Recent Posts

Monday, January 20, 2025
ಸುದ್ದಿ

ಬ್ಯಾಂಕ್ ಸೇವಾ ಅವಧಿ ಸರಿಪಡಿಸುವಂತೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರಿಗೆ ಶಾಸಕ ಕಾಮತ್ ಮನವಿ – ಕಹಳೆ ನ್ಯೂಸ್

ಕೋವಿಡ್ ೨ನೇ ಅಲೆಯನ್ನು ತಡೆಗಟ್ಟಲು ಕರ್ನಾಟಕ ರಾಜ್ಯ ಸರಕಾರ ಜಾರಿಗೊಳಿಸಿರುವ ಲಾಕ್‌ಡೌನ್ ಸಂದರ್ಭದಲ್ಲಿ, ಬ್ಯಾಂಕ್ ಗ್ರಾಹಕ ವ್ಯವಹಾರದ ಸಮಯವನ್ನು ಬೆಳಗ್ಗೆ ೮ ಗಂಟೆಯಿAದ ಬೆಳಗ್ಗೆ ೧೧ ಗಂಟೆ ವರೆಗೆ ನೀಡುವಂತೆ ಶಾಸಕ ವೇದವ್ಯಾಸ್ ಕಾಮತ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.


ಈ ಹಿಂದೆ ಬ್ಯಾಂಕ್ ಗ್ರಾಹಕ ವ್ಯವಹಾರದ ಅವಧಿಯನ್ನು ಬೆಳಗ್ಗೆ ೧೦ ಗಂಟೆಯಿAದ ಸಂಜೆ ೪ ಗಂಟೆಯ ವರೆಗೆ ನೀಡಲಾಗಿತ್ತು. ಆದರೆ ಲಾಕ್ ಡೌನ್ ಸಂದರ್ಭದಲ್ಲಿ ಬ್ಯಾಂಕ್ ವ್ಯವಹಾರಕ್ಕೆ ಬೆಳಗ್ಗೆ ೮ ಗಂಟೆಯಿAದ ೧೧ ಗಂಟೆಯ ವರೆಗೆ ಸಮಯಾವಕಾಶ ನೀಡುವುದರಿಂದ ಸಾರ್ವಜನಿಕರಿಗೆ ಓಡಾಟಕ್ಕೆ ಬಹಳಷ್ಟು ಅನುಕೂಲವಾಗಲಿದೆ. ಲಾಕ್ ಡೌನ್ ಸಡಿಲಿಕೆಯ ಅವಧಿಯಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಓಡಾಡಬಹುದು. ಮಾತ್ರವಲ್ಲ ಬ್ಯಾಂಕ್ ನೌಕರರಿಗೂ ಇದರಿಂದ ಬೇಗನೆ ಕೆಲಸ ಕಾರ್ಯಗಳನ್ನು ಮುಗಿಸಿ ಮನೆ ಸೇರುವಲ್ಲಿ ಇದು ಸಹಕಾರಿಯಾಗಲಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು