Recent Posts

Friday, November 22, 2024
ಸುದ್ದಿ

ಮಂಗಳೂರು ಉಪ ವಿಭಾಗ -2 ಅಬಕಾರಿ ಆಯುಕ್ತರಿಂದ‌ ದಾಳಿ ; ಅಕ್ರಮ ಮದ್ಯ ಹಾಗೂ ದ್ವಿಚಕ್ರ ವಾಹನ ವಶಕ್ಕೆ- ಕಹಳೆ ನ್ಯೂಸ್

ಮಂಗಳೂರು : ಕೋವಿಡ್ -19 ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಮಾನ್ಯ ಅಬಕಾರಿ ಉಪ ಆಯುಕ್ತರು , ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರುರವರ ನಿರ್ದೇಶನದ ಮೇರೆಗೆ, ಕಾವೂರು ಪರಿಸರದಲ್ಲಿ ರಸ್ತೆಗಾವಲು ನಡೆಸುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಮಯದಲ್ಲಿ ದ್ವಿಚಕ್ರ ವಾಹನ ಅಕ್ಟಿವಾ ಹೊಂಡಾ ಇದರಲ್ಲಿ ಅಕ್ರಮವಾಗಿ 7.920 ಲೀ ಮದ್ಯವನ್ನು ಮಾರಾಟದ ಉದ್ದೇಶಕ್ಕಾಗಿ ಸಾಗಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿ ಅಕ್ರಮ ಮದ್ಯ ಹಾಗೂ ವಾಹನವನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ದಾಳಿ ನಡೆಸಿದ ಸಂದರ್ಭದಲ್ಲಿ ಆರೋಪಿಯೂ ಪರಾರಿಯಾಗಿದ್ದು, ಸುಮಾರು 7.920 ಲೀ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ . ವಶಪಡಿಸಿ ಕೊಂಡಿರುವ ಸೊತ್ತುಗಳ ಒಟ್ಟು ಮೌಲ್ಯ ಸುಮಾರು ರೂ . 43,091 / – ಎಂದು ಅಂದಾಜಿಸಲಾಗಿದೆ. ಸದ್ರಿ ಪ್ರಕರಣವನ್ನು ಅಬಕಾರಿ ಉಪ ಅಧೀಕ್ಷಕರು ಮಂಗಳೂರು ಉಪವಿಭಾಗ -2 ರವರಾದ ಶ್ರೀ ಅಮರ್ ನಾಥ , ಎಸ್‌.ಎಸ್‌ . ಭಂಡಾರಿ ಇವರು ಮೊಕದ್ದಮೆಯನ್ನು ದಾಖಲುಮಾಡಿರುತ್ತಾರೆ . ಈ ವೇಳೆಯಲ್ಲಿ ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಶ್ರೀಮತಿ ಬಿಂದುಶ್ರೀ.ಪಿ ರವರ ನಿರ್ದೇಶನದ ಮೇರೆಗೆ , ಅಬಕಾರಿ ಉಪ ಅಧೀಕ್ಷಕರಾದ ಶ್ರೀ ಅಮರ್ ನಾಥ ಎಸ್.ಎಸ್ . ಭಂಡಾರಿ ಇವರ ನೇತ್ರತ್ವದಲ್ಲಿ ಮಂಗಳೂರು ಉಪ ವಿಭಾಗದ ಅಬಕಾರಿ ಪೇದೆ ಯವರಾದ ಶ್ರೀ.ಜಯಪ್ಪ ಲಮಾಣಿ ಹಾಗೂ ಶ್ರೀ ಸಂತೋಷ್ ಎಂ . ಡಂಬ್ರಳ್ಳಿ ಮತ್ತು ಚಾಲಕರಾದ ಶ್ರೀ.ಕೆ. ಮಾಯಿಲಪ್ಪ ರವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು