Friday, November 22, 2024
ಸುದ್ದಿ

KSRTC ಹೆಸರು ವಿವಾದ: ಆದೇಶ ಪ್ರತಿ ನೋಡದೇ ಏನನ್ನೂ ಹೇಳಲಾರೆ ಎಂದ ಸಾರಿಗೆ ಸಚಿವ- ಕಹಳೆ ನ್ಯೂಸ್

ಕೇರಳ ಹಾಗೂ ಕರ್ನಾಟಕದ ನಡುವೆ ಕಳೆದ 27 ವರ್ಷಗಳಿಂದ ನಡೆಯುತ್ತಿದ್ದ ಕೆಎಸ್​ಆರ್​ಟಿಸಿ ವಿವಾದದಲ್ಲಿ ಕರ್ನಾಟಕಕ್ಕೆ ಹಿನ್ನಡೆಯಾಗಿದೆ. ದಶಕಗಳಿಂದ ಕೆಎಸ್​ಆರ್​ಟಿಸಿ ಎಂಬ ಹೆಸರನ್ನ ಹೊಂದಿದ್ದ ಕರ್ನಾಟಕದ ಸಾರಿಗೆ ನಿಗಮ ಇದೀಗ ಈ ಹೆಸರನ್ನ ಕಳೆದುಕೊಂಡಿದ್ದು ಈ ಹೆಸರು ಕೇರಳಕ್ಕೆ ಸೇರಿದ್ದು ಎಂದು ಟ್ರೇಡ್​ ಮಾರ್ಕ್​ ರಿಜಿಸ್ಟ್ರಿ ಬುಧವಾರ ತೀರ್ಪು ಹೊರಡಿಸಿದೆ.

ಕೆಎಸ್​ಆರ್​ಟಿಸಿ ಸಮರದಲ್ಲಿ ಕರ್ನಾಟಕಕ್ಕಾದ ಹಿನ್ನೆಡೆ ವಿಚಾರವಾಗಿ ರಾಯಚೂರಿನಲ್ಲಿ ಮಾತನಾಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಇನ್ನೂ ನಮ್ಮ ಕೈಗೆ ಆದೇಶ ಪ್ರತಿ ಸಿಕ್ಕಿಲ್ಲ. ಇಂದು ಅಥವಾ ನಾಳೆಯೊಳಗಾಗಿ ಆದೇಶ ಪ್ರತಿ ನಮ್ಮ ಕೈ ಸೇರಲಿದೆ. ಆದೇಶ ಪ್ರತಿ ಕೈ ಸೇರಿದ ಬಳಿಕ ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಹೋರಾಟವನ್ನ ನಡೆಸಲಿದ್ದೇವೆ. ಆದೇಶ ಪ್ರತಿಯನ್ನ ಓದದ ಹೊರತು ಕೆಎಸ್​ಆರ್​​ಟಿಸಿ ಹೆಸರು ಬದಲಾವಣೆ ವಿಚಾರವಾಗಿ ಬೇರೇನೂ ಪ್ರತಿಕ್ರಿಯೆ ನೀಡಲಾರೆ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಎಸ್​ಆರ್​ಟಿಸಿ ಹೆಸರನ್ನ ಬಳಕೆ ಮಾಡಬೇಡಿ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ 1994ರಲ್ಲೇ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ನೋಟಿಸ್​ ನೀಡಿತ್ತು. ಆದರೆ ಈ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಕೇರಳ ರಸ್ತೆ ಸಾರಿಗೆ ಸಂಸ್ಥೆ ಟ್ರೇಡ್​ ಮಾರ್ಕ್​ ರಿಜಿಸ್ಟ್ರಿ ಅಂಗಳಕ್ಕೆ ಚೆಂಡನ್ನ ತಳ್ಳಿತ್ತು. ಕೇರಳ ಸಾರಿಗೆ ಸಂಸ್ಥೆ 1965ರಲ್ಲೇ ಪ್ರಾರಂಭವಾಗಿದೆ. ಆದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ 1973ರಲ್ಲಿ ಸ್ಥಾಪನೆಯಾಗಿದೆ ಅನ್ನೋದು ಕೇರಳದ ವಾದವಾಗಿತ್ತು. ಬರೋಬ್ಬರಿ 27 ವರ್ಷಗಳ ಹೋರಾಟದಲ್ಲಿ ಕೇರಳ ಮುನ್ನಡೆ ಸಾಧಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು