Recent Posts

Sunday, January 19, 2025
ರಾಜಕೀಯ

ದುರಂಹಕಾರಿ ರಾಜಕೀಯ ಪಕ್ಷಗಳ ವಿರುದ್ದ ನನ್ನ ಹೋರಾಟ – ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು

Shrikar prabhu

ಮಂಗಳೂರು : ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಯುವ ಆರ್. ಶ್ರೀಕರ ಪ್ರಭು, ಅವರ ಚುನಾವಣಾ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಯಿತು. 

ಕದ್ರಿಯಲ್ಲಿರುವ ಅವರ ಕಚೇರಿ ಮುಂಬಾಗದಲ್ಲಿ ಏ .22 ಭಾನುವಾರ ಬ್ಯಾಂಕ್ ಅಧಿಕಾರಿ ಸುರೇಶ್ ಶೆಟ್ಟಿ ಹಾಗೂ ಮಾಜಿ ಸಂಘ ಪ್ರಚಾರಕ ರಾಮ್ ಮೋಹನ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಶ್ರೀಕರ ಪ್ರಭು, ನನಗೆ ಮತದಾರರ ಮನಸ್ಸಿನ ಬಗ್ಗೆ ಅರಿವಿದ್ದು, ಈ ಚುನಾವಣೆ ಗೆಲ್ಲುವ ಕಾರ್ಯತಂತ್ರ ನನಗೆ ತಿಳಿದಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ವತಂತ್ರ ಅಭ್ಯರ್ಥಿಗೆ ಗೆಲುವಿನ ಹಾದಿ ಸುಲಭವಲ್ಲ. ವ್ಯಕ್ತಿತ್ವಕ್ಕೆ ಬೆಲೆ ಇದ್ದಾಗ ಮಾತ್ರ ಚುನಾವಣೆಯಲ್ಲಿ ಗೆಲ್ಲಬಹುದು ಆ ವಿಶ್ವಾಸ ನನಗಿದ್ದು, ಜನರ ಸೇವೆಗಾಗಿ ರಾಜಕೀಯ ಪ್ರವೇಶಿಸಿದ್ದೇನೆ ಎಂದರು. ದುರಂಹಕಾರಿ ರಾಜಕೀಯ ಪಕ್ಷಗಳ ವಿರುದ್ದ ನನ್ನ ಹೋರಾಟವಾಗಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ನಾನು ನಿಸ್ವಾರ್ಥವಾಗಿ ಜನ ಸೇವೆ ಮಾಡಿರುವ ಪರಿಣಾಮ ನನ್ನ ಪ್ರತಿಸ್ವರ್ಧಿಗಳಿಗೆ ಗೆಲುವು ಅಸಾಧ್ಯ . ಕೆಟ್ಟ ರಾಜಕೀಯ ವ್ಯವಸ್ಥೆಯಲ್ಲಿ ಒಂದಿಷ್ಟು ಜನ ರಾಜಕೀಯವನ್ನು ಅನುಭವಿಸಲೆಂದು ಅಭ್ಯರ್ಥಿಯಾಗಿ ನಿಲ್ಲುತ್ತಾರೆ, ಅವರು ಜನರನ್ನು ಮೂರ್ಖರೆಂದುಕೊಂಡಿರುತ್ತಾರೆ. ಯಾರಿಗೂ ಮಂಗಳೂರಿನ ಸಮಗ್ರ ಅಭಿವೃದ್ದಿ ಬಗ್ಗೆ ಕಲ್ಪನೆ ಇಲ್ಲ ಎಂದು ಕಿಡಿ ಕಾರಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಚುನಾವಣೆಗೆ ಅತ್ಯಲ್ಪ ಸಮಯ ಇದ್ದು,ಪಕ್ಷೇತರ ಅಭ್ಯರ್ಥಿಯಾಗಿ ಗೆಲ್ಲಲು, ಹತ್ತು ಹಂತದಲ್ಲಿ ಚುನಾವಣೆ ಪ್ರಚಾರಕ್ಕೆ ವ್ಯವಸ್ಥೆ ಮಾಡಿದ್ದೇನೆ ಎಂದರು. ಇನ್ನು ಶ್ರೀಕರ ಪ್ರಭು , ಏ,23 ರಂದು ನಾಮಪತ್ರ ಸಲ್ಲಿಸಲಿದ್ದು, ಬಳಿಕ ಬಂಟ್ಸ್ ಹಾಸ್ಟೆಲ್ ರಸ್ತೆಯ ಮೂಲಕ ಮಹಾತ್ಮಾ ಗಾಂಧಿ ರಸ್ತೆಯಿಂದ ಕದ್ರಿಯಲ್ಲಿರುವ ಶ್ರೀಕರ ಪ್ರಭು ಕಾರ್ಯಾಲಯದವರೆಗೆ ಜಾಥಾ ನಡೆಯಲಿದೆ.