Monday, January 20, 2025
ರಾಜ್ಯ

ಲಾಕ್‌ಡೌನ್ ವಿಸ್ತರಣೆ, 2ನೇ ಪ್ಯಾಕೇಜ್ ಘೋಷಣೆ ಕುರಿತಂತೆ ಸಂಜೆ 5 ಗಂಟೆಗೆ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ-ಕಹಳೆ‌ ನ್ಯೂಸ್

ಬೆಂಗಳೂರು, ಜೂನ್ 3: ಲಾಕ್‌ಡೌನ್ ವಿಸ್ತರಣೆ ಹಾಗೂ ಕೊರೊನಾ 2ನೇ ಪ್ಯಾಕೇಜ್ ಘೋಷಣೆ ಕುರಿತಂತೆ ಇಂದು ಸಂಜೆ 5 ಗಂಟೆಗೆ ಸಿಎಂ ಯಡಿಯೂರಪ್ಪ ಮಹತ್ವದ ಸುದ್ದಿಗೋಷ್ಠಿ ಕರೆದಿದ್ದಾರೆ.

ಈಗಾಗಲೇ ಮೊದಲ ಕೊರೊನಾ ಪ್ಯಾಕೇಜ್‌ನಲ್ಲಿ 1250 ಕೋಟಿ ರೂ. ಘೋಷಣೆ ಮಾಡಿದ್ದರು. ಅದೇ ರೀತಿ 2ನೇ ಹಂತದ ಪ್ಯಾಕೇಜ್‌ನಲ್ಲಿ ಇತರ ವರ್ಗಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

2ನೇ ಹಂತದ ಪ್ಯಾಕೇಜ್‌ನಲ್ಲಿ ತಮ್ಮನ್ನು ಪರಿಗಣಿಸುವಂತೆ ಹಲವು ಕಾರ್ಮಿಕ ವರ್ಗಗಳು, ಶಿಕ್ಷಕರು, ರೈತರು, ನೇಕಾರರು ಸಿಎಂ ಯಡಿಯೂರಪ್ಪ ಬಳಿ ಮನವಿ ಮಾಡಿಕೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ವೇಳೆ ಲಾಕ್‌ಡೌನ್ ವಿಸ್ತರಣೆ ಕುರಿತು ಇಂದು ಮಹತ್ವದ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಕೆಲವು ಸಚಿವರು ಲಾಕ್‌ಡೌನ್ ಪರವಾಗಿದ್ದರೆ, ಕೆಲವರು ಅನ್‌ಲಾಕ್ ಮಾಡಲು ಒತ್ತಾಯಿಸಿದ್ದಾರೆ.

ಸಿಎಂ ಯಡಿಯೂರಪ್ಪ ಮಹತ್ವದ ಸುದ್ದಿಗೋಷ್ಠಿ ಕರೆದಿರುವುದರಿಂದ, ಪ್ಯಾಕೇಜ್ ಘೋಷಿಸಿ, ಲಾಕ್‌ಡೌನ್ ವಿಸ್ತರಣೆ ಮಾಡುತ್ತಾರೆ ಎಂಬುದು ಸ್ಪಷ್ಟವಾಗಿದೆ.