Monday, January 20, 2025
ಸುದ್ದಿ

ಈಶ್ವರಮಂಗಲದಲ್ಲಿ ಸಹಾಯಕ ಕಮಿಶನರ್ ಸ್ಥಳ ಪರಿಶೀಲನೆ ತಕ್ಷಣ ಅಕ್ರಮ ಭೂಸ್ವಾಧೀನ ತೆರವಿಗೆ ಆದೇಶ-ಕಹಳೆ ನ್ಯೂಸ್

ಈಶ್ವರಮಂಗಲ: ನೆಟ್ಟಣಿಗೆ ಮುಡ್ನೂರು ಗ್ರಾಮದ ಪುಳಿಮರಡ್ಕ ಎಂಬಲ್ಲಿರುವ ಸಾರ್ವಜನಿಕರಿಗೆ ಸೇರಿದ, ಸ್ಥಳೀಯರು ಅನಾದಿ ಕಾಲದಿಂದ ಆರಾಧಿಸುವ ಗುಳಿಗ ಬನವನ್ನು ಕೇರಳ ಮೂಲದ ಭಾಸ್ಕರ ಎಂಬುವವರು ಅಕ್ರಮ ಸ್ವಾಧೀನದಿಂದ ಮುಕ್ತ ಗೊಳಿಸಬೇಕೆಂಬ ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಪುತ್ತೂರು ಸಹಾಯಕ ಕಮಿಷನರ್ ಖುದ್ದು ಅಧಿಕಾರಿಗಳ ತಂಡ ದೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿ ಭಾಸ್ಕರ ಎಂಬವರು ಗುಳಿಗ ಬನವನ್ನು ಸೇರಿ ಸರ್ಕಾರಿ ಭೂಮಿಯ ಅಕ್ರಮ ಭೂ ಸ್ವಾಧೀನ ಸ್ಪಷ್ಟವಾಗಿದ್ದು ಈ ಬಗ್ಗೆ ತನಿಖೆ ನಡೆಸಲಾಗುವುದು ಮತ್ತು ಬನಕ್ಕೆ ಸಂಬಧಿಸಿದ ಜಾಗಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ ಅವಕಾಶ ಇರಬೇಕು, ಸ್ಥಳೀಯರ ಆರಾಧನೆಗೆ ಯಾವುದೇ ತೊಂದರೆ ಆಗಬಾರದು ಆದುದರಿಂದ ಈ ತಕ್ಷಣ ಸ್ವಾಧೀನ ತೆರವು ಗೊಳಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಆದೇಶಿಸಿದರು.

ಈ ಅಕ್ರಮ ಸ್ವಾಧೀನಕ್ಕೆ ಅವಕಾಶ ನೀಡಿದ ಸ್ಥಳೀಯ ಅಧಿಕಾರಿಗಳಿಗೆ ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡರು.ಈ ಸಂದರ್ಭದಲ್ಲಿ ಸ್ಥಳೀಯ ಪರಿಸರದ ಜನರು ಉಪಸ್ಥಿತರಿದ್ದು ಅಧಿಕಾರಿಗಳಿಗೆ ಮಾಹಿತಿ ನೀಡಿದರು.