Recent Posts

Sunday, January 19, 2025
ಸುದ್ದಿ

ಮಂಗಳೂರು : ಲಸಿಕೆ ವಿಚಾರದಲ್ಲಿ ಬಿಜೈನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಮತ್ತು ಮಾಜಿ ಮೇಯರ್ ಗೊಂದಲ ಸೃಷ್ಟಿ:ಸುಧೀರ್ ಶೆಟ್ಟಿ-ಕಹಳೆ ನ್ಯೂಸ್

ಲಸಿಕೆ ವಿಚಾರದಲ್ಲಿ ಬಿಜೈನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಮತ್ತು ಮಾಜಿ ಮೇಯರ್ ಗೊಂದಲ ಸೃಷ್ಟಿಸಿದ್ದಾರೆ ಎಂದು ಮಂಗಳೂರು ನಗರ ಪಾಲಿಕೆಯ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಜೂನ್ 01 ರ ಮಂಗಳವಾರ ಆರೋಪಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸುಧೀರ್ ಶೆಟ್ಟಿ, ” ಕರೋನ ಮಹಾಮಾರಿ ಅಲೆಗೆ ಈ ದೇಶದ ಜನತೆ ಸಿಲುಕಿರುವ ಈ ಸಂಕಷ್ಟದ ಸಮಯದಲ್ಲಿ ಕರ್ನಾಟಕ ರಾಜ್ಯ ಸರಕಾರ ಹಾಗೂ ದ.ಕ ಜಿಲ್ಲಾಡಳಿತ, ಹರಡುವುದನ್ನು ನಿಯಂತ್ರಿಸಲು ಹೇಗೆ ಕೆಲಸ ಮಾಡಿದೆ ಎಂಬುದಕ್ಕೆ ನಾವು ಸಾಕ್ಷಿಯಾಗಿದ್ದೇವೆ. ರಾಜ್ಯ ಬಿಜೆಪಿ ಅಧ್ಯಕ್ಷರು ಹಾಗೂ ಜಿಲ್ಲೆಯ ನೆಚ್ಚಿನ ಸಂಸದರಾದ ನಳಿನ್ ಕುಮಾರ್ ಕಟೀಲ್ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ನಗರ ದಕ್ಷಿಣ ಶಾಸಕರಾದ ವೇದವ್ಯಾಸ್ ಕಾಮತ್ ಹಾಗೂ ಡಾ ಭರತ್ ಶೆಟ್ಟಿ, ಜಿಲ್ಲೆಯ ಎಲ್ಲಾ ಶಾಸಕರು ಕರೋನ ಮಹಾಮಾರಿಯ ಕಾಲಘಟ್ಟದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚುವರಿ ವೆಂಟಿಲೇಟರ್‌ ಅಳವಡಿಸುವ ಕೆಲಸ, ಆಕ್ಸಿಜೆನ್ ಜನರೇಟರ್ ಘಟಕ ಆಕ್ಸಿಜೆನ್ ಶೇಖರಣಾ ಟ್ಯಾಂಕ್ ಒದಗಿಸಲು ಹಾಗೂ ಎಲ್ಲಾ ಮೆಡಿಕಲ್ ಆಸ್ಪತ್ರೆಯ ವೈದ್ಯರನ್ನು , “ವೈದ್ಯರ ನಡೆ ಹಳ್ಳಿಯ ಕಡೆ” ಎಂಬಂತಹ ಕಾರ್ಯಕ್ರಮದ ಮಖಾಂತರ ಸಾಕಷ್ಟು ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ಮಹಾ ನಗರ ಪಾಲಿಕೆಯ 60 ವಾರ್ಡಿಗಳಲ್ಲೂ ದಕ್ಷಿಣ ಜನಪ್ರಿಯ ಶಾಸಕರಾಗಿರುವ ವೇದವ್ಯಾಸ್ ಕಾಮತ್ ಹಾಗೂ ಭಾರತ್ ಶೆಟ್ಟಿ ಯವರ ನೇತೃತ್ವದಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಟಾಸ್ ಫೋರ್ಸ್ ರಚಿಸಿ ಟಾಸ್ ಫೋರ್ಸ್ ನಲ್ಲಿ ಮ ನಪಾದ ಎಂ ಪಿ ಡಬ್ಲ್ಯೂ ವರ್ಕರ್ ಹಾಗೂ ಆಶಾಕಾರ್ಯಕರ್ತೆಯರ ನೇತೃತ್ವವನ್ನು ಆಯಾ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಿಗೆ ನೀಡಿ ಪಾಸಿಟಿವ್ ಬಂದಿರುವ ವ್ಯಕ್ತಿಗಳಿಗೆ ಮೆಡಿಸಿನ್ ನೀಡುವಂತದ್ದು, ಪ್ರತಿ ದಿನ ಅವರ ಆರೋಗ್ಯ ವಿಚಾರಿಸುವಂತಹದ್ದು, ಅವರಿಗೆ ಏನಾದರೂ ಉಸಿರಾಟದ ತೊಂದರೆ ಆದರೆ ಆಸ್ಪತ್ರೆಗೆ ಸೇರಿಸುವಂಥದ್ದು ಕಮ್ಯುನಿಟಿ ಸ್ಪ್ರೆಡ್ ಆಗದ ಹಾಗೆ ನೋಡಿಕೊಂಡು ಪರೀಕ್ಷೆ ಮಾಡುವಂತದು ಹಾಗೂ ಕೊವೀಡ್ ರೋಗಿಯವರ ಮನೆಗೆ ಸ್ಟಿಕರ್ ಅಂಟಿಸುವಂತದ್ದು ಈ ರೀತಿಯ ಕೆಲಸ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ. ಇದಲ್ಲದೆ ಮ.ನ.ಪಾ ಸದಸ್ಯರು ದಿನ ನಿತ್ಯ ಸೋಂಕಿತರ ಮನೆಗೆ ತೆರಳಿ ಸಾಮಾಜಿಕ ಅಂತರ ಕಾಪಾಡುವಂತೆ ಹೇಳಿ ಅವರಿಗೆ ರೇಷನ್, ಮೆಡಿಸಿನ್, ಒಬ್ಬರೇ ಇದ್ದರೆ ಅವರಿಗೆ ಊಟ ಉಪಹಾರ ಮಾಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಾರದಲ್ಲಿ ಎರಡು ದಿನ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ನೀಡುವಂತಹ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಕೇಂದ್ರದ ಮುಖಾಂತರ ಮಾಡುವಂಥದ್ದು ಹಾಗೂ ಅದನ್ನು ಪತ್ರಿಕೆಯ ಮುಖಾಂತರ ಪ್ರಕಟಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಿದೆ.

ಆದರೆ ಬಿಜೈ ಆರೋಗ್ಯ ಕೇಂದ್ರದಲ್ಲಿ ಲಸಿಕೆ ನೀಡುವಂತ ಕಾರ್ಯಕ್ರಮದ ಪೋಸ್ಟರ್ ನ್ನು ಮಾಜಿ ಮೇಯರ್ ರವರು ತಮ್ಮ ಫೇಸ್ ಬುಕ್ ನಲ್ಲಿ ಹಾಗು ವಾಟ್ಸಪ್ ನಲ್ಲಿ ಹಾಕಿ ಅತಿ ಹೆಚ್ಚು ಜನ ಸೇರುವ ಹಾಗೆ ಮಾಡಿ ಗೊಂದಲ ನಿರ್ಮಾಣ ಮಾಡಿ ನಂತರ ವಿಧಾನ ಪರಿಷತ್ ನ ಮಾಜಿ ಸದಸ್ಯರು ಹಾಗೂ ಮಾಜಿ ಮೇಯರ್ ಸೇರಿ ಕಾಂಗ್ರೆಸ್ ಕಾರ್ಯಕರ್ತರನ್ನು ಸೇರಿಸಿ ಪ್ರತಿಭಟನೆ ಮಾಡಿರುವುದು ಖಂಡನೀಯವಾಗಿದ್ದು ಇದನ್ನು ದ.ಕ. ಬಿಜೆಪಿ ಇದನ್ನು ಖಂಡಿಸುತ್ತದೆ.

ನಮ್ಮ ದೇಶದ ನೆಚ್ಚಿನ ಪ್ರಧಾನಿಯವರ ವಿಶೇಷವಾದ ಆಸಕ್ತಿಯಿಂದ ಆತ್ಮ ನಿರ್ಭರ ಭಾರತದ ಪರಿಕಲ್ಪನೆಯ ಮುಖಾಂತರ ಕೋ ವ್ಯಾಕ್ಸಿನ್ ಹಾಗೂ ಕೋವಿ ಶೀಘ್ರ ನ ಮುಖಾಂತರ ಕೇವಲ 8 ತಿಂಗಳಲ್ಲಿಯೇ ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ 20 ಕೋಟಿ 90 ಲಕ್ಷ ಜನರಿಗೆ ಮೊದಲ ಹಂತದ ಲಸಿಕೆ ನೀಡಿ ಮುಗಿಸಿದ ಮುಂದಿನ ಎರಡು ತಿಂಗಳ ಒಳಗೆ ಜಿಲ್ಲೆಯ ಎಲ್ಲಾ ಜನರಿಗೆ ವ್ಯಾಕ್ಸಿನ್ ನೀಡುವ ಕೆಲಸವನ್ನು ನಮ್ಮ ಆಡಳಿತ ಮಾಡುತ್ತದೆ

ಕಾಂಗ್ರೆಸ್ ನಾಯಕರು ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಈ ರೀತಿ ಪಿ.ಎಚ್ ಓ ಎದುರು ಪ್ರತಿಭಟನೆ ಹಾಗೂ ಜನರಿಗೆ ತಪ್ಪು ಮಾಹಿತಿ ನೀಡಿ ಗೊಂದಲ ನಿರ್ಮಾಣ ಮಾಡುವುದು ಬಿಟ್ಟು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ ಕೊರೊನ ಮಹಾಮಾರಿಯನ್ನು ಹತ್ತಿಕ್ಕುವ ಕೆಲಸವನ್ನು ಮಾಡಬೇಕೆ ವಿನಃ ಇಂತಹ ಕ್ಷುಲ್ಲಕ ರಾಜಕೀಯವನ್ನು ಮಾಡಬಾರದು ಎಂದು ಹೇಳಿದ್ದಾರೆ.