Recent Posts

Monday, January 20, 2025
ಸುದ್ದಿ

ವೆಂಟಿಲೇಟರ್‍ಗಳ ಸೌಲಭ್ಯ ಸಿಗುವುದಕ್ಕೆ ಆಗುತ್ತಿರುವ ತೊಂದರೆಯ ಕುರಿತು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ ಆರೋಗ್ಯ ಸಹಾಯ ಸಮಿತಿ – ಕಹಳೆ ನ್ಯೂಸ್

ಮಂಗಳೂರು : ವೆಂಟಿಲೇಟರ್ ಗಳ ಸೌಲಭ್ಯ ಸಿಗುವುದಕ್ಕೆ ಆಗುತ್ತಿರುವ ತೊಂದರೆಯ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಆರೋಗ್ಯ ಸಹಾಯ ಸಮಿತಿಯ ವತಿಯಿಂದ ಇಮೇಲ್ ಮೂಲಕ ಮನವಿ ಸಲ್ಲಿಸಲಾಯಿತು.

ಇಂದು ಇಡೀ ರಾಜ್ಯ ಕೊರೋನಾ 2ನೇ ಅಲೆಗೆ ತತ್ತರಿಸಿ ಜಿಲ್ಲೆ, ತಾಲೂಕು ಸ್ಥರದ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ, ವೆಂಟಿಲೇಟರ ಸಿಗದೇ ಕೊರೋನಾ ರೋಗಿಗಳ ಮೃತ್ಯು ಪ್ರಮಾಣವು ಹೆಚ್ಚಾಗುತ್ತಿದೆ. ಇಂತಹ ಗಂಭೀರ ಪರಿಸ್ಥಿತಿಯನ್ನು ಎದುರಿಸಲು, ರಾಜ್ಯಕ್ಕೆ 8 ತಿಂಗಳ ಮೊದಲೇ ಪಿಎಮ್ ಕೇರ್ ಫಂಡ್‍ನಿಂದ, 2800 ವೆಂಟಿಲೇಟರ್‍ಗಳು ಬಂದಿದ್ದು, ಇದುವರೆಗೆ ಕೇವಲ 150 ವೆಂಟಿಲೇಟರ್‍ಗಳನ್ನು ಮಾತ್ರ ಉಪಯೋಗಿಸಲಾಗಿದೆ. ಜಿಲ್ಲೆ ಮತ್ತು ತಾಲೂಕುಗಳಲ್ಲಿ ವೆಂಟಿಲೇಟರ್‍ಗಳ ಬಳಕೆ ಮಾಡಲು ನುರಿತ ವೈದ್ಯರ ಅಥವಾ ತಾಂತ್ರಿಕ ಸಿಬ್ಬಂದಿಗಳ ಕೊರತೆಯಿಂದ ವೆಂಟಿಲೇಟರ್‍ಗಳ ಉಪಯೋಗ ಮಾಡುತ್ತಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ದಕ್ಷಿಣ ಕನ್ನಡ ಜಿಲ್ಲೆಗೆ ಪಿಎಮ್ ಕೇರ್ ಫಂಡ್‍ನಿಂದ ಎಲ್ಲಾ ತಾಲೂಕು ಆಸ್ಪತ್ರೆಗಳು ಸೇರಿ 100 ವೆಂಟಿಲೇಟರ್‍ಗಳು ಬಂದಿದ್ದು, ಅದರ ಸೌಲಭ್ಯ ಸಿಗುತ್ತಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆನ್‍ಲೈನ್ ಆಂದೋಲನ ಮಾಡಬೇಕಾಯಿತು. ಜಿಲ್ಲಾಧಿಕಾರಿಗಳು ವಿಪತ್ತು ನಿರ್ವಹಣಾ ಕಾಯಿದೆಯ ವಿಶೇಷ ಅಧಿಕಾರವನ್ನು ಬಳಿಸಿ, ಗಂಭೀರವಾಗಿ ವಿಚಾರ ಮಾಡಿ, ಕೃತಿ ಮಾಡಲು ಆರೋಗ್ಯ ಸಹಾಯ ಸಮಿತಿಯು ಬೇಡಿಕೆಯನ್ನು ಇಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು