Recent Posts

Monday, January 20, 2025
ಬೆಳ್ತಂಗಡಿಸುದ್ದಿ

ಸಹಕಾರಿ ಬ್ಯಾಂಕ್ ಸಿಬ್ಬಂದಿಗಳಿಗೂ ಕೊರೋನಾ ವಾರಿಯರ್ಸ್ ಸೌಲಭ್ಯ ಸಿಗಲಿ, :-ರಕ್ಷಿತ್ ಪಣೆಕ್ಕರ – ಕಹಳೆ ನ್ಯೂಸ್

ಕೊರೊನಾ ಸಂದರ್ಭದಲ್ಲಿಯೂ ಗ್ರಾಮೀಣ ಆರ್ಥಿಕತೆಯಲ್ಲಿ ಸಹಕಾರಿ ಸಂಘಗಳು ಮಹತ್ವದ ಪಾತ್ರವಹಿಸಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕ ವ್ಯವಸ್ಥೆಗೆ ರಾಷ್ಟೀಕೃತ ಬ್ಯಾಂಕ್‍ಗಳಿಗೆ ಸರಿ ಸಮನಾಗಿ ಸಹಕಾರಿ ಸಂಸ್ಥೆಗಳು ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ.

ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ನಮ್ಮ ಸಹಕಾರಿ ಸಂಸ್ಥೆಯ ಸಿಬ್ಬಂದಿಗಳು ಕೊರೊನಾ ವಾರಿಯರ್ಸ್ ಮಾದರಿಯಲ್ಲಿ ತಮ್ಮ ಗ್ರಾಹಕರಿಗೆ ಬ್ಯಾಂಕಿಂಗ್ ಹಾಗೂ ಪಡಿತರ ವಿತರಣೆ,ಹಾಗೂ ರೈತರಿಗೆ ತಮ್ಮ ಬೆಳೆ ಬೆಳೆಯಲು ಯಾವುದೇ ಸಮಸ್ಯೆ ಬಾರದ ರೀತಿಯಲ್ಲಿ ರಸಗೊಬ್ಬರ,ಮೈಲುತುತ್ತು ವಿತರಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಹಕಾರಿ ಕ್ಷೇತ್ರದ ಸಿಬ್ಬಂದಿಗಳ ಈ ಅಮೂಲ್ಯ ಸೇವೆಯನ್ನು ಪರಿಗಣಿಸಿ ಸರಕಾರ ಆದ್ಯತೆಯ ಮೇರೆಗೆ ಕೊರೊನಾ ಲಸಿಕೆ ವಿತರಣೆ ಹಾಗೂ ಇತರ ಕೊರೊನಾ ವಾರಿಯರ್ಸ್ ಗಳ ಸೌಲಭ್ಯವನ್ನು ಸಿಬ್ಬಂದಿಗಳಿಗೆ ವಿಸ್ತರಿಸಲಿ ಎಂಬುದೇ ಸರ್ವ ಸಹಕಾರಿಗಳ ಆಶಯ.

ಜಾಹೀರಾತು
ಜಾಹೀರಾತು
ಜಾಹೀರಾತು

ರಕ್ಷಿತ್ ಪಣೆಕ್ಕರ
ಅಧ್ಯಕ್ಷರು,ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪದ್ಮುಂಜ.