Saturday, November 23, 2024
ದಕ್ಷಿಣ ಕನ್ನಡಸುದ್ದಿ

ರೈತರ ಬೆಳೆಯನ್ನು ಸೂಕ್ತ ಬೆಲೆ ನೀಡಿ ಖರೀದಿಸಲು ಮುಂದಾದ ಮಂಗಳೂರಿನ ಯುವ‌ ಉದ್ಯಮಿ ವಿವೇಕ್ ರಾಜ್ ಪೂಜಾರಿ – ಕಹಳೆ ನ್ಯೂಸ್

ಮಂಗಳೂರು, ಜೂ.07 : ಬೆಲೆ ಇಲ್ಲದೇ ಕಂಗಲಾದ ರೈತರ ಬೆಳೆಯನ್ನು ಸೂಕ್ತ ಬೆಲೆ ನೀಡಿ ಖರೀದಿಸಲು ಮಂಗಳೂರಿನ ಯುವ‌ ಉದ್ಯಮಿ ವಿವೇಕ್ ರಾಜ್ ಪೂಜಾರಿ ಮುಂದಾಗಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

 

 

 

 

 

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ರೈತರು ತಾವು ಬೆಳೆದ ತರಕಾರಿ, ಹಣ್ಣುಗಳನ್ನು ಖರೀದಿಸಲು ಯಾರು ಮುಂದೆ ಬಾರದೇ ಇರುವುದರಿಂದ ತಮ್ಮ ಬೆಳೆಗಳನ್ನು ಬೀದಿಗೆ ಸುರಿಯುವುದನ್ನು ನೋಡಿದ್ದೇನೆ. ಇನ್ನು ಮುಂದಕ್ಕೆ ರೈತರು ತಾವು ಬೆಳೆದ ಬೆಳೆದ ತರಕಾರಿ, ಹಣ್ಣುಗಳನ್ನು ನಮ್ಮ ಸಂಸ್ಥೆಯ ಸಿಬ್ಬಂದಿಗೆ, ಅವರ ಸ್ಥಳಗಳಿಗೆ ಫಾರ್ಮ್‌‌ಗಳಿಗೆ ಬಂದು ನಮ್ಮ ಪನಾಮ ಕಂಪೆನಿ ಖರೀದಿ ಮಾಡಲಿದೆ. ಅಂತಹ ರೈತರಿಗೆ ಸೂಕ್ತ ಬೆಲೆ ನೀಡಿ ಖರೀದಿಸುವ ಮೂಲಕ ಅವರಿಗೆ ಸಹಾಯ ನೀಡಲಿದೆ ಎಂದು ಮಂಗಳೂರಲ್ಲಿ ಪನಮಾ ನೇಚರ್ ಫ್ರೆಶ್ ಸಂಸ್ಥೆಯ ಅಧ್ಯಕ್ಷ ವಿವೇಕ್ ರಾಜ್ ಹೇಳಿದ್ದಾರೆ.

ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸುಮಾರು 75 ಕೋಟಿ ರೂಪಾಯಿ ವೆಚ್ಚದಲ್ಲಿ ಕೃಷಿಕರು ಬೆಳೆದ ಉತ್ಪನ್ನಗಳನ್ನು ಖರೀದಿಸುವ ಯೋಜನೆಯನ್ನು ಕೈಗೊಂಡಿದ್ದೇನೆ. ಕೊರೊನಾದಿಂದ ಜನಜೀವನ ಸರಿಯಾಗಲು ಬಹಳ ಸಮಯ ಹಿಡಿಯಲಿದೆ. ಹೀಗಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗಲು ಮುಂಜಾಗ್ರತಾ ಕ್ರಮವಾಗಿ 50 ಲಕ್ಷವನ್ನು ಇಟ್ಟಿದ್ದೇನೆ” ಎಂದಿದ್ದಾರೆ.

ಇನ್ನು “ಈವರೆಗೆ 16,೦೦೦ ಮಂದಿಗೆ ಊಟ, ಸುಮಾರು 4,350 ಕುಟುಂಬದವರಿಗೆ ಮತ್ತು ದಿನಗೂಲಿ ನೌಕರರಿಗೆ ಕಿಟ್ ಗಳನ್ನೂ ನೀಡಲಾಗಿದೆ. ಜೊತೆಗೆ ಹಲವು ಬಡ ಕುಟುಂಬಗಳ ಆಸ್ಪತ್ರೆ ಚಿಕಿತ್ಸಾ ವೆಚ್ಚವನ್ನು ಸಹ ಪನಾಮ ಕಂಪೆನಿ ವತಿಯಿಂದ ಭರಿಸಲಾಗಿದೆ. ಪ್ರಸಕ್ತ ತಮ್ಮ ಕಡೆಯಿಂದ ನೀಡುವ ಕಿಟ್ ಒಂದು ಕುಟುಂಬಕ್ಕೆ 15 ದಿನಗಳ ಕಾಲ ಉಪಯೋಗಕ್ಕೆ ಬರಲಿದೆ. ಇದು ಹಲವು ಕುಟುಂಬಗಳಿಗೆ ಸಹಾಯವಾಗಲಿದೆ” ಎಂದರು.

ಕಳೆದ ಲಾಕ್‌‌ಡೌನ್ ವೇಳೆ ಸುಮಾರು 14,000 ಮಂದಿಗೆ ಬೀದಿ ಬದಿ ಊಟ ವಿತರಿಸಿದ್ದೇವೆ. 2000 ಮಂದಿಗೆ ಕಿಟ್, 12 ಮಂದಿಗೆ ಮಾರಲು ತಳ್ಳುಗಾಡಿಯಲ್ಲಿ ಗಾಡಿ ತುಂಬಾ ತರಕಾರಿ ಮತ್ತು 50 ದೊಡ್ಡ ದೊಡ್ಡ ಕೊಡೆಗಳನ್ನು ಉಚಿತವಾಗಿ ನೀಡಲಾಗಿತ್ತು ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರಜಾಕ್ ಸೇರಿ ಇತರರು ಉಪಸ್ಥಿತರಿದ್ದರು.