ಬೆಳ್ತಂಗಡಿಯ ಅನಾಥಾಶ್ರಮದಲ್ಲಿ 210 ಮಂದಿಗೆ ಕೊರೋನಾ ಪಾಸಿಟಿವ್ ; ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಕೋವಿಡ್ ಸೆಂಟರ್ ಆಗಿ ಮಾರ್ಪಾಡಾದ ಶ್ರೀಕ್ಷೇತ್ರ ಧರ್ಮಸ್ಥಳದ ” ರಜತಾದ್ರಿ ” ವಸತಿಗೃಹಕ್ಕೆ ಶಿಫ್ಟ್ – ಕಹಳೆ ನ್ಯೂಸ್
ಬೆಳ್ತಂಗಡಿ : ತಾಲೂಕಿನ ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ 200 ಕ್ಕೂ ಮಿಕ್ಕಿ ಆಶ್ರಮವಾಸಿಗಳಿಗೆ ಕೊರೋನಾ ಸೋಂಕು ತಗುಲಿರುವುದು ದೃಢ ಪಟ್ಟಿದೆ.
ಈ ಹಿನ್ನಲೆಯಲ್ಲಿ ಶಾಸಕ ಹರೀಶ್ ಪೂಂಜ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ರವಿವಾರ ಆಶ್ರಮಕ್ಕೆ ಭೇಟಿ ಮಾಡಿ ಆಶ್ರಮದಲ್ಲಿದ್ದವರನ್ನು ಧರ್ಮಸ್ಥಳದ ರಜತಾದ್ರಿ ಕ್ವಾರೆಂಟೈನ್ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.
ಸಿಯೋನ್ ಅನಾಥಾಶ್ರಮದಲ್ಲಿ 270 ಮಂದಿಯಿದ್ದು, ಅವರಲ್ಲಿ 210 ಜನರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಂಕಿತರನ್ನು ರಜತಾದ್ರಿ ವಸತಿ ಗೃಹಕ್ಕೆ ಶಿಫ್ಟ್ ಮಾಡಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ರಜತಾದ್ರಿ ವಸತಿ ಗೃಹವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಬದಲಾಯಿಸಲಾಗಿದ್ದು, ಅನಾಥಾಶ್ರಮದ 210 ಕೋವಿಡ್ ಸೋಂಕಿತರಿಗೆ ರಜತಾದ್ರಿ ವಸತಿ ಗೃಹದಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.