ಎಲ್ಲಾ ಜನ್ಮಕ್ಕಿಂತ ಮಾನವ ಜನ್ಮ ಅತ್ಯಂತ ಶೇಷ್ಠ ಎಂಬ ಮಾತಿದೆ. ಹೌದು ಮನುಷ್ಯನಾಗಿ ಜನ್ಮತಾಲಿದ ನಂತರ ಅವನ ಸುಖ-ದು:ಖಈ ಎರಡು ಮನುಷ್ಯ ಜನ್ಮದ ಮುಖ್ಯ ಪಾತ್ರ ಎಂದು ಹೇಳಬಹುದು. ಮನುಷ್ಯನಾಗಿ ಹೊಟ್ಟಿದ ನಂತರ ಅವನ್ನು ಒಂಟಿಯಾಗಿ ಇರಬೇಕು ಎಂದು ಇಷ್ಟ ಪಡುವುದಿಲ್ಲ. ಎಕೆಂದರೆ ತನ್ನ ಕಷ್ಟ ಸುಖವನ್ನು ಎಲ್ಲಾರ ಜೊತೆ ಹೇಳಿಕೊಳ್ಳಬೇಕು ಎಂದು ಮಾನವಬಯಸುತ್ತಾನೆ. ಹೀಗಾಗಿ ಮನುಷ್ಯ ಮೊದಲು ನೋಡುವುದು ಒಳ್ಳೆಯ ಸ್ನೇಹಿತನನ್ನು.
ಎಲ್ಲೋ ಅಪರಿಚಿತರಾಗಿ ಇದ್ದವರು ಪರಿಚಯವಾಗಿ ಸ್ನೇಹ ಬೆಳೆಯುತ್ತಾರೆ, ಸ್ನೇಹ ಎಂದರೆ ತಿಳಿನೀರ ಕೊಳದಂತೆ ನಿಶ್ಕಲ್ಮಶವಾಗಿರಬೇಕು. ನಮಗೆ ನಾವೇ ಹಿಡಿದ ಕನ್ನಡಿಯಂತಿರಬೇಕು ನಮ್ಮ ಮನಸ್ಸಿನ ಭಾವನೆಯನ್ನು ನಾವೇ ಹೇಳುವ ಮುನ್ನ ಆದನ್ನು ಆರ್ಥ ಮಾಡಿಕೊಳ್ಳುವಂತಹ ಒಳ್ಳೆಯ ಮನಸ್ಸು ಇರಬೇಕು. ತಪ್ಪುಗಳನ್ನು ತಿದ್ದಿ ಬುದ್ದಿ ಹೇಳಿ ಸರಿದಾರಿಯತ್ತ ಮುನ್ನಡೆಸುವ ಶಿಕ್ಷಕರಂತಿರಬೇಕು.ತನ್ನ ಎಲ್ಲಾ ಸುಖ-ದು:ಖಕ್ಕೆ ಸ್ಪಂದಿಸಿವಂತ ಸ್ನೇಹವನ್ನು ನಾವು ಬಯಸುತ್ತೆವೇ ಅಲ್ಲವ ಸ್ನೇಹಿತರೇ.
ಸ್ನೇಹ ಎಂಬ ಸಂಬಂಧದಲ್ಲಿ ನಂಬಿಕೆ ಎನ್ನುವುದು ಬಹಳ ಮುಖ್ಯ. ಆ ನಂಬಿಕೆಗೆ ಯಾವತ್ತೂ ದಕ್ಕೆ ಭಾರದಂತೆ ನಡೆದುಕೊಳ್ಳುವಂತಹ ಮನಸ್ಥಿತಿ ಇರಬೇಕು. ನಂಬಿಕೆ, ವಿಶ್ವಾಸ, ಸಹಕಾರ, ಮನೋಭಾವ ಇವೆಲ್ಲವೂ ಇದ್ದರೆ ಮಾತ್ರ ಸ್ನೇಹ ಎಂಬ ಎರಡಕ್ಷರಕ್ಕೆ ಬೆಲೆ.ಅಂತಹ ಸ್ನೇಹದಲ್ಲಿ ಮೋಸ ಕಪಟ ಎಂಬುದು ಇರುವುದಿಲ್ಲ.
ಇಂದಿನ ಜಗತ್ತು ಅಧುನಿಕಾರಣವನ್ನು ಅರಸುತ್ತ ಹೋಗುವ ಜಗತ್ತಾಗಿರುವುದು ನಮ್ಮಲ್ಲರಿಗೂ ತಿಳಿದಿರುವ ವಿಷಯ. ಅಗಿರುವಾಗ ಸ್ನೇಹ ಎಂಬ ವಿಶ್ವಾಸವು ಬದಲಾವಣೆಯಾಗುತ್ತದೆ ಎಂಬುದನ್ನು ನಾವು ನಂಬಲಬೇಕಾಗಿದೆ. ನಾವು ಅಂದುಕೊಂಡಂತಹ ಸ್ನೇಹವು ಈಗ ಮರಿಚಿಕೆಯಾಗುತ್ತಿದೆ. ಈಗಿನ ಸ್ನೇಹ ಕೇವಲ ಸ್ವಾರ್ಥದಿಂದ ಕೂಡಿರುತ್ತದೆ. ಹೆಸರಿಗಷ್ಟೆ ಸ್ನೇಹಿತರು ಮನದಲ್ಲಿ ಬರೀ ಅಸೂಯೆ ತುಂಬಿರುತ್ತದೆ. ಇಂತಹ ಭಾವನೆವು ಕೆಲವಷ್ಟು ಸ್ನೇಹವನ್ನು ಬಯಸುವವರಲ್ಲಿ ಇರುತ್ತದೆ. ಅದರೆ ಇವತ್ತಿಗೂ ಕೆಲವಷ್ಟು ಒಳ್ಳೆಯ ಸ್ನೇಹಿತರನ್ನು ನಾವು ಕಾಣಬಹುದು ಅವರಲ್ಲಿ ಉತ್ತಮ ಗುಣಗಳು ತುಂಬಿರುತ್ತದೆ.ತನ್ನ ಸ್ನೇಹಿತನ ಕಷ್ಟಕ್ಕೆ ಬೆಂಬಲವಾಗಿ ಸುಖದಲ್ಲಿ ಸಂತೋಷ ಪಡುವ ವ್ಯಕ್ತಿ ಕೆಲವಷ್ಟು ಜನರು ಇದ್ದರೆ.
ಅದರೆ ಕೆಲವೊಂದು ಬಾರಿ ಜೀವನದಲ್ಲಿ ಸ್ನೇಹಿತರನ್ನು ಆಯ್ಕೆ ಮಾಡುವುದರಲ್ಲಿ ಎಡವಿಬೀಳುತ್ತೇವೆ .ಕೆಲವೊಂದು ಸ್ನೇಹಿತರು ಗೋಮುಖ ವ್ಯಾಘ್ರದಂತೆ ಇರುತ್ತಾರೆ. ಸ್ನೇಹ ಎಂಬ ಬಣ್ಣವನ್ನು ಹಚ್ಚಿ ಒಳಸಂಚು ನಡೆಸುತ್ತಿರುತ್ತಾರೆ.
ನಮ್ಮೊಂದಿಗೆ ನಮ್ಮವರಂತೆಯೇ ಇದ್ದುಕೊಂಡೆ ನಗುನಗುತ್ತಲೇ ಬೆನ್ನಿಗೆ ಚೂರಿ ಹಾಕುತ್ತಾರೆ. ಅವರ ಒಳಸಂಚು ಗೊತ್ತಿಲ್ಲದೆ ನಾವು ಮೋಸ ಹೋಗುತ್ತೇವೆ. ಅತಿಯಾದರೆ ಅಮೃತವೂ ವಿಷ ಎಂಬಂತೆ ಇನ್ನೊಬ್ಬರ ಮೇಲಿನ ಅತಿಯಾದ ನಂಬಿಕೆ, ವಿಶ್ವಾಸ ನಮಗೆ ಮುಲ್ಲಾಗುತ್ತದೆ.ಇದು ಮಾತ್ರ ನಿಜವಾದ ಸಂಗತಿ ಅಲ್ಲವೇ ಸ್ನೇಹಿತರೇ.
ಅವರವರ ಆವಶ್ಯಕತೆಗೆ ತಕ್ಕಂತೆ ನಮ್ಮನ್ನು ಬಳಸಿಕೊಂಡು ನಮ್ಮ ಆವಶ್ಯಕತೆ ಆವರಿಗೆ ಮುಗಿದ ಮೇಲೆ ಪರಿಚಯವೇ ಇಲ್ಲದ ಹಾಗೆ ವರ್ತಿಸುತ್ತಾರೆ. ಅಪರಿಚಿತರಾಗಿ ಬಂದವರು ಅಪರಿಚತರಾಗಿಯೇ ಹೊರಟು ಹೋಗುತ್ತಾರೆ. ಸ್ನೇಹ ಎಂಬ ವಿಶ್ವಾಸಕ್ಕೆ ಒಂದು ಕಪ್ಪು ಬಣ್ಣವನ್ನು ಹಚ್ಚಿ ಹೊರಟು ಹೋಗುತ್ತಾರೆ. ಸ್ನೇಹ ಎಂಬ ಹೆಸರನ್ನು ಉಪಯೋಗಿಸಿ ಸ್ನೇಹದ ಆರ್ಥವನ್ನೇ ಅನಾರ್ಥ ಮಾಡುತ್ತಾರೆ.
ಅಂತಹ ಕೆಲವು ವ್ಯಕ್ತಿಗಳ ವರ್ತಿನೆಯಿಂದ ಸ್ನೇಹ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳುವುದು ಎಷ್ಟರ ಮಟ್ಟಿಗೆ ಒಳಿತು? ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳುವಂತೆ ಮಾಡುತ್ತದೆ.ದುಷ್ಟರನ್ನು ಕಂಡರೆ ದೂರವಿರು ಎಂಬ ಗಾದೆ ಮಾತಿನಂತೆ ನಾವು ಅಂತಹ ಕೆಟ್ಟ ಜನರಿಂದ ದೂರವಿರುವುದರಿಂದನಮ್ಮಲ್ಲಾರಿಗೂ ಉತ್ತಮ.. ಹೀಗಾಗಿ ನಾವು ನಮ್ಮ ಮನಸ್ಸಿನ ಕಷ್ಟ ಸುಖವನ್ನು ಹಂಚಿಕೊಳ್ಳಲು ಉತ್ತಮ ಸ್ನೇಹಿತನನ್ನು ನೋಡುವ ಸ್ನೇಹಿತರೇ.
ಕವಿತಾ
ತೃತೀಯ ಪತ್ರಿಕೋದ್ಯಮ
ವಿವೇಕಾನಂದಕಾಲೇಜು
ನೆಹರು ನಗರ, ಪುತ್ತೂರು