ಕಣ್ಣಿಗೆ ಕಾಣುವ ಮೊದಲ ದೇವರು ಅಮ್ಮ…. ಅಂದಹಾಗೆ ಒಂದು ಮನೆ ಬೆಳಗಬೇಕಾದರೆ ಅಲ್ಲಿ ಹೆಣ್ಣಿನ ಪಾತ್ರವು ಅಪಾರ. ಕರುಣಾಮಯಿ ಹೆಣ್ಣು, ಮನೆಯ ಪ್ರತಿಬಿಂಬವೆ ಈಕೆ. ಮೊದಲು ಹೆಣ್ಣಾಗಿ ಭೂಮಿ ಮೇಲೆ ಜನಿಸುತ್ತ ಕಷ್ಟ, ನೋವು ಎಲ್ಲವನ್ನು ಅನುಭವಿಸುತ್ತಾ ಒಂದು ಮಗುವಿಗೆ ಜನ್ಮ ನೀಡುವಳು.
ತನ್ನಲ್ಲಿರುವ ಬಯಕೆಗಳನೆಲ್ಲ ಬದಿಗೆ ಸರಿಸಿ ತನ್ನ ಪತಿಯ ಮಾತು ಹಾಗೂ ಮನೆಯವರ ಮಾತಿಗೆ ಮುನ್ನಗುತ್ತಾ ಜೀವನ ನಡೆಸುವಳು. ಕಷ್ಟಗಳ ಸಮಸ್ಯೆಯಿದ್ದರು, ತಾನು ಜೀವನ ನಡೆಸಲು ಮುಂದಾಗುವಳು. ಸಹಿಸಿಕೊಳ್ಳುವ ಶಕ್ತಿ ಇದೆ ಎಂದರೆ ಅದು ಹೆಣ್ಣಿಗೆ. ಒಂದು ಮಗುವನ್ನು ಹೊಟ್ಟೆಯಲ್ಲಿ ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿ ಬೆಳೆಸುವಳು.
ಒಂದು ಹೆಣ್ಣಿಗೆ ಸಮಾಜದಲ್ಲಿ ಸ್ವತಂತ್ರವಾಗಿ ಬದುಕಬೇಕಾದರೆ, ಕಾಡುವ ಸಮಸ್ಯೆಗಳೇ ಅತಿಯಾಗಿದೆ. ಇನ್ನೊಬ್ಬರ ಮಾತು ಕೇಳಿ ಬದುಕುವಂತಹ ಪರಿಸ್ಥಿತಿ ಬಂದು ಬಿಟ್ಟಿದೆ. ಮದುವೆ ಆದರೆ ಪತಿ ಹಾಗೂ ಅವರ ಮನೆಯಲ್ಲಿ ಕೇಳುವರು ಇದ್ದಾರೆ. ಅವರ ಮಾತಿಗೆ ಬೆಲೆ ಕೊಟ್ಟು ಅವರ ಅನುಮತಿ ಪ್ರಕಾರ ನಡೆಯಬೇಕಾಗುತ್ತದೆ. ಯಾವ ಕೆಲಸವು ಮಾಡಬೇಕಾದರೆ ಅದಕ್ಕೆ ಒಂದಿಷ್ಟು ಕೊರತೆಗಳು ಇವೆ. ಹದಿಹರೆಯದ ವಯಸ್ಸಿನಲ್ಲಿ ಮನೆಯವರ ಮಾತು ಕೇಳಿ ನಡೆಯಬೇಕು. ಎಲ್ಲ ಮನೆಗಳಲ್ಲಿ ಇಂತಹ ಸಮಸ್ಯೆಗಳು ಇರುವುದಿಲ್ಲ. ಆದರೆ ಕೆಲವೊಂದು ಮನೆಗಳಲ್ಲಿ ಇಂತಹ ಸಮಸ್ಯೆಗಳು ಹೆಚ್ಚು ಇವೆ.
ತಾನು ಸ್ವತಂತ್ರವಾಗಿ ಬದುಕೋದು ಯಾವಾಗ? ಸತ್ತ ಮೇಲೆಯಾದರು ತಮಗೆ ಸ್ವತಂತ್ರ ಸಿಗಬಹುದ? ಇಂತಹ ಪ್ರಶ್ನೆಗಳು ಕಾಡುವುದು ಯಾವಾಗ ಎಂದರೆ….. ತಾನು ಒಂದು ಉದ್ಯೋಗಕ್ಕೆ ಸೇರುವಾಗ ಹಾಗೂ ತರಬೇತಿ ತರಗತಿಗಳಿಗೆ ಸೇರಬೇಕಾದರೆ, ಅಲ್ಲಿ ಬರುವ ಅಡಚಣೆಗಳು ಅಪಾರ. ತಮಗೆ ಆಸಕ್ತಿ ಇದ್ದರೂ ಅದಕ್ಕೆ ಪ್ರೋತ್ಸಾಹ ಇಲ್ಲ. ಹೆಣ್ಣುಮಕ್ಕಳನ್ನು ಮನೆಯಿಂದ ಹೊರಗೆ ಕಳಿಸಲು ಭಯ ಪಡುತ್ತಾರೆ. ಭಯ ಪಟ್ಟು ಕುಳಿತರೆ ನಮ್ಮ ಸಮಾಜ ಯಾವಾಗ ಮುಂದುವರಿಯಲು ಸಾಧ್ಯವಿದೆ. ನಿಮಗೆ ಆಸಕ್ತಿ ಇಲ್ಲದಿದ್ದರೂ, ಆಸಕ್ತಿ ಇರುವವರಿಗೆ ಪ್ರೋತ್ಸಾಹ ನೀಡಿ, ಸಹಾಯ ಮಾಡಿ.
ಹೇಳಿದಾಗೆ ಕೇಳೋದು, ಹೇಳಿದ ಕೆಲಸ ಮಾಡೋದು, ಮನೆಯವರ ಮಾತು ಕೇಳಿ ನಡೆಯೋದು ಎಂದರೆ ಒಂದು ಮುಗ್ದೆ ಹೆಣ್ಣು. ಒಮ್ಮೆ ಕೋಪ ಮಾಡಿಕೊಂಡರು, ಮತ್ತೇ ಮುದ್ದು ಮಾಡಿ ಸಮಾಧಾನ ಮಾಡೋದು ಅಂದರೆ ಹೆಣ್ಣು. ಎಲ್ಲ ಕಷ್ಟ ನೋವುಗಳನ್ನು ಸಹಿಸಿಕೊಂಡು, ಕಣ್ಣೀರು ಸುರಿಸಿಕೊಂಡು, ಮನದಲ್ಲಿ ಸಾವಿರ ಚಿಂತನೆಗಳನ್ನು ಯೋಚಿಸಿಕೊಂಡು, ಜೀವನ ನಡೆಸುವಳು.
ಆಕೆಯು ತನ್ನ ಯೋಗಕ್ಷೇಮದ ಬಗ್ಗೆ ಚಿಂತೆ ಮಾಡದೇ ತನ್ನ ಪತಿಯ ಹಾಗೂ ಮನೆಯವರ ಬಗ್ಗೆ ವಿಚಾರಿಸುವಳು. ಆಕೆಯು ಮದುವೆ ಆದಮೇಲೆ ತನ್ನ ಪತಿ ಹಾಗೂ ಆತನ ಮನೆಯವರು ಎಷ್ಟು ನೋವು ಕೊಟ್ಟರೂ ಸಹಿಸಿಕೊಳ್ಳುವಳು….ಆದರೆ ಆಕೆಯ ಮನಸ್ಸನ್ನು ಅರ್ಥ ಮಾಡಿಕೊಳ್ಳುವರು ಯಾರು ಇಲ್ಲ.
ಹೆಣ್ಣುಮಕ್ಕಳು ಎಂದಾಗ ಕೆಟ್ಟ ಆಲೋಚನೆಗಳು ಬಾರದಿರಲಿ ನಮ್ಮಲ್ಲಿ. ಹೆಣ್ಣುಮಕ್ಕಳಿಗೆ ಪ್ರೋತ್ಸಾಹ ನೀಡಿ. ಕೆಟ್ಟ ದೃಷ್ಟಿಯಿಂದ ನೋಡಬೇಡಿ. ತನ್ನ ತಾಯಿಯಂತೆ ಕಾಣಿರಿ. ಪ್ರೀತಿ ಮಾಡಿ ಮೋಸ ಮಾಡಬೇಡಿ. ನಂಬಿಕೆಗೆ ದ್ರೋಹ ಮಾಡಬೇಡಿ. ಅವಳಿಗೆ ಕನಸುಗಳು ನೂರಾರು ಇರುತ್ತವೆ. ಒಂದು ಕನಸನ್ನಾದರೂ ಈಡೇರಿಸಬೇಕು ಎನ್ನುವ ಹಠದಿಂದ ಪ್ರಯತ್ನಿಸುತ್ತಿರುವಳು. ಆಕೆಯು ನಿಮ್ಮ ಮಾತುಗಳನ್ನೇ ಕೇಳಬೇಕೆಂದರೆ ಅವಳ ಗುರಿ ಮುಟ್ಟಲು ಸಾಧ್ಯವಿದೆನಾ…. ಒಮ್ಮೆ ಯೋಚಿಸಿ ನೋಡಿ. ಒಂದು ಹೆಣ್ಣಿಗೆ ಮದುವೆ ಮಾಡುವಷ್ಟರ ಮಟ್ಟಿಗೆ ಸೀಮಿತ ಮಾಡಬೇಡಿ. ಅವಳಿಗೆ ಏನೆಲ್ಲಾ ಆಸೆ, ಆಕಾಂಸೆಗಳು ಇವೆ ಅವುಗಳನೆಲ್ಲ ಈಡೇರಿಸಲು ಬಿಡಿ. ಎಲ್ಲರಿಗೂ ಅವಕಾಶಗಳು ಸಿಗಲು ಸಾಧ್ಯವಿಲ್ಲ. ಆದರೆ ಪ್ರಯತ್ನಿಸುವುದರಲ್ಲಿ ತಪ್ಪಿಲ್ಲ. ಅವಕಾಶಗಳನ್ನು ಕೊಲ್ಲದಿರಿ. ಬಂದ ಅವಕಾಶಗಳನೆಲ್ಲ ಬಳಸಿಕೊಳ್ಳಲು ಬಿಡಿ. ಆಕೆಯ ಕನಸುಗಳಿಗೆ ಚೂರಿ ಹಾಕಬೇಡಿ. ತನ್ನ ಮನೆಯ ಹೆಣ್ಣು ಎಂದು ಗೌರವಿಸಿ.
✒️?️ರಸಿಕ ಮುರುಳ್ಯ
ದ್ವಿತೀಯ ಪತ್ರಿಕೋದ್ಯಮ,
ವಿವೇಕಾನಂದ ಕಾಲೇಜು ಪುತ್ತೂರು.