ಧಾರ್ಮಿಕ ಸೇವಾ ಸಮಿತಿ ಪಂಜಿಮೊಗರು ವತಿಯಿಂದ ಕೂಳೂರು ಪರಿಸರದ ಬಡಕುಟುಂಬಗಳಿಗೆ ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿಯವರ ನೇತೃತ್ವದಲ್ಲಿ ದಿನಸಿ ಸಾಮಾಗ್ರಿಗಳ ಕಿಟ್ ವಿತರಣೆ- ಕಹಳೆ ನ್ಯೂಸ್
ಮಂಗಳೂರು : ಧಾರ್ಮಿಕ ಸೇವಾ ಸಮಿತಿ ಪಂಜಿ ಮೊಗರು ಇದರ ವತಿಯಿಂದ ಕೂಳೂರು ಬೀಡಿನ ಪರಿಸರದ ಲಾಕ್ ಡೌನ್ ಸಮಯದಲ್ಲಿ ಕೆಲಸವಿಲ್ಲದೆ ತೊಂದರೆಗೆ ಒಳಗಾದ ಸುಮಾರು 40 ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳ ಕಿಟ್ ಗಳನ್ನು ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿಯವರ ನೇತೃತ್ವದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಕೋಶಾಧಿಕಾರಿಗಳಾದ ಭಾಸ್ಕರ್ ಕೋಟ್ಯಾನ್, ವಿವೇಕಾನಂದ ಸುವರ್ಣ, ಸದಸ್ಯರುಗಳಾದ ಲೋಕೇಶ ಕೋಟ್ಯಾನ್, ಚಂದ್ರಹಾಸ ಸುವರ್ಣ, ಗಿರಿಧರ ಸುವರ್ಣ, ಶಶಿಧರ್ ಶೆಟ್ಟಿ, ಮಧುರಾಜ್ ಶೆಟ್ಟಿ, ಪದ್ಮನಾಭ ಸುವರ್ಣ, ನವೀನ್ ಶೆಟ್ಟಿ, ವಿಶ್ವನಾಥ್ ಕೈರಂಗಳ, ಸುಕುಮಾರ್ ಸುವರ್ಣ ಉಪಸ್ಥಿತರಿದರು.