ಉಪ್ಪಿನಂಗಡಿ : ಕರಾವಳಿಯಲ್ಲಿ ಚಂಡಮಾರುತ ಅಬ್ಬರ ಇಳಿಕೆಯಾದ ನಂತರ ಇದೀಗ ಸ್ವಲ್ಪ ಮಟ್ಟಿಗೆ ಮಳೆಕಾಲ ಆರಂಭ ಆದ ಮುನ್ಸೂಚನೆ ಕಂಡು ಬರುತ್ತಿದ್ದು, ಪ್ರತಿನಿತ್ಯ ಜಿಲ್ಲೆಯಾದ್ಯಂತ ಮಳೆಯಾಗಿತ್ತಿದೆ. ಈ ಮಧ್ಯೆ ಕಾಮಲಬಿಲ್ಲೊಂದು ಬಾನಿನಂಗಳದಲ್ಲಿ ಮೂಡಿ ಜನರ ಚಿತ್ತವನ್ನು ಅತ್ತ ಸೆಳೆದಿದೆ.
ಇಳಂತಿಲದ ವಿಲ್ಮಾ ಪ್ರಿಯಾಂಕ ಡಿಸೋಜ ಅವರು ತಮ್ಮ Oneplus ಫೋನಿನಲ್ಲಿ ಈ ಅಪೂರ್ವ ಚಿತ್ರವನ್ನು ಸೆರೆಹಿಡಿದಿದ್ದು, ಪ್ರಕೃತಿ ಪ್ರೇಮಿಗಳ ಪ್ರಶಂಸೆಗೆ ಕಾರಣವಾಗಿದೆ.
ಒಟ್ಟಿನಲ್ಲಿ ಕೊರೋನಾ ಮಧ್ಯೆ ಕಾಮನಬಿಲ್ಲು ಆಗಸದಲ್ಲಿ ಕಾಣಿಸಿಕೊಂಡು ಜನರ ಚಿತ್ತಾಕರ್ಷಕವಾಗಿಸಿದೆ.