ಅದೊ0ದು ದಿನ ಆ ಮನೆಯಲ್ಲಿ ಸಡಗರವೊ ಸಡಗರ ಎಲ್ಲರ ಮನದಲ್ಲಿ ಸಂತೋಷ ತು0ಬಿ ತುಳುಕುತ್ತಿತ್ತು.ಇದಕ್ಕೆ ಕಾರಣ ಅಲ್ಲಿ ವಾಸವಾಗಿದ್ದ ಒಂದು ಹುಡುಗಿ. ಆ ಪುಟ್ಟ ಹೃದಯದಲ್ಲಿ ಏನೋ ಒಂದು ನಾಚಿಕೆ ಮನದಲ್ಲಿ ಏನೋ ಒಂದು ಅಳುಕು ಅವಳ ಮುಖದಲ್ಲಿ ಕಾಣಿಸುತ್ತಿತ್ತು. ತನ್ನ ರಾಜಕುಮಾರನ ಬರುವಿಕೆಯದಾರಿಯನ್ನೇ ಮರೆಯಲ್ಲೇ ನಿಂತು ಎದುರು ನೋಡುತ್ತಿದ್ದ ಆ ಕಂಗಳು ತನ್ನ ರಾಜಕುಮಾರನನ್ನು ಭೇಟಿಯಾಗುವ ಮೊದಲ ಕ್ಷಣ ಒಬ್ಬರನ್ನೊಬ್ಬರು ನೋಡಲು ಹಂಬಲಿಸುವ ಹೃದಯ ಮಾತನಾಡಲು ಬಿಡದ ಮೌನ, ಮನದಲ್ಲಿ ಇರುವ ಅಳುಕು ಅವಳ ಮನಸ್ಸಿನಲ್ಲಿ ತುಂಬಿಕೊ0ಡಿತ್ತು.
ಸಮಯ ಕಳೆದಂತೆ ತನ್ನ ರಾಜಕುಮಾರನೊಂದಿಗೆ ಮಾತನಾಡುವ ಹಂಬಲದಿ0ದ ಮನದಲ್ಲಿ ಮೌನಮರೆಯಾಗಿ ಮಾತುಗಳಾಗಿ ಚಿಗುರೊಡೆಯಿತು. ಮೊದಲ ಮಾತುಗಳು ಪದಗಳನ್ನು ಹುಡುಕಲಾರಂಭಿಸಿದವು ಪದಗಳು ಪ್ರೀತಿಯಾಗಿ ಹೊಸರೂಪ ತಾಳಿತು. ಪ್ರೀತಿ ಮತ್ತಷ್ಟು ಬಿಗಿಯಾಯಿತು. ಮಾತಾಡಿದ್ದನ್ನೇ ಮತ್ತೆ ಮತ್ತೆ ಮಾತನಾಡುತ್ತಾ, ಅದೆಷ್ಟೋ ಆಣೆ, ಪ್ರಮಾಣ, ಭರವಸೆಯ ಮಾತುಗಳು, ಆ ಪುಟ್ಟ ಹೃದಯಗಳನ್ನು ಆವರಿಸಿಕೊಂಡಿತ್ತು. ಈ ಪ್ರೀತಿ ಸಂಬ0ಧಗಳಾಗಿ ಚಿಗುರೊಡೆಯುವ ಕಾಲ ಸಮೀಪದಲ್ಲೇ ಇತ್ತು. ಒಬ್ಬರನ್ನೊಬ್ಬರು ಬಿಟ್ಟಿರಲಾರ0ದಷ್ಟು ಪ್ರೀತಿಗಟ್ಟಿಯಾಗಿತ್ತು. ಇನ್ನೇನು ಒಂದಾಗಿ ಜೀವದ ಉದ್ದಕ್ಕೂ ಜೊತೆಜೊತೆಯಾಗಿರಬೇಕು ಎನ್ನುವಷ್ಟರಲ್ಲಿ ಅದ್ಯಾವಕ್ರೂರ ಹದ್ದಿನ ಕಣ್ಣು ಬಿತ್ತೋ ಆ ಎರಡು ಪುಟ್ಟಜೋಡಿ ಹಕ್ಕಿಗಳ ಪ್ರೀತಿಯ ಮೇಲೆ ತನ್ನದೇ ಆದ ಪ್ರೇಮಲೋಕದಲ್ಲಿ ಸಂಚರಿಸುತ್ತಿದ್ದ ಆ ಜೋಡಿಹಕ್ಕಿಗಳಿಗೆ ಒಂದುಕ್ಷಣದ ಮಾತು ಸಿಡಿಲುಬಡಿದಂತಾಯಿತು.
ಆ ಒಂದು ಮಾತು ನಿಜಕ್ಕೂಅವರ ಮನಸ್ಸಿನಲ್ಲಿ ಇದ್ದ ಸಂತೋಷವನ್ನು ಕಳೆಯುವಂತೆ ಮಾಡಿರುವುದು ಸತ್ಯ.ಒಂದಿಷ್ಟುಜನರು ಹಿಂದಿನ ಅಚರಣೆಗಳನ್ನು ಆಚರಿಸುತ್ತಾ ಬಂದಿದ್ದಾರೆ.ಅ0ತಹ ಆಚರಣೆಯನ್ನು ಮಾಡುವುದುಕೂಡ ನಮ್ಮಕರ್ತವ್ಯಕೂಡ ಹೌದು.ಅದರೆ ನಾವು ಮೂಢನಂಬಿಕೆಯನ್ನು ನಂಬುವುದು ಒ0ದು ರೀತಿಯಲ್ಲಿ ತಪ್ಪು.ಇ0ದಿನ ಕಾಲದಲ್ಲಿ ಮೂಡನಂಬಿಕೆಯನ್ನು ಹೆಚ್ಚಾಗಿ ನಂಬುವುದಿಲ್ಲ ಅದರೆ ಕೆಲವಷ್ಟು ಜನರುಇಂತಹ ವಿಚಿತ್ರ ಅಚಾರಣೆಯನ್ನು ಮಾಡುತ್ತಾರೆ.
ಇಂತಹ ಒ0ದು ಮೂಢನ0ಬಿಕೆಯಿ0ದ ಈ ಎರಡು ಪುಟ್ಟಜೋಡಿಯ ಪ್ರೀತಿಗೆ ಮುಳುವಾಯಿತು. ಆ ಪುಟ್ಟ ಹೃದಯಗಳು ಗಾಜಿನ ಕನ್ನಡಿಯಂತೆ ಒಡೆದುಚೂರಾಯಿತು. ಹೆಣ್ಣು ಹೆತ್ತ ತಂದೆತಾಯಿಯ ಮನವು ಮೌನವಾಯಿತ್ತು.ಮತ್ತೆಯಾವ ಭರವಸೆಯ ಮಾತನ್ನು ನಂಬಲಾಗದೆ ಪುಟ್ಟ ಹೃದಯಕಲ್ಲಾಗಿ ಹೋಯಿತು. ಮಾತು ಮೌನದಕಡೆ ಮುಖ ಮಾಡಿತು. ಆ ಆಣೆ, ಪ್ರಮಾಣ ಭರವಸೆಯ ಮಾತುಗಳು ಕೇವಲ ನೆನಪಾಗಿಯೇ ದಿನಗಳು ಕಳೆಯುತ್ತಾ ವರುಷಗಳು ಸಮೀಪಿಸುತ್ತಿದೆ ಮತ್ತೆ ಪ್ರೀತಿ ಚಿಗುರೊಡೆಯಬಹುದೇ ಮತ್ತೆ ಮೌನ ಮಾತಾಗಬಹುದೇ ಎಂಬ ಭರವಸೆಯಿಂದ ಇಂದಿಗೂ ಕಾಯುತ್ತಲೇಇದೆ. ಆ ಪುಟ್ಟಹೃದಯ. ಈ ಒಂದುಕೆಟ್ಟಆಚರಣೆಯಿ0ದ ಆ ಎರಡು ಜೀವಗಳು ನೋವು ಅನುಭವಿಸುತ್ತಿದೆ.ಅವರ ನೋವು ಮರೆಯಾಗಿ ಆ ಪುಟ್ಟಜೋಡಿ ಹಕ್ಕಿಗಳು ಒಂದಾಗಿ ಬದುಕಬೇಕುಅಲ್ಲವೇ ಸ್ನೇಹಿತರೇ..
ಕವಿತಾ
ತೃತೀಯ ಪತ್ರಿಕೋದ್ಯಮ
ವಿವೇಕಾನಂದಕಾಲೇಜು
ನೆಹರು ನಗರ, ಪುತ್ತೂರು