಾಹಿತಿ ಪಡೆದ ಪೊಲೀಸರು ಸೋಮವಾರ ಮಿಂಚಿನ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.