Friday, November 22, 2024
ಸುದ್ದಿ

ಪಿಎಮ್ ಕೇರ್ ಫಂಡ್‌ನಿಂದ ರಾಜ್ಯಕ್ಕೆ ಬಂದಿರುವ ವೆಂಟಿಲೇಟರಗಳನ್ನು ಕೂಡಲೇ ಯೋಗ್ಯ ರೀತಿಯಲ್ಲಿ ಉಪಯೋಗಿಸಿ ಮತ್ತು ಕೊರೋನಾ ರೋಗಿಗಳ ಜೀವ ಉಳಿಸುವ ಕುರಿತು ಆರೋಗ್ಯ ಸಹಾಯ ಸಮಿತಿಯ ವತಿಯಿಂದ ರಾಜ್ಯದಾದ್ಯಂತ ಜಿಲ್ಲಾಧಿಕಾರಿಗಳಿಗೆ ಮನವಿ-ಕಹಳೆ ನ್ಯೂಸ್

ಆರೋಗ್ಯ ಸಹಾಯ ಸಮಿತಿಯು ಸಾಮಾಜಿಕ ವಿಷಯದಲ್ಲಿ ಕಳಕಳಿ ಇರುವ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ಮಾಡುವ ವೈದ್ಯರ, ವೈದ್ಯಕೀಯ ಸಿಬ್ಬಂದಿಗಳ ಮತ್ತು ಆರೋಗ್ಯ ಕ್ಷೇತ್ರದ ಅವ್ಯವಹಾರಗಳ ಬಗ್ಗೆ ಹೋರಾಟವನ್ನು ಮಾಡುವ ಸಮಿತಿಯಾಗಿದೆ.

ಆರೋಗ್ಯ ಸಹಾಯ ಸಮಿತಿಯ ವತಿಯಿಂದ ಕರ್ನಾಟಕ ರಾಜ್ಯದಲ್ಲಿ ಪಿಎಮ್ ಕೇರ್ ಫಂಡನಿಂದ ಬಂದ ವೆಂಟಿಲೇಟರ್‌ಗಳನ್ನು ಯೋಗ್ಯ ರೀತಿಯಲ್ಲಿ ಉಪಯೋಗ ಮಾಡಲು ಆಗ್ರಹಿಸಿ, ರಾಜ್ಯದ ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ವಿಜಯಪುರ, ದಾರವಾಡ, ಶಿವಮೊಗ್ಗ, ಉತ್ತರ ಕನ್ನಡ, ಹಾಸನ, ಮೈಸೂರು ಸೇರಿ ರಾಜ್ಯದ 15 ಜಿಲ್ಲೆಗಳಲ್ಲಿ ಮನವಿಯನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಲಾಯಿತು. ಮನವಿಯಲ್ಲಿ ಕೊರೋನಾ ಮಾಹಾಮಾರಿಯ ಗಂಭೀರ ಪರಿಸ್ಥಿತಿಯನ್ನು ಎದುರಿಸಲು ಕರ್ನಾಟಕ ರಾಜ್ಯಕ್ಕೆ 8 ತಿಂಗಳ ಮೊದಲೇ ಪಿಎಮ್ ಕೇರ್ ಫಂಡ್‌ನಿಂದ 2800 ವೆಂಟಿಲೇಟರಗಳು ಬಂದಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಅದರಲ್ಲಿ ಕೇವಲ 150 ವೆಂಟಿಲೇಟರ್ ಮಾತ್ರ ಬಳಕೆ ಮಾಡಲಾಗಿದೆ. ಉಳಿದ ವೆಂಟಿಲೇಟರ್‌ಗಳು ಬಳಸಲು ತಾಂತ್ರಿಕ ಸಿಬ್ಬಂದಿ, ನುರಿತ ವೈದ್ಯರ ಕೊರತೆಯಿಂದ ಬಳಸುತ್ತಿಲ್ಲ. ಇಂದು ಎಷ್ಟೋ ಜಿಲ್ಲೆಗಳಲ್ಲಿ ವೆಂಟಿಲೇಟರ್ ಇಲ್ಲದೇ ಜನರು ಸಾಯುತ್ತಿದ್ದಾರೆ. ಆದರೆ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಇದ್ದರೂ ಬಳಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಧಿಕಾರಿಗಳು ಸದ್ಯ ಜಾರಿಯಲ್ಲಿರುವ ವಿಪತ್ತು ನಿರ್ವಹಣಾ ಕಾಯಿದೆಯ ವಿಶೇಷ ಅಧಿಕಾರವನ್ನು ಬಳಿಸಿ, ಇಂತಹ ವೆಂಟಿಲೇಟರ್‌ಗಳನ್ನು ಯೋಗ್ಯ ಉಪಯೋಗ ಮಾಡುವ ವ್ಯವಸ್ಥೆ ಮಾಡಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ಆರೋಗ್ಯ ಸಹಾಯ ಸಮಿತಿಯು ಈ ಮುಂದಿನ ಬೇಡಿಕೆಗಳನ್ನು ಇಟ್ಟಿದೆ.

1. ಯಾವ ತಾಲೂಕುಗಳಲ್ಲಿ ಸಿಬ್ಬಂದಿಗಳ ಕೊರತೆಯಿಂದ ವೆಂಟಿಲೇಟರ್ ಉಪಯೋಗವಾಗುತ್ತಿಲ್ಲ, ಅಲ್ಲಿ ವೆಂಟಿಲೇಟರ್‌ಗಳನ್ನು ಸರಬುರಾಜು ಮಾಡಿದ ಕಂಪನಿಯಿಂದ ಅಲ್ಲಿನ ಆಸ್ಪತ್ರೆಯ ಸಿಬ್ಬಂದಿಗಳಿಗೆ ವೆಂಟಿಲೇಟರ್ ಉಪಯೋಗದ ಸೂಕ್ತ ತರಬೇತಿಯನ್ನು ಕೂಡಲೇ ನೀಡಬೇಕು.

2. ಯಾವ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಅಳವಡಿಸಲು ಅಗತ್ಯವಿರುವ ಬೆಡ್, ಎಲೆಕ್ಟ್ರಿಸಿಟಿ ಸೌಲಭ್ಯ ಉಪಲಬ್ದ ಇದೆ. ಅಲ್ಲಿ ಕೂಡಲೇ ವೆಂಟಿಲೇಟರ್ ಸೆಟ್ ಆಪ್ ಮಾಡಿ, ಅಲ್ಲಿ ನುರಿತ ಸಿಬ್ಬಂದಿಯ ನೇಮಕ ಮಾಡಬೇಕು.

3.. ಯಾವ ಸಾರ್ವಜನಿಕ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಉಪಯೋಗ ಮಾಡುವ ವ್ಯವಸ್ಥೆ ಇಲ್ಲ. ಅಲ್ಲಿನ ವೆಂಟಿಲೇಟರನ್ನು ಪಬ್ಲಿಕ್ ಪ್ರೈವೆಟ್ ಪಾರ್ಟನರಶಿಪ್ ಯೋಜನೆಯ ಅಡಿಯಲ್ಲಿ ವೆಂಟಿಲೇಟರ್ ಸೆಟ್‌ಅಪ್, ಬೆಡ್, ನುರಿತ ಸಿಬ್ಬಂದಿಗಳು ಇರುವ ಖಾಸಗಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳನ್ನು ಅಳವಡಿಸಿ, ಸರ್ಕಾರ ನಿರ್ಧರಿಸಿದ ದರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಬೇಕು. 4. ಇದರ ಜೊತೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಪಯೋಗ ಮಾಡದೇ ಇರುವ ವೆಂಟಿಲೇಟರ್‌ಗಳ ಆಡಿಟ್ ಮಾಡಿ ಮತ್ತು ಅದರ ಯೋಗ್ಯ ರೀತಿಯ ಉಪಯೋಗದ ನಿಯೋಜನೆ ಮಾಡಬೇಕು-