Recent Posts

Sunday, January 19, 2025
ಸುದ್ದಿ

ಇನ್ಮುಂದೆ ರಾಜ್ಯ ‘ಹೈಕೋರ್ಟ್’ ಕಲಾಪ ‘ಯೂಟ್ಯೂಬ್’ನಲ್ಲಿ ನೇರಪ್ರಸಾರ : ಜನಸಾಮಾನ್ಯರು ‘ಕಲಾಪ’ ಮನೆಯಲ್ಲೇ ವೀಕ್ಷಿಸಬಹುದು-ಕಹಳೆ ನ್ಯೂಸ್

ಬೆಂಗಳೂರು : ಇದುವರೆಗೆ ಕರ್ನಾಟಕ ಹೈಕೋರ್ಟ್ ಕಲಾಪ ಅಂದ್ರೆ.. ಕೋರ್ಟ್ ಹಾಲ್ ಗೆ ಮಾತ್ರವೇ ಸೀಮಿತವಾಗಿತ್ತು. ಜನಸಾಮಾನ್ಯರಿಗೆ ಕೋರ್ಟ್ ಕಲಾಪ ವೀಕ್ಷಿಸೋದಕ್ಕೂ ಕಷ್ಟವಾಗಿತ್ತು. ಆದ್ರೇ.. ಇನ್ಮುಂದೆ ರಾಜ್ಯ ಹೈಕೋರ್ಟ್ ಕಲಾಪ ಯೂಟ್ಯೂಬ್ ನಲ್ಲಿಯೂ ನೇರಪ್ರಸಾರ ಆಗಲಿದೆ. ಹೀಗಾಗಿ ಜನಸಾಮಾನ್ಯರೆಲ್ಲರೂ ಯೂಟ್ಯೂಬ್ ಮೂಲಕ ರಾಜ್ಯ ಹೈಕೋರ್ಟ್ ಕಲಾಪವನ್ನು ನೇರಪ್ರಸಾರದ ಮೂಲಕ ವೀಕ್ಷಿಸಬಹುದಾಗಿದೆ. ಈ ಮೂಲಕ ಕರ್ನಾಟಕ ಹೈಕೋರ್ಟ್ ಕಲಾಪ ವೀಕ್ಷಿಸುವಂತ ಗುಡ್ ನ್ಯೂಸ್ ದೊರೆತಿದೆ.

ಹೌದು.. ಇದೊಂದು ಕರ್ನಾಟಕ ಹೈಕೋರ್ಟ್ ನ ಐತಿಹಾಸಿಕ ಕ್ರಮವೇ ಸರಿ. ಕೋರ್ಟ್ ಕಲಾಪ ವೀಕ್ಷಿಸಬೇಕು ಅಂತ ನಿರೀಕ್ಷಿಯಲ್ಲಿದ್ದವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಈ ಬಗ್ಗೆ ರಾಜ್ಯ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರು ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದು, ಇಂದು ಆ ನಿರ್ಧಾರವನ್ನು ಸಕಾರ ಕೂಡ ಗೊಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದಿನಿಂದ ರಾಜ್ಯ ಹೈಕೋರ್ಟ್ ನ ಕೋರ್ಟ್ ಹಾಲ್ ನಂ.1ರ ಕಲಾಪವನ್ನು ಯೂಟ್ಯೂಬ್ ಮೂಲಕ ನೇರಪ್ರಸಾರ ಮಾಡೋದಕ್ಕೆ ಚಾಲನೆ ನೀಡಿದ್ದಾರೆ. ಹೈಕೋರ್ಟ್ ನ ಕೋರ್ಟ್ ಹಾಲ್ ನಂ.1ರಲ್ಲಿನ ಕಲಾಪದ ನೇರ ಪ್ರಸಾರ ಯೂಟ್ಯೂಬ್ ನಲ್ಲಿ ಆಗಲಿದ್ದು, ಹೈಕೋರ್ಟ್ ಕಲಾಪವನ್ನು ನೀವು ಮನೆಯಲ್ಲಿಯೇ ಕುಳಿತು, ಯೂಟ್ಯೂಬ್ ನಲ್ಲಿ ನೇರ ಪ್ರಸಾರದಲ್ಲಿ ನೋಡಬಹುದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದಿನಿಂದ ಆರಂಭಗೊಂಡಿರುವಂತ ಕೋರ್ಟ್ ಕಲಾಪದ ನೇರ ಪ್ರಸಾರ, ಜನಸಾಮಾನ್ಯರಿಗೂ ಕೋರ್ಟ್ ಕಲಾಪ ವೀಕ್ಷಿಸುವಂತ ಅವಕಾಶ ಸಿಗಲಿ ಎಂಬ ನಿರ್ಧಾರದಿಂದ ಕೈಗೊಳ್ಳಲಾಗಿದ್ದು.. ಇದು ನ್ಯಾಯಾಂಗ ವ್ಯವಸ್ಥೆಯ ಮೇಲೆ ಮತ್ತಷ್ಟು ನಂಬಿಕೆಯನ್ನು ಜನರಲ್ಲಿ ಮೂಡಿಸುವಂತೆ ಆಗಲಿದೆ.