ಅದೊಂದು ದಿನ ಆ ಮನೆಯಲ್ಲಿ ಸಡಗರವೊ ಸಡಗರಎಲ್ಲರ ಮನದಲ್ಲಿ ಸಂತೋಷತುಂಬಿ ತುಳುಕುತ್ತಿತ್ತು.ಇದಕ್ಕೆ ಕಾರಣಅಲ್ಲಿ ವಾಸವಾಗಿದ್ದಒಂದು ಹುಡುಗಿ. ಆ ಪುಟ್ಟ ಹೃದಯದಲ್ಲಿ ಏನೋ ಒಂದು ನಾಚಿಕೆ ಮನದಲ್ಲಿ ಏನೋ ಒಂದು ಅಳುಕು ಅವಳ ಮುಖದಲ್ಲಿಕಾಣಿಸುತ್ತಿತ್ತು. ತನ್ನರಾಜಕುಮಾರನ ಬರುವಿಕೆಯದಾರಿಯನ್ನೇ ಮರೆಯಲ್ಲೇ ನಿಂತುಎದುರು ನೋಡುತ್ತಿದ್ದ ಆ ಕಂಗಳು ತನ್ನರಾಜಕುಮಾರನನ್ನು ಭೇಟಿಯಾಗುವ ಮೊದಲ ಕ್ಷಣಒಬ್ಬರನ್ನೊಬ್ಬರು ನೋಡಲು ಹಂಬಲಿಸುವ ಹೃದಯ ಮಾತನಾಡಲು ಬಿಡದ ಮೌನ, ಮನದಲ್ಲಿಇರುವ ಅಳುಕು ಅವಳ ಮನಸ್ಸಿನಲ್ಲಿ ತುಂಬಿಕೊಂಡಿತ್ತು..
ಸಮಯ ಕಳೆದಂತೆ ತನ್ನರಾಜಕುಮಾರನೊಂದಿಗೆ ಮಾತನಾಡುವ ಹಂಬಲದಿಂದ ಮನದಲ್ಲಿ ಮೌನಮರೆಯಾಗಿ ಮಾತುಗಳಾಗಿ ಚಿಗುರೊಡೆಯಿತು.ಮೊದಲ ಮಾತುಗಳು ಪದಗಳನ್ನು ಹುಡುಕಲಾರಂಭಿಸಿದವು ಪದಗಳು ಪ್ರೀತಿಯಾಗಿ ಹೊಸರೂಪ ತಾಳಿತು. ಪ್ರೀತಿ ಮತ್ತಷ್ಟು ಬಿಗಿಯಾಯಿತು.ಮಾತಾಡಿದ್ದನ್ನೇ ಮತ್ತೆ ಮತ್ತೆ ಮಾತನಾಡುತ್ತಾ, ಅದೆಷ್ಟೋಆಣೆ, ಪ್ರಮಾಣ, ಭರವಸೆಯ ಮಾತುಗಳು, ಆ ಪುಟ್ಟ ಹೃದಯಗಳನ್ನು ಆವರಿಸಿಕೊಂಡಿತ್ತು.ಈ ಪ್ರೀತಿ ಸಂಬಂಧಗಳಾಗಿ ಚಿಗುರೊಡೆಯುವ ಕಾಲ ಸಮೀಪದಲ್ಲೇ ಇತ್ತು ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಗಟ್ಟಿಯಾಗಿತ್ತು.
ಇನ್ನೇನು ಒಂದಾಗಿ ಜೀವದ ಉದ್ದಕ್ಕೂ ಜೊತೆಜೊತೆಯಾಗಿರಬೇಕು ಎನ್ನುವಷ್ಟರಲ್ಲಿ ಅದ್ಯಾವಕ್ರೂರ ಹದ್ದಿನ ಕಣ್ಣು ಬಿತ್ತೋ ಆ ಎರಡು ಪುಟ್ಟಜೋಡಿ ಹಕ್ಕಿಗಳ ಪ್ರೀತಿಯ ಮೇಲೆ ತನ್ನದೇಆದ ಪ್ರೇಮಲೋಕದಲ್ಲಿ ಸಂಚರಿಸುತ್ತಿದ್ದ ಆ ಜೋಡಿಹಕ್ಕಿಗಳಿಗೆ ಒಂದುಕ್ಷಣದ ಮಾತು ಸಿಡಿಲುಬಡಿದಂತಾಯಿತು.
ಆ ಒಂದು ಮಾತು ನಿಜಕ್ಕೂಅವರ ಮನಸ್ಸಿನಲ್ಲಿ ಇದ್ದ ಸಂತೋಷವನ್ನು ಕಳೆಯುವಂತೆ ಮಾಡಿರುವುದು ಸತ್ಯ ಒಂದಿಷ್ಟು ಜನರು ಹಿಂದಿನ ಅಚರಣೆಗಳನ್ನು ಆಚರಿಸುತ್ತಾ ಬಂದಿದ್ದಾರೆ.ಅಂತಹಆಚರಣೆಯನ್ನು ಮಾಡುವುದುಕೂಡ ನಮ್ಮಕರ್ತವ್ಯಕೂಡ ಹೌದು.ಅದರೆ ನಾವು ಮೂಢನಂಬಿಕೆಯನ್ನು ನಂಬುವುದು ಒಂದು ರೀತಿಯಲ್ಲಿ ತಪ್ಪು ಇಂದಿನ ಕಾಲದಲ್ಲಿ ಮೂಡನಂಬಿಕೆಯನ್ನು ಹೆಚ್ಚಾಗಿ ನಂಬುವುದಿಲ್ಲ ಅದರೆ ಕೆಲವಷ್ಟು ಜನರುಇಂತಹ ವಿಚಿತ್ರಅಚಾರಣೆಯನ್ನು ಮಾಡುತ್ತಾರೆ.ಇಂತಹಒಂದುಮೂಢನಂಬಿಕೆಯಿಂದ ಈ ಎರಡು ಪುಟ್ಟಜೋಡಿಯ ಪ್ರೀತಿಗೆ ಮುಳುವಾಯಿತು. ಆ ಪುಟ್ಟ ಹೃದಯಗಳು ಗಾಜಿನಕನ್ನಡಿಯಂತೆಒಡೆದುಚೂರಾಯಿತು.
ಹೆಣ್ಣು ಹೆತ್ತತಂದೆತಾಯಿಯ ಮನವು ಮೌನವಾಯಿತ್ತು.ಮತ್ತೆಯಾವ ಭರವಸೆಯ ಮಾತನ್ನು ನಂಬಲಾಗದೆ ಪುಟ್ಟ ಹೃದಯಕಲ್ಲಾಗಿ ಹೋಯಿತು. ಮಾತು ಮೌನದಕಡೆ ಮುಖ ಮಾಡಿತು. ಆ ಆಣೆ, ಪ್ರಮಾಣ ಭರವಸೆಯ ಮಾತುಗಳು ಕೇವಲ ನೆನಪಾಗಿಯೇ ದಿನಗಳು ಕಳೆಯುತ್ತಾ ವರುಷಗಳು ಸಮೀಪಿಸುತ್ತಿದೆ ಮತ್ತೆ ಪ್ರೀತಿಚಿಗುರೊಡೆಯಬಹುದೇ ಮತ್ತೆ ಮೌನ ಮಾತಾಗಬಹುದೇ ಎಂಬ ಭರವಸೆಯಿಂದ ಇಂದಿಗೂ ಕಾಯುತ್ತಲೇಇದೆ. ಆ ಪುಟ್ಟಹೃದಯ. ಈ ಒಂದುಕೆಟ್ಟಆಚರಣೆಯಿಂದ ಆ ಎರಡು ಜೀವಗಳು ನೋವು ಅನುಭವಿಸುತ್ತಿದೆ.ಅವರ ನೋವು ಮರೆಯಾಗಿ ಆ ಪುಟ್ಟಜೋಡಿ ಹಕ್ಕಿಗಳು ಒಂದಾಗಿ ಬದುಕಬೇಕುಅಲ್ಲವೇ ಸ್ನೇಹಿತರೇ..
✍️ಕವಿತಾ
ತೃತೀಯ ಪತ್ರಿಕೋದ್ಯಮ
ವಿವೇಕಾನಂದಕಾಲೇಜು
ನೆಹರು ನಗರ, ಪುತ್ತೂರು